ಗುರುವಾರ , ಅಕ್ಟೋಬರ್ 22, 2020
22 °C

IPL-2020 | RCB vs KXIP: ಕಿಂಗ್ಸ್‌ ಇಲವೆನ್ ಪಂಜಾಬ್‌ಗೆ 8 ವಿಕೆಟ್‌ ಗೆಲುವು

Published:
Updated:
ಕನ್ನಡಿಗ ಕೆ.ಎಲ್‌.ರಾಹುಲ್‌ ನಾಯಕತ್ವದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್‌ ಪಡೆ, ಈ ಜಯದೊಂದಿಗೆ ಜಯದ ಹಾದಿಗೆ ಮರಳಿತು.
 • 12:05 am

  ಪಂಜಾಬ್‌ಗೆ 8 ವಿಕೆಟ್‌ ಜಯ

  ಆರ್‌ಸಿಬಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡ ಕೊನೆಯ ಓವರ್‌ನ ಕೊನೆ ಎಸೆತದಲ್ಲಿ ಗೆಲುವು ಸಾಧಿಸಿತು.

  ಕಿಂಗ್ಸ್‌ ಗೆಲುವಿಗೆ ಕೊನೆ ಓವರ್‌ನಲ್ಲಿ ಕೇವಲ 2 ರನ್‌ ಬೇಕಾಗಿತ್ತು. ಅರ್ಧಶತಕ ಬಾರಿಸಿದ್ದ ಕ್ರಿಸ್‌ ಗೇಲ್ (53) ಮತ್ತು ನಾಯಕ ಕೆ.ಎಲ್‌.ರಾಹುಲ್‌ (62) ಕ್ರೀಸ್‌ನಲ್ಲಿದ್ದರು.

  ಹೀಗಾಗಿ ಕಿಂಗ್ಸ್‌ ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಕೊನೆಯ ಓವರ್‌ ಬೌಲಿಂಗ್‌ ಮಾಡಿದ ಯಜುವೇಂದ್ರ ಚಾಹಲ್‌ ಮೊದಲ 4 ಎಸೆತಗಳಲ್ಲಿ ಕೇವಲ 1 ರನ್‌ ನೀಡಿದರು. ಐದನೇ ಎಸೆತದಲ್ಲಿ ಗೇಲ್‌ ರನೌಟ್ ಆದರು. 1 ಎಸೆತದಲ್ಲಿ ಒಂದು ರನ್‌ ಬೇಕಾಗಿತ್ತು.

  ಕ್ರೀಸ್‌ಗೆ ಬಂದ ನಿಕೋಲಸ್‌ ಪೂರನ್‌ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವು ತಂದುಕೊಟ್ಟರು.

  ಈ ಜಯದೊಂದಿಗೆ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 2ನೇ ಗೆಲುವು ಸಾಧಿಸಿತು. ಎರಡೂ ಗೆಲುವು ಆರ್‌ಸಿಬಿ ವಿರುದ್ಧವೇ ಬಂದಿವೆ ಎಂಬುದು ವಿಶೇಷ.

  ಹೀಗಿತ್ತು ಕೊನೆಯ ಓವರ್‌: (0 0 1 0 W 6)

 • 10:26 pm

  14ನೇ ಓವರ್ ಮುಕ್ತಾಯ: ಅರ್ಧಶತಕ ಗಳಿಸಿದ ರಾಹುಲ್

  ನಾಯಕ ಕೆಎಲ್‌ ರಾಹುಲ್ 37 ಎಸೆತಗಳಲ್ಲಿ 50 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಇದು ರಾಹುಲ್‌ಗೆ ಐಪಿಎಲ್‌ನಲ್ಲಿ ಒಟ್ಟಾರೆ 20ನೇ ಮತ್ತು ಈ ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ.

  ಸದ್ಯ ಕಿಂಗ್ಸ್‌ ಮೊತ್ತ 1 ವಿಕೆಟ್‌ಗೆ 123 ರನ್‌ ಆಗಿದೆ.

  ಬೌಲರ್‌: ಕ್ರಿಸ್‌ ಮೋರಿಸ್ (1 0 0 1 1 1)

 • 10:21 pm

  13ನೇ ಓವರ್ ಮುಕ್ತಾಯ

  13 ಓವರ್‌ ಅಂತ್ಯಕ್ಕೆ ಕಿಂಗ್ಸ್‌ ತಂಡ 1 ವಿಕೆಟ್‌ಗೆ 119 ರನ್‌ ಗಳಿಸಿದೆ.

  ಬೌಲರ್‌: ವಾಷಿಂಗ್ಟನ್ ಸುಂದರ್‌ (1 1 6 1 1 6)

 • 10:15 pm

  12ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಕಿಂಗ್ಸ್‌

  12 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್ 1 ವಿಕೆಟ್‌ಗೆ 103 ರನ್ ಗಳಿಸಿದೆ.

  ರಾಹುಲ್‌ (46) ಮತ್ತು ಗೇಲ್‌ (6) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಮೊಹಮ್ಮದ್ ಸಿರಾಜ್ ()

 • 10:13 pm

  11ನೇ ಓವರ್ ಮುಕ್ತಾಯ

  11 ಓವರ್‌ಗಳ ಆಟ ಮುಗಿದಿದ್ದು, 1 ವಿಕೆಟ್‌ಗೆ ಕಿಂಗ್ಸ್‌ 87 ರನ್‌ ಗಳಿಸಿದೆ.

  ಬೌಲರ್‌: ವಾಷಿಂಗ್ಟನ್‌ ಸುಂದರ್‌ (1 0 0 1 1 1 )

 • 10:10 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌ 1 ವಿಕೆಟ್‌ ಕಳೆದುಕೊಂಡು 84 ರನ್‌ ಗಳಿಸಿದೆ. ಈ ಹಂತದಲ್ಲಿ ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 83 ರನ್‌ ಕಲೆಹಾಕಿತ್ತು.

  ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಕ್ರಿಸ್‌ ಗೇಲ್‌ ಮತ್ತು ನಾಯಕ ಕೆಎಲ್‌ ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ನವದೀಪ್‌ ಸೈನಿ (0 0 0 L1 1 0)

 • 10:05 pm

  9ನೇ ಓವರ್ ಮುಕ್ತಾಯ

  9 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌ 1 ವಿಕೆಟ್‌ ಕಳೆದುಕೊಂಡು 82 ರನ್‌ ಗಳಿಸಿದೆ.

  ಬೌಲರ್‌: ವಾಷಿಂಗ್ಟನ್ ಸುಂದರ್ (1 0 1 0 1 1)

 • 09:59 pm

  8ನೇ ಓವರ್ ಮುಕ್ತಾಯ: ಮಯಂಕ್ ವಿಕೆಟ್ ಪತನ

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್‌ ತಂಡ 1 ವಿಕೆಟ್‌ ಕಳೆದುಕೊಂಡು 78 ರನ್ ಗಳಿಸಿದೆ.

  ಈ ಓವರ್‌ನ ಕೊನೆಯ ಎಸೆತದಲ್ಲಿ ಮಯಂಕ್‌ ಅಗರವಾಲ್ (45)‌ ಔಟಾಗಿದ್ದಾರೆ.

  ಬೌಲಿಂಗ್‌: ಯಜುವೇಂದ್ರ ಚಾಹಲ್‌ (0 Wd4 1 1 1 6 W)

 • 09:55 pm

  7ನೇ ಓವರ್‌ ಮುಕ್ತಾಯ

  7 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 65 ರನ್‌ ಗಳಿಸಿದೆ.

  ಬೌಲರ್‌: ಮೊಹಮದ್‌ ಸಿರಾಜ್‌ (2 1 1 0 4 1)

 • 09:50 pm

  ಪವರ್‌ ಪ್ಲೇ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 56 ರನ್ ಗಳಿಸಿದ ಕಿಂಗ್ಸ್

  ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್ ಪಡೆ ವಿಕೆಟ್‌ ನಷ್ಟವಿಲ್ಲದೆ 56 ರನ್ ಗಳಿಸಿದೆ. ಈ ಹಂತದಲ್ಲಿ ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 57 ರನ್‌ ಗಳಿಸಿತ್ತು.

  ಆರನೇ ಓವರ್‌: ಇಸುರು ಉದಾನ (1 1 1 0 6 1)

 • 09:05 pm

  ಇನಿಂಗ್ಸ್‌ ಮುಕ್ತಾಯ; ಕಿಂಗ್ಸ್‌ಗೆ 172 ರನ್ ಗುರಿ

  ಮೊಹಮ್ಮದ್‌ ಶಮಿ ಎಸೆದ ಕೊನೆಯ ಓವರ್‌ನಲ್ಲಿ  ಕ್ರಿಸ್‌ ಮೋರಿಸ್‌ ಮತ್ತು ಇಸುರು ಉದಾನ ಮೂರು ಸಿಕ್ಸರ್‌ ಸಹಿತ 24 ರನ್‌ ಚಚ್ಚಿದರು.

  ಇದರೊಂದಿಗೆ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿದೆ.

  ಬೌಲರ್: ಮೊಹಮ್ಮದ್‌ ಶಮಿ (4 1 6 1 6 6)

 • 09:01 pm

  19ನೇ ಓವರ್ ಮುಕ್ತಾಯ

  19 ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ 6 ವಿಕೆಟ್‌ಗೆ 147 ರನ್‌ ಗಳಿಸಿದೆ. ಕ್ರಿಸ್‌ ಮೋರಿಸ್‌ ಮತ್ತು ಇಸುರು ಉದಾನ ಕ್ರೀಸ್‌ನಲ್ಲಿದ್ದಾರೆ.

  ಬೌಲರ್: ಕ್ರಿಸ್‌ ಜೋರ್ಡನ್‌ (1 1 1 6 0 1)

 • 08:53 pm

  18ನೇ ಓವರ್ ಮುಕ್ತಾಯ: ವಿಲಿಯರ್ಸ್–ವಿರಾಟ್ ಔಟ್

  18ನೇ ಓವರ್‌ ಬೌಲಿಂಗ್‌ ಮಾಡಿದ ಮೊಹಮ್ಮದ್‌ ಶಮಿ  ಎಬಿ ಡಿ ವಿಲಿಯರ್ಸ್‌ ಮತ್ತು ವಿರಾಟ್‌ ಕೊಹ್ಲಿಗೆ ಪೆವಿಲಿಯನ್‌ ದಾರಿ ತೋರಿಸಿದರು.

  ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ವಿಲಿಯರ್ಸ್ (2)‌ ಈ ಓವರ್‌ನ ಮೂರನೇ ಎಸೆತದಲ್ಲಿ ಮತ್ತು ನಾಯಕ ವಿರಾಟ್ ಕೊಹ್ಲಿ (48) 5ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ ತಂಡದ ಮೊತ್ತ 6 ವಿಕೆಟ್‌ ನಷ್ಟಕ್ಕೆ 137 ರನ್ ಆಗಿದೆ.

  ಬೌಲರ್‌: ಮೊಹಮದ್‌ ಶಮಿ (1 0 W 2 W)

 • 08:49 pm

  17ನೇ ಓವರ್ ಮುಕ್ತಾಯ

  17 ಓವರ್‌ ಅಂತ್ಯಕ್ಕೆ ಆರ್‌ಸಿಬಿ 4 ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿದೆ.

  ಎಬಿ ಡಿ ವಿಲಿಯರ್ಸ್‌ ಮತ್ತು ನಾಯಕ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಮುರುಗನ್‌ ಅಶ್ವಿನ್‌ (1 1 0 1 2 1)

 • 08:45 pm

  16ನೇ ಓವರ್ ಮುಕ್ತಾಯ; ದುಬೆ ವಿಕೆಟ್ ಪತನ

  19 ಎಸೆತಗಳಲ್ಲಿ 23 ರನ್ ಗಳಿಸಿದ್ದ ಶಿವಂ ದುಬೆ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿದ್ದಾರೆ.

  ಸದ್ಯ ತಂಡದ ಮೊತ್ತ 4 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿದೆ.

  ಬೌಲರ್‌: ಕ್ರಿಸ್‌ ಜೋರ್ಡನ್‌ (0 1 1 1 Wd L1 W)

 • 08:35 pm

  15ನೇ ಓವರ್ ಮುಕ್ತಾಯ

  15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 122 ರನ್ ಗಳಿಸಿದೆ.

  ರವಿ ಬಿಷ್ಣೋಯಿ ಎಸೆದ ಈ ಓವರ್‌ನಲ್ಲಿ 2 ಸಿಕ್ಸರ್‌ 19 ರನ್‌ ಬಂದಿತು.

  (1 6 6 Wd2 1 1 2)

 • 08:29 pm

  14ನೇ ಓವರ್ ಮುಕ್ತಾಯ: ಶತಕ ಗಳಿಸಿದ ಆರ್‌ಸಿಬಿ

  ಆರ್‌ಸಿಬಿ ತಂಡ 14ನೇ ಓವರ್‌ನ 2ನೇ ಎಸೆತದಲ್ಲಿ ಶತಕ ಪೂರೈಸಿದೆ. ಓವರ್‌ನ ಅಂತ್ಯಕ್ಕೆ ತಂಡದ ಮೊತ್ತ 3 ವಿಕೆಟ್‌ಗೆ 103 ರನ್‌ ಆಗಿದೆ.

  ಶಿವಂ ದುಬೆ (8) ಮತ್ತು ಕೊಹ್ಲಿ (36) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಕ್ರಿಸ್‌ ಜೋರ್ಡನ್‌ (1 Wd 1 1 0 1 1)

 • 08:25 pm

  13ನೇ ಓವರ್ ಮುಕ್ತಾಯ

  ಆರ್‌ಸಿಬಿ 3 ವಿಕೆಟ್‌ಗೆ 97 ರನ್‌ ಗಳಿಸಿದೆ.

  ಬೌಲರ್‌: ರವಿ ಬಿಷ್ಣೋಯಿ (1 0 1 0 1 0)

 • 08:22 pm

  12ನೇ ಓವರ್ ಮುಕ್ತಾಯ

  12 ಓವರ್‌ ಅಂತ್ಯಕ್ಕೆ ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 94 ರನ್‌ ಗಳಿಸಿದೆ.

  ಬೌಲರ್‌: ಗ್ಲೇನ್ ಮ್ಯಾಕ್ಸ್‌ವೆಲ್‌ (1 1 0 2 1 1)

 • 08:20 pm

  11ನೇ ಓವರ್ ಮುಕ್ತಾಯ: ಸುಂದರ್‌ ವಿಕೆಟ್ ಪತನ

  11ನೇ ಓವರ್‌ ಬೌಲಿಂಗ್‌ ಮಾಡಿದ ಮುರುಗನ್‌ ಅಶ್ವಿನ್‌, ವಾಷಿಂಗ್ಟನ್‌ ಸುಂದರ್‌ಗೆ (13) ಪೆವಿಲಿಯನ್‌ ಸೇರಿಕೊಂಡಿದ್ದಾರೆ.

  ಆರ್‌ಸಿಬಿ ಸದ್ಯ 3 ವಿಕೆಟ್‌ ನಷ್ಟಕ್ಕೆ 88 ರನ್ ಗಳಿಸಿದೆ.

 • 08:14 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 83 ರನ್‌ ಗಳಿಸಿದೆ.

  ಸುಂದರ್‌ (13) ಮತ್ತು ಕೊಹ್ಲಿ (25) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 1 4 0 1 1)

 • 08:10 pm

  9ನೇ ಓವರ್ ಮುಕ್ತಾಯ

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 75 ರನ್‌ ಗಳಿಸಿದೆ.

  ಬೌಲರ್‌: ಮರುಗನ್‌ ಅಶ್ವಿನ್ (2 0 1 1 1 1)

 • 08:06 pm

  8ನೇ ಓವರ್ ಮುಕ್ತಾಯ

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 69 ರನ್‌ ಗಳಿಸಿದೆ.

  ನಾಲ್ಕನೇ ಕ್ರಮಾಂಕದಲ್ಲಿ ಬಂದಿರುವ ವಾಷಿಂಗ್ಟನ್‌ ಸುಂದರ್ (5)‌ ಮತ್ತು ಕೊಹ್ಲಿ (19) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (2 1 1 0 1 1)

 • 08:03 pm

  7ನೇ ಓವರ್‌ ಮುಕ್ತಾಯ; ಫಿಂಚ್‌ ವಿಕೆಟ್ ಪತನ

  7 ಓವರ್‌ಗಳ ಆಟ ಮುಕ್ತಾಯವಾಗುವಷ್ಟರಲ್ಲಿ ಆರ್‌ಸಿಬಿಯ ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡಿದ್ದಾರೆ. 20 ರನ್‌ ಗಳಿಸಿದ್ದ ಆ್ಯರನ್‌ ಫಿಂಚ್‌, ಸ್ಪಿನ್ನರ್‌ ಮುರುಗನ್‌ ಅಶ್ವಿನ್‌ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.

  ಸದ್ಯ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.

  ಬೌಲರ್‌: ಮುರುಗನ್ ಅಶ್ವಿನ್‌ (1 4 W 0 0 1)

 • 07:59 pm

  ನಾಯಕನಾಗಿ ಅತಿ ಹೆಚ್ಚು ರನ್‌

  ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದರು.

  ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂಎಸ್‌ ಧೋನಿ ಇದುವರೆಗೆ ಮೊದಲ ಸ್ಥಾನದಲ್ಲಿದ್ದರು.

 • 07:55 pm

  6ನೇ ಓವರ್ ಮುಕ್ತಾಯ: ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 57 ರನ್‌

  ಪವರ್‌ ಪ್ಲೇ ಮುಕ್ತಾಯವಾಗಿದ್ದು, ಆರ್‌ಸಿಬಿ 1 ವಿಕೆಟ್‌ಗೆ 57 ರನ್ ಗಳಿಸಿಕೊಂಡಿದೆ.

  ಬೌಲರ್‌: ರವಿ ಬಿಷ್ಣೋಯಿ (0 1 L1 4 Wd 1 0)

 • 07:51 pm

  5ನೇ ಓವರ್ ಮುಕ್ತಾಯ: ಪಡಿಕ್ಕಲ್ ಪೆವಿಲಿಯನ್‌ಗೆ

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 1 ವಿಕೆಟ್ ಕಳೆದುಕೊಂಡು 49 ರನ್‌ ಗಳಿಸಿದೆ. 13 ಎಸೆತಗಳಲ್ಲಿ 18 ರನ್  ಗಳಿಸಿದ್ದ ದೇವದತ್ತ ಪಡಿಕ್ಕಲ್‌ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ.

  ಬೌಲರ್‌: ಅರ್ಶದೀಪ್‌ ಸಿಂಗ್‌ (W 1 1 4 4 1)

 • 07:46 pm

  4ನೇ ಓವರ್ ಮುಕ್ತಾಯ

  4 ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ ವಿಕೆಟ್ ನಷ್ಟವಿಲ್ಲದೆ 38 ರನ್ ಗಳಿಸಿದೆ.

  ಬೌಲರ್‌: ಮೊಹಮ್ಮದ್‌ ಶಮಿ (1 1 1 1 6 1)

 • 07:40 pm

  3ನೇ ಓವರ್ ಮುಕ್ತಾಯ

  ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 27 ರನ್ ಗಳಿಸಿದೆ. ಪಡಿಕ್ಕಲ್‌ (9) ಮತ್ತು ಫಿಂಚ್‌ (13) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಹರ್ಷಲ್‌ ಪಟೇಲ್ (0 0 1 2 4 Wd 1)

 • 07:36 pm

  2ನೇ ಓವರ್ ಮುಕ್ತಾಯ

  2ನೇ ಓವರ್‌ ಆಟ ಮುಗಿದಿದ್ದು, ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ, 18 ರನ್ ಗಳಿಸಿದೆ.

  ಬೌಲರ್‌: ಮೊಹಮ್ಮದ್‌ ಶಮಿ (1 B4 0 0 4)

 • 07:32 pm

  ಇನಿಂಗ್ಸ್ ಆರಂಭಿಸಿದ ಆರ್‌ಸಿಬಿ

  ಟಾಸ್‌ ಗೆದ್ದಿರುವ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಿದೆ. ಕನ್ನಡಿಗ ದೇವದತ್ತ ಪಡಿಕ್ಕಲ್‌ ಮತ್ತು ಆಸ್ಟ್ರೇಲಿಯಾ ಆಟಗಾರ ಆ್ಯರನ್‌ ಫಿಂಚ್‌ ಬ್ಯಾಟಿಂಗ್‌ಗೆ ಇಳಿದಿದ್ದಾರೆ.

  ಅಚ್ಚರಿಯೆಂಬಂತೆ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಪರ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಬೌಲಿಂಗ್‌ ಆರಂಭಿಸಿದ್ದಾರೆ.

  ಒಂದು ಓವರ್‌ ಮುಕ್ತಾಯವಾಗಿದ್ದು, ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದೆ.

  ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 0 0 1 0 6)

 • 07:10 pm

  ಹನ್ನೊಂದರ ಬಳಗ

  ಟೂರ್ನಿಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಆರ್‌ಸಿಬಿ ಕಳೆದ ಪಂದ್ಯಗಳಲ್ಲಿ ಆಡಿದ್ದ ತಂಡವನ್ನೇ ಮುಂದುವರಿಸಿದೆ. ಆದರೆ, ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

  ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಇದೇ ಮೊದಲ ಸಲ ಟೂರ್ನಿಯಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ದೀಪಕ್‌ ಹೂಡಾ ಮತ್ತು ಮುರುಗನ್‌ ಅಶ್ವಿನ್‌ ತಂಡ ಸೇರಿಕೊಂಡಿದ್ದಾರೆ. ಗಾಯಗೊಂಡಿರುವ ಮನ್‌ದೀಪ್‌ ಸಿಂಗ್‌, ಪ್ರಬ್ಸಿಮ್ರನ್‌ ಸಿಂಗ್‌ ಮತ್ತು ಮುಜೀಬ್‌ ಉರ್‌ ರೆಹಮಾನ್‌ ಹೊರಗುಳಿದಿದ್ದಾರೆ.

  ಆರ್‌ಸಿಬಿ: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಮೊಹಮ್ಮದ್‌ ಸಿರಾಜ್‌, ಶಿವಂ ದುಬೆ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಯಜುವೇಂದ್ರ ಚಾಹಲ್

  ಕಿಂಗ್ಸ್‌: ಕೆಎಲ್‌ ರಾಹುಲ್‌ (ನಾಯಕ/ವಿಕೆಟ್‌ ಕೀಪರ್‌), ಕ್ರಿಸ್‌ ಗೇಲ್‌, ಮಯಂಕ್‌ ಅಗರವಾಲ್‌, ನಿಕೋಲಸ್‌ ಪೂರನ್‌, ಗ್ಲೇನ್ ಮ್ಯಾಕ್ಸ್‌ವೆಲ್, ದೀಪಕ್‌ ಹೂಡಾ, ಮುರುಗನ್‌ ಅಶ್ವಿನ್‌, ರವಿ ಬಿಷ್ಣೋಯಿ, ಅರ್ಶದೀಪ್‌ ಸಿಂಗ್‌, ಮೊಹಮ್ಮದ್ ಶಮಿ, ಶೇಲ್ಡನ್‌ ಕಾರ್ಟೆಲ್‌

 • 07:04 pm

  ಆರ್‌ಸಿಬಿ ಬ್ಯಾಟಿಂಗ್‌

  ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

 • 07:02 pm

  ಗೇಲ್‌ಗೆ ಅವಕಾಶ ನೀಡಿ ಎಂದ ಸೆಹ್ವಾಗ್

 • 07:01 pm

  ಧೋನಿ ನಾಯಕತ್ವದಲ್ಲಿ ಆಡಿದ್ದು, ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು: ಸುಂದರ್

 • 07:00 pm

  ಕಳಪೆ ಫಾರ್ಮ್ ಬಗ್ಗೆ ಮ್ಯಾಕ್ಸ್‌ವೆಲ್ ಮಾತು

 • 04:03 pm

  ಕೊಹ್ಲಿ ಅಭಿಪ್ರಾಯ

 • 03:12 pm

  ಗೆಲುವು ಯಾರಿಗೆ?

 • 02:57 pm

  ಪಂಜಾಬ್ ಕನ್ನಡಿಗರಿಗೆ ’ಬಲಾಢ್ಯ’ ಬೆಂಗಳೂರು ಸವಾಲು