ಧರ್ಮಶಾಲಾ: ಪ್ರಭಸಿಮ್ರನ್ ಸಿಂಗ್ (91;48ಎ) ಅವರ ಅಬ್ಬರದ ಬ್ಯಾಟಿಂಗ್ ಬಳಿಕ ಅರ್ಷದೀಪ್ ಸಿಂಗ್ (16ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಭಾನುವಾರ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 37 ರನ್ಗಳ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕರಿಂದ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದು ಪ್ಲೇ ಆಫ್ಗೆ ಹತ್ತಿರವಾಯಿತು. ಮತ್ತೊಂದೆಡೆ ರಿಷಭ್ ಪಂತ್ ಸಾರಥ್ಯದ ಲಖನೌ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಯಿತು.

ಹಿಮಾಲಯದ ಮಡಿಲಲ್ಲಿರುವ ಎಚ್ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಭಸಿಮ್ರನ್ ಅವರ ಆಟದ ನೆರವಿನಿಂದ ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 236 ರನ್ ಗಳಿಸಿತು.

ಗುರಿಯನ್ನು ಬೆನ್ನಟ್ಟಿದ ಲಖನೌ ತಂಡಕ್ಕೆ ಆರಂಭದಲ್ಲೇ ಅರ್ಷದೀಪ್ ಸಿಂಗ್ ಬಲವಾದ ಪೆಟ್ಟು ನೀಡಿದರು. ತಂಡವು 27 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಏಡನ್ ಮರ್ಕರಂ (13), ಮಿಚೆಲ್ ಮಾರ್ಷ್ (0) ಮತ್ತು ನಿಕೋಲಸ್ ಪೂರನ್ (6) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ರಿಷಭ್ ಪಂತ್ (18) ಮತ್ತು ಡೇವಿಡ್ ಮಿಲ್ಲರ್ (11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಆದರೆ, ಯುವ ಬ್ಯಾಟರ್ ಆಯುಷ್ ಬಡೋನಿ (74;40ಎ, 4x5, 6x5) ಮತ್ತು ಅಬ್ದುಲ್ ಸಮದ್ (45;24ಎ, 4x2, 6x4) ಮಧ್ಯಮ ಕ್ರಮಾಂಕದಲ್ಲಿ ಪ್ರತಿರೋಧ ತೋರಿದರು. ಅವರಿಬ್ಬರು ಆರನೇ ವಿಕೆಟ್ ಜೊತೆಯಾಟದಲ್ಲಿ 81 (41ಎಸೆತ) ರನ್ ಸೇರಿಸಿದರೂ ಗೆಲುವಿನ ಗುರಿ ಬಹಳ ದೂರವಿತ್ತು. ಲಖನೌ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 199 ರನ್ ಗಳಿಸಿ ಸವಾಲನ್ನು ಕೊನೆಗೊಳಿಸಿತು.

ಪ್ರಭಸಿಮ್ರಾನ್ ಅಬ್ಬರ: ಪಂಜಾಬ್ ತಂಡದ ಆರಂಭಿಕ ಬ್ಯಾಟರ್ ಪ್ರಭಸಿಮ್ರನ್ ಕೇವಲ ಒಂಬತ್ತು ರನ್ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಅವರು ಈ ಆವೃತ್ತಿಯ 11 ಪಂದ್ಯಗಳಲ್ಲಿ ನಾಲ್ಕನೇ ಅರ್ಧಶತಕ ದಾಖಲಿಸಿದರು.

ಮೊದಲ ಓವರ್ನಲ್ಲಿಯೇ ಆಕಾಶ್ ಮಹಾರಾಜ್ ಸಿಂಗ್ ಎಸೆತವನ್ನು ಆಡುವ ಯತ್ನದಲ್ಲಿ ಪ್ರಿಯಾಂಶ್ ಆರ್ಯ (1) ಔಟಾದರು. ಈ ಪೆಟ್ಟಿನಿಂದ ತಂಡಕ್ಕೆ ಹಿನ್ನಡೆಯಾಗದಂತೆ ಪ್ರಭಸಿಮ್ರನ್ ನೋಡಿಕೊಂಡರು. ಜೋಷ್ ಇಂಗ್ಲಿಸ್ (30; 14ಎ) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ನಂತರ ನಾಯಕ ಶ್ರೇಯಸ್ ಅಯ್ಯರ್ (45; 25ಎ, 4X4, 6X2) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ವೇದಿಕೆ ಸಿದ್ಧವಾಯಿತು.

ಭರವಸೆಯ ಸ್ಪಿನ್ನರ್ ದಿಗ್ವೇಶ್ ರಾಠಿ ಅವರು 13ನೇ ಓವರ್ನಲ್ಲಿ ಶ್ರೇಯಸ್ ಅವರ ವಿಕೆಟ್ ಗಳಿಸಿ ಮತ್ತೊಮ್ಮೆ ನೋಟ್ಬುಕ್ ಸಂಭ್ರಮ ಆಚರಿಸಿದರು. ಶತಕದತ್ತ ಸಾಗಿದ್ದ ಪ್ರಭಸಿಮ್ರನ್ ಅವರನ್ನೂ 19ನೇ ಓವರ್ನಲ್ಲಿ ಔಟ್ ಮಾಡಿದ ದಿಗ್ವೇಶ್ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್ಗಳಲ್ಲಿ 5ಕ್ಕೆ236 (ಪ್ರಭಸಿಮ್ರನ್ ಸಿಂಗ್ 91, ಜೋಶ್ ಇಂಗ್ಲಿಸ್ 30, ಶ್ರೇಯಸ್ ಅಯ್ಯರ್ 45, ಶಶಾಂಕ್ ಸಿಂಗ್ ಔಟಾಗದೇ 33, ಆಕಾಶ್ ಮಹಾರಾಜ ಸಿಂಗ್ 30ಕ್ಕೆ2, ದಿಗ್ವೇಶ್ ರಾಠಿ 46ಕ್ಕೆ2) ಲಖನೌ ಸೂಪರ್ಜೈಂಟ್ಸ್: 20 ಓವರ್ಗಳಲ್ಲಿ 7ಕ್ಕೆ 199 (ಆಯುಷ್ ಬಡೋನಿ 74, ಅಬ್ದುಲ್ ಸಮದ್ 45, ಆವೇಶ್ ಖಾನ್ ಔಟಾಗದೇ 19; ಅರ್ಷದೀಪ್ ಸಿಂಗ್ 16ಕ್ಕೆ 3, ಅಜ್ಮತ್ವುಲ್ಲಾ ಒಮರ್ಜೈ 33ಕ್ಕೆ 2). ಪಂದ್ಯದ ಆಟಗಾರ
.ಲಖನೌ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ; ದುಬಾರಿ ನಾಯಕರ ಮುಖಾಮುಖಿ ಇಂದು .IPL 2025 | KKR vs RR: ಪರಾಗ್ ಹೋರಾಟ ವ್ಯರ್ಥ; ಕೆಕೆಆರ್ಗೆ 1 ರನ್ನಿನ ರೋಚಕ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.