ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಸನ್‌ರೈಸರ್ಸ್ ಬ್ಯಾಟರ್‌ಗಳನ್ನು 162 ರನ್‌ಗೆ ಕಟ್ಟಿಹಾಕಿದ ಟೈಟನ್ಸ್

Published 31 ಮಾರ್ಚ್ 2024, 9:53 IST
Last Updated 31 ಮಾರ್ಚ್ 2024, 9:53 IST
ಅಕ್ಷರ ಗಾತ್ರ

ಅಹಮದಾಬಾದ್: ಈ ಬಾರಿಯ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡವು ಬೃಹತ್‌ ಮೊತ್ತ ಗಳಿಸದಂತೆ ಗುಜರಾತ್‌ ಟೈಟನ್ಸ್ (ಜಿಟಿ) ಪಡೆ ನಿಯಂತ್ರಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162 ರನ್‌ ಗಳಿಸಿದೆ.

ಮುಂಬೈ ಇಂಡಿಯನ್ಸ್‌ ಎದುರು ನಡೆದ ಕಳೆದ ಪಂದ್ಯದಲ್ಲಿ 277 ರನ್‌ ಕಲೆಹಾಕುವ ಮೂಲಕ, ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ರನ್‌ ಗಳಿಸಿ ದಾಖಲೆ ಬರೆದಿದ್ದ ಎಸ್‌ಆರ್‌ಎಚ್‌ ಬ್ಯಾಟರ್‌ಗಳಿಗೆ ಇಲ್ಲಿ ಲೀಲಾಜಾಲವಾಗಿ ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಶಿಸ್ತಿನ ದಾಳಿ ಸಂಘಟಿಸಿದ ಟೈಟನ್ಸ್‌ ಬೌಲರ್‌ಗಳು, ಯಾವೊಬ್ಬ ಬ್ಯಾಟರ್‌ ಗರಿಷ್ಠ 30 ರನ್‌ ಸಹ ಗಳಿಸದಂತೆ ನೋಡಿಕೊಂಡರು.

ಅಭಿಷೇಕ್‌ ಶರ್ಮಾ ಮತ್ತು ಅಬ್ದುಲ್‌ ಸಮದ್‌ ತಲಾ 29 ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ಇದರಿಂದಾಗಿ, ಪ್ಯಾಕ್‌ ಕಮಿನ್ಸ್‌ ತಂಡ 170 ರನ್‌ ಗಳಿಸುವುದಕ್ಕೂ ಸಾಧ್ಯವಾಗಲಿಲ್ಲ.

ಆತಿಥೇಯ ತಂಡದ ಪರ ಮೋಹಿತ್‌ ಶರ್ಮಾ 4 ಓವರ್‌ಗಳಲ್ಲಿ 25 ರನ್ ನೀಡಿ ಮೂರು ವಿಕೆಟ್‌ ಪಡೆದರು. ಅವರಿಗೆ ಉತ್ತಮ ಸಹಕಾರ ನೀಡಿದ ಅಝ್ಮತ್ತುಲ್ಲಾ ಒಮರ್ಝೈ, ಉಮೇಶ್‌ ಯಾದವ್‌, ರಶೀದ್‌ ಖಾನ್‌ ಮತ್ತು ನೂರ್ ಅಹ್ಮದ್‌ ತಲಾ ಒಂದು ವಿಕೆಟ್‌ ಕಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT