ಕೋಲ್ಕತ್ತ: ಶಾರ್ದೂಲ್ ಠಾಕೂರ್ ಸಿಡಿಸಿದ ಅಮೋಘ 68 ರನ್‌ಗಳ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 81 ರನ್‌ಗಳ ಅಂತರದಿಂದ ಜಯಿಸಿತು.

ಆರ್‌ಸಿಬಿ 17.4 ಓವರ್‌ನಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 123 ರನ್ ಗಳನ್ನು ಕಲೆ ಹಾಕಲು ಮಾತ್ರ ಸಾಧ್ಯವಾಯಿತು.

29 ಎಸೆತಗಳನ್ನು ಎದುರಿಸಿದ ಠಾಕೂರ್ 9 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 68 ರನ್ ಸಿಡಿಸಿದರು. ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಮಾಜ್ 44 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಮಧ್ಯಮ ಕ್ರಮಾಂಕದ ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಕೊನೆಯ 10 ಓವರ್‌ಗಳಲ್ಲಿ 120ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಆರ್‌ಸಿಬಿ ಬೌಲರ್‌ಗಳು ಕೆಕೆಆರ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು.

20 ಓವರ್‌ಗಳ ಅಂತ್ಯಕ್ಕೆ ಕೋಲ್ಕತ್ತ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು.

ಆರ್‌ಸಿಬಿ ಪರ ಡೇವಿಡ್ ವಿಲ್ಲಿ 4 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದರು. ಕರ್ಣ ಶರ್ಮಾ 29 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:

ಕೆಕೆಆರ್: 204/7

* ಶಾರ್ದೂಲ್ ಠಾಕೂರ್: 68 ರನ್
* ರೆಹಮನುಲ್ಲಾ ಗುರ್ಮಾಜ್: 57 ರನ್
* ರಿಂಕು ಸಿಂಗ್: 46 ರನ್

ಬೌಲಿಂಗ್:

ಡೇವಿಡ್ ವಿಲ್ಲಿ: 16/2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.