ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2023 ಎಲಿಮಿನೇಟರ್‌ ಪಂದ್ಯ: ಲಖನೌಗೆ 183 ರನ್‌ಗಳ ಗೆಲುವಿನ ಗುರಿ ನೀಡಿದ ಮುಂಬೈ

Published 24 ಮೇ 2023, 16:03 IST
Last Updated 24 ಮೇ 2023, 16:03 IST
ಅಕ್ಷರ ಗಾತ್ರ

ಚೆನ್ನೈ: ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ಲಖನೌಗೆ 183ರನ್‌ಗಳ ಗೆಲುವಿನ ಗುರಿ ನೀಡಿದೆ.

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿತು. ಈ ಪಂದ್ಯ ಗೆಲ್ಲಲು ಲಖನೌ 183 ರನ್‌ ಗಳಿಸಬೇಕಿದೆ.

ಕ್ಯಾಮರೆನ್‌ ಗ್ರಿನ್‌ 41, ಸೂರ್ಯಕುಮಾರ್ ಯಾದವ್‌ 33, ತಿಲಕ್‌ ವರ್ಮಾ 26 ರನ್‌ ಗಳಿಸಿ ಗಮನ ಸೆಳೆದರು. ಲಖನೌ ಪರ ನವೀನ್‌ 3, ಠಾಕೂರ್ 2, ಬಿಷ್ಣೋಯಿ 1 ವಿಕೆಟ್‌ ಪಡೆದರು. 

ಪ್ಲೇ ಆಫ್‌ಗೆ ‘ನಾಟಕೀಯ’ ರೀತಿಯಲ್ಲಿ ಮುಂಬೈ ಇಂಡಿಯನ್ಸ್‌ ಪ್ರವೇಶ ಪಡೆದಿತ್ತು. 

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆಲುವು ಸಾಧಿಸುವ ತಂಡ ಮೇ 26 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ‘ಕ್ವಾಲಿಫೈಯರ್‌–2’ ಪಂದ್ಯದಲ್ಲಿ ಆಡಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT