ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 17 ರನ್ ಬೇಕಿತ್ತು. ರವಿಂದ್ರ ಜಡೇಜಾ ಎಸೆದ ಈ ಓವರ್ನಲ್ಲಿ ಮೂರು ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ ಅಕ್ಷರ್ ಪಟೇಲ್ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಆಡಿರುವ 9 ಪಂದ್ಯಗಳಲ್ಲಿ ಡೆಲ್ಲಿಗೆ ಇದು 7ನೇ ಗೆಲುವು. ಇದರೊಂದಿಗೆ ಈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.

ಬೌಲರ್: ರವೀಂದ್ರ ಜಡೇಜಾ (1 6 6 2 6 )

19 ಓವರ್ಗಳ ಅಂತ್ಯಕ್ಕೆ ಡೆಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿದೆ. ಚೊಚ್ಚಲ ಶತಕ ಬಾರಿಸಿದ ಧವನ್ (100) ಮತ್ತು ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದು, ಗೆಲ್ಲಲು ಬಾಕಿ ಇರುವ 6 ಎಸೆತಗಳಲ್ಲಿ 17 ರನ್ ಬೇಕಾಗಿದೆ.

ಬೌಲರ್: ಸ್ಯಾಮ್ ಕರನ್ (W 0 Wd 1 1 0 1)

19ನೇ ಓವರ್ನ ಮೊದಲ ಎಸೆತದಲ್ಲೇ ಅಲೆಕ್ಸ್ ಕಾರಿ (4) ಔಟಾಗಿದ್ದಾರೆ. ಇನ್ನು 11 ಎಸೆತಗಳಲ್ಲಿ 21 ರನ್ ಬೇಕಾಗಿದೆ.

ಬೌಲರ್: ಸ್ಯಾಮ್ ಕರನ್

18 ಓವರ್ಗಳ ಅಂತ್ಯಕ್ಕೆ ಡೆಲ್ಲಿ, 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ಕೇವಲ 53 ಎಸೆತಗಳನ್ನು ಆಡಿರುವ ಶಿಖರ್ ಧವನ್ 98 ರನ್ ಗಳಿಸಿ ಶತಕದ ಹೊಸ್ತಿಲಲ್ಲಿದ್ದಾರೆ.

ಬೌಲರ್: ಶಾರ್ದೂಲ್ ಠಾಕೂರ್ (0 6 0 1 4 1)

17 ಓವರ್ಗಳ ಆಟ ಮುಗಿದಿದ್ದು, ಕ್ಯಾಪಿಟಲ್ಸ್ 4 ವಿಕೆಟ್ಗೆ 150 ರನ್ ಗಳಿಸಿದೆ. ಉಳಿದಿರುವ 3 ಓವರ್ಗಳಲ್ಲಿ 30 ರನ್ ಬೇಕಾಗಿದೆ.

ಬೌಲರ್: ಸ್ಯಾಮ್ ಕರನ್ (1 2 1 1 0 1)

16 ಓವರ್ಗಳ ಅಂತ್ಯಕ್ಕೆ ಡೆಲ್ಲಿ 4 ವಿಕೆಟ್ಗೆ 139 ರನ್ ಗಳಿಸಿದೆ. 24 ರನ್ ಗಳಿಸಿದ್ದ ಮಾರ್ಕಸ್ ಸ್ಟೋಯಿನಸ್ ಈ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಐದನೇ ಕ್ರಮಾಂಕದಲ್ಲಿ ಅಲೆಕ್ಸ್ ಕಾರಿ ಕ್ರೀಸ್ಗೆ ಬಂದಿದ್ದು, ಉಳಿದಿರುವ 24 ಎಸೆತಗಳಲ್ಲಿ 41 ರನ್ ಗಳಿಸಬೇಕಿದೆ.

ಬೌಲರ್: ಶಾರ್ದೂಲ್ ಠಾಕೂರ್ (0 1 1 6 4 1)

15 ಓವರ್ಗಳ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದೆ. ಐದು ಓವರ್ಗಳ ಆಟ ಬಾಕಿ ಇದ್ದು, ಗೆಲ್ಲಲು 31 ರನ್ ಬೇಕಾಗಿದೆ.
ಬೌಲರ್: ಕರಣ್ ಶರ್ಮಾ (0 1 1 6 4 1)

14 ಓವರ್ಗಳ ಅಂತ್ಯಕ್ಕೆ ಡೆಲ್ಲಿ, 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಧವನ್ ಮತ್ತು ಸ್ಟೋಯಿನಸ್ ಕ್ರೀಸ್ನಲ್ಲಿದ್ದು, ಉಳಿದಿರುವ 6 ಓವರ್ಗಳಲ್ಲಿ 62 ರನ್ ಬೇಕಾಗಿದೆ.

ಬೌಲರ್: ಡ್ವೇನ್ ಬ್ರಾವೋ (1 4 1 1 0 2)

ಡೆಲ್ಲಿ ತಂಡ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ, ಚೆನ್ನೈ 14ನೇ ಓವರ್ನಲ್ಲಿ ನೂರರ ಗಡಿ ದಾಟಿತ್ತು.

ಬೌಲರ್: ಕರಣ್ ಶರ್ಮಾ (0 1 1 6 4 1)

23 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ 12ನೇ ಓವರ್ನಲ್ಲಿ ಔಟಾಗಿದ್ದಾರೆ. ಸದ್ಯ ಡೆಲ್ಲಿ ತಂಡ 3 ವಿಕೆಟ್ಗೆ 96 ರನ್ ಗಳಿಸಿದ್ದು, ಉಳಿದಿರುವ 48 ಎಸೆತಗಳಲ್ಲಿ 84 ರನ್ ಗಳಿಸಬೇಕಿದೆ.

ಧವನ್ ಮತ್ತು ಮಾರ್ಕಸ್ ಸ್ಟೋಯಿನಸ್ ಕ್ರೀಸ್ನಲ್ಲಿದ್ದಾರೆ.

ಬೌಲರ್: ಡ್ವೇನ್ ಬ್ರಾವೋ (4 2 W 1 0 1)

ಡೆಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.

ಬೌಲರ್: ಸ್ಯಾಮ್ ಕರನ್ (4 1 1 4 1 1)

10ನೇ ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ 76 ರನ್ ಗಳಿಸಿದೆ.

ಇದೇ ವೇಳೆ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಐಪಿಎಲ್ನಲ್ಲಿ ತಮ್ಮ 40ನೇ ಅರ್ಧಶತಕ ದಾಖಲಿಸಿದ್ದಾರೆ.

ಬೌಲರ್: ಡ್ವೇನ್ ಬ್ರಾವೋ (Wd 1 1 1 0 1 1)

9 ಓವರ್ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್, 2 ವಿಕೆಟ್ಗೆ 70 ರನ್ ಗಳಿಸಿದೆ. ಅಯ್ಯರ್ ಮತ್ತು ಧವನ್ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಕಲೆಹಾಕಿದೆ.

ಬೌಲರ್: ಕರಣ್ ಶರ್ಮಾ (1 4 4 1 0 0)

8 ಓವರ್ನ ಅಂತ್ಯಕ್ಕೆ ಡೆಲ್ಲಿ 2 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ.

ಬೌಲರ್: ದೀಪಕ್ ಚಾಹರ್ (1 1 1 1 1 1)

7 ಓವರ್ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ಅರ್ಧಶತಕ ಪೂರೈಸಿದೆ.

ಸದ್ಯ ಡೆಲ್ಲಿ ಮೊತ್ತ 2 ವಿಕೆಟ್ಗೆ 54 ರನ್ ಆಗಿದ್ದು, ನಾಯಕ ಅಯ್ಯರ್ ಮತ್ತು ಶಿಖರ್ ಧವನ್ ಕ್ರೀಸ್ನಲ್ಲಿದ್ದಾರೆ.

ಬೌಲರ್: ರವೀಂದ್ರ ಜಡೇಜಾ (1 1 2 4 4 1)

ಡೆಲ್ಲಿ ತಂಡ 2 ವಿಕೆಟ್ಗೆ 42 ರನ್ ಗಳಿಸಿದೆ.

ಬೌಲರ್: ಶಾರ್ದೂಲ್ ಠಾಕೂರ್ (0 6 0 1 4 1)

ಚೆನ್ನೈ ನೀಡಿರುವ ಸವಾಲಿನ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ 5 ಓವರ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿದೆ.
ಮೊದಲ ಓವರ್ನಲ್ಲಿ ಪೃಥ್ವಿ ಶಾ (0) ಔಟಾಗಿದ್ದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಅಜಿಂಕ್ಯ ರಹಾನೆ (8) 5ನೇ ಓವರ್ನಲ್ಲಿ ಔಟಾಗಿದ್ದಾರೆ. ಈ ಇಬ್ಬರ ವಿಕೆಟ್ಗಳನ್ನು ದೀಪಕ್ ಚಾಹರ್ ಪಡೆದುಕೊಂಡರು.

ಇದೀಗ ಶ್ರೇಯಸ್ ಅಯ್ಯರ್ ಕ್ರೀಸ್ಗೆ ಬಂದಿದ್ದಾರೆ.

ಕಗಿಸೊ ರಬಾಡ ಎಸೆತದ ಇನಿಂಗ್ಸ್ನ 20ನೇ ಓವರ್ನಲ್ಲಿ ಚೆನ್ನೈ ಬ್ಯಾಟ್ಸ್ಮನ್ಗಳು 16 ರನ್ ದೋಚಿಕೊಂಡರು. ಇದರೊಂದಿಗೆ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿದೆ.

ಬೌಲರ್: ಎನ್ರಿಚ್ ನೋರ್ಟ್ಚೆ (1 0 6 6 2 1)

19 ಓವರ್ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ. ಒಂದು ಓವರ್ ಬಾಕಿ ಇದ್ದು, ಜಡೇಜಾ ಮತ್ತು ರಾಯುಡು ಕ್ರೀಸ್ನಲ್ಲಿದ್ದಾರೆ.

ಬೌಲರ್: ಕಗಿಸೊ ರಬಾಡ (Wd 1 1 6 0 1 6)

18 ಓವರ್ ಮುಕ್ತಾಯವಾಗಿದ್ದು, ಚೆನ್ನೈ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ. ಅಂಬಟಿ ರಾಯುಡು ಮತ್ತು ರವಿಂದ್ರ ಜಡೇಜಾ ಕ್ರೀಸ್ನಲ್ಲಿದ್ದಾರೆ.
ಬೌಲರ್: ತುಷಾರ್ ದೇಶಪಾಂಡೆ (1 1 1 1 6 Wd 2)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕೇವಲ 3 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ 17 ಓವರ್ಗಳ ಆಟ ಮುಗಿದಿದ್ದು, ಚೆನ್ನೈ ತಂಡ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.

ಬೌಲರ್: ಎನ್ರಿಚ್ ನೋರ್ಟ್ಚೆ (6 1 W 0 1 4)

16 ಓವರ್ಗಳ ಅಂತ್ಯಕ್ಕೆ ಚೆನ್ನೈ 3 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದೆ.

ಬೌಲರ್: ಮಾರ್ಕಸ್ ಸ್ಟೋಯಿನಸ್ ( 0 1 1 1 6 1)

15ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಕಗಿಸೊ ರಬಾಡ ಅರ್ಧಶತಕ ಗಳಿಸಿ ಆಡುತ್ತಿದ್ದ ಫಾಫ್ ಡು ಪ್ಲೆಸಿಗೆ ಪೆವಿಲಿಯನ್ ದಾರಿ ತೋರಿದ್ದಾರೆ. ಇದರೊಂದಿಗೆ ಅವರು ಐಪಿಎಲ್ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿದರು.

ರಬಾಡ ಅವರಿಗೆ ಇದು 27ನೇ ಪಂದ್ಯ. ಇದಕ್ಕೂ ಮೊದಲು ಸುನೀಲ್ ನರೇನ್ 32ನೇ ಪಂದ್ಯದಲ್ಲಿ 50 ವಿಕೆಟ್ ಸಾಧನೆ ಮಾಡಿದ್ದರು.

ಬೌಲರ್: ಕಗಿಸೊ ರಬಾಡ (4 0 0 W N 1 1)

ಚೆನ್ನೈ 2 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.

ಬೌಲರ್: ಆರ್ ಅಶ್ವಿನ್ (1 0 6 0 2 2)

13 ಓವರ್ ಅಂತ್ಯಕ್ಕೆ ಚೆನ್ನೈ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 94 ರನ್ ಆಗಿದೆ.

ಬೌಲರ್: ಅಕ್ಷರ್ ಪಟೇಲ್ (1 1 1 1 1 2)

ಆರಂಭಿಕ ಆಘಾತಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಫಾಫ್ ಡು ಪ್ಲೆಸಿ 39 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಆದರೆ, ಅವರೊಟ್ಟಿಗೆ ಸೇರಿ 2ನೇ ವಿಕೆಟ್ಗೆ 87ರನ್ಗಳ ಜೊತೆಯಾಟ ಆಡಿದ್ದ ಶೇನ್ ವಾಟ್ಸನ್ (36) ನೋರ್ಟ್ರ್ಚೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

12 ಓವರ್ ಮುಕ್ತಾಯವಾಗಿದ್ದು, ಚೆನ್ನೈ 2 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ.

ಬೌಲರ್: ಎನ್ರಿಚ್ ನೋರ್ಟ್ಚೆ (1 0 1 W 0 0)

11 ಓವರ್ ಮುಕ್ತಾಯಕ್ಕೆ ಚೆನ್ನೈ ತಂಡ 1 ಕಳೆದುಕೊಂಡು 85 ರನ್ ಗಳಿಸಿದೆ. ಪ್ಲೆಸಿ 49 ರನ್ ಗಳಿಸಿ ಆಡುತ್ತಿದ್ದು, ವಾಟ್ಸ್ನ್ 35 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.

ಬೌಲರ್: ತುಷಾರ್ ದೇಶಪಾಂಡೆ (6 1 1 4 2 0)

10 ಓವರ್ ಅಂತ್ಯಕ್ಕೆ ಚೆನ್ನೈ ತಂಡದ ಮೊತ್ತ 1 ವಿಕೆಟ್ಗೆ 71 ರನ್ ಆಗಿದೆ.

ಬೌಲರ್: ಆರ್ ಅಶ್ವಿನ್ (0 4 1 4 2 4)

9 ಓವರ್ಗಳ ಆಟ ಮುಗಿದಿದ್ದು, ಚೆನ್ನೈ 1 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿದೆ. ಪ್ಲೆಸಿ (31) ಮತ್ತು ವಾಟ್ಸನ್ (24)ಕ್ರೀಸ್ನಲ್ಲಿದ್ದಾರೆ.

ಬೌಲರ್: ಅಕ್ಷರ್ ಪಟೇಲ್ ( 1 4 1 1 1 )

8 ಓವರ್ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ.

ಬೌಲರ್: ಆರ್ ಅಶ್ವಿನ್ (1 0 1 1 0 1)

7 ಓವರ್ಗಳ ಅಂತ್ಯಕ್ಕೆ ಸಿಎಸ್ಕೆ 1 ವಿಕೆಟ್ಗೆ 43 ರನ್ ಗಳಿಸಿದೆ.

ಬೌಲರ್: ಅಕ್ಷರ್ ಪಟೇಲ್ (1 1 0 1 0 1)

ಆರು ಓವರ್ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿಕೊಂಡಿದೆ. ವಾಟ್ಸನ್ (14) ಮತ್ತು ಪ್ಲೆಸಿ (24) ಕ್ರೀಸ್ನಲ್ಲಿದ್ದಾರೆ.

ಬೌಲರ್: ಕಗಿಸೊ ರಬಾಡ (0 1 0 4 1 4)

5 ಓವರ್ಗಳ ಅಂತ್ಯಕ್ಕೆ ಸಿಎಸ್ಕೆ 1 ವಿಕೆಟ್ಗೆ 29 ರನ್ ಗಳಿಸಿದೆ.

ಬೌಲರ್: ಎನ್ರಿಚ್ ನೋರ್ಟ್ಚೆ (6 0 0 4 0 4)

ನಾಲ್ಕು ಓವರ್ಗಳ ಅಂತ್ಯಕ್ಕೆ ಸಿಎಸ್ಕೆ 1 ವಿಕೆಟ್ಗೆ 15 ರನ್ ಗಳಿಸಿದೆ.

ಬೌಲರ್: ಅಕ್ಷರ್ ಪಟೇಲ್ (1 1 0 0 1 0)

3 ಓವರ್ ಮುಗಿದಿದ್ದು, ಚೆನ್ನೈ 1 ವಿಕೆಟ್ ಕಳೆದುಕೊಂಡು 12 ರನ್ ಗಳಿಸಿದೆ. ಪ್ಲೆಸಿ ಮತ್ತು ವಾಟ್ಸನ್ ಕ್ರೀಸ್ನಲ್ಲಿದ್ದಾರೆ.

ಬೌಲರ್: ತುಷಾರ್ ದೇಶಪಾಂಡೆ (Wd 0 0 1 4 0 4)

ವೇಗಿ ಕಗಿಸೊ ರಬಾಡ ಒಂದೂ ರನ್ ನೀಡದೆ ಎರಡನೇ ಓವರ್ ಮಾಡಿದರು.

(0 0 0 0 0 0)

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಓವರ್ನಲ್ಲಿಯೇ 1 ವಿಕೆಟ್ ಕಳೆದುಕೊಂಡಿದೆ.
ಫಾಫ್ ಡು ಪ್ಲೆಸಿ ಜೊತೆಗೆ ಇನಿಂಗ್ಸ್ ಆರಂಭಿಸಿದ ಸ್ಯಾಮ್ ಕರನ್ ಮೊದಲ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡಲು ಶೇನ್ ವಾಟ್ಸನ್ ಕ್ರೀಸ್ಗೆ ಬಂದಿದ್ದಾರೆ.

ಮೊದಲ ಓವರ್: ಟಿ. ದೇಶ್ಪಾಂಡೆ (0 0 W 0 0 2)

ಚೆನ್ನೈ ಸೂಪರ್ಕಿಂಗ್ಸ್: ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಕೇಧಾರ್ ಜಾಧವ್, ಸ್ಯಾಮ್ ಕರನ್, ರವಿಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕರನ್ ಶರ್ಮಾ

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯಾ ರಹಾನೆ, ಅಜಿಂಕ್ಯಾ ರಹಾನೆ, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಅಕ್ಷರ್ ಪಟೇಲ್, ಟಿ. ದೇಶ್ಪಾಂಡೆ , ಕಗಿಸೊ ರಬಾಡ, ಆರ್. ಅಶ್ವಿನ್, ಎನ್ರಿಚ್ ನೋರ್ಟ್ಚೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.