ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | RCB vs KKR: ಕೆಕೆಆರ್‌ ವಿರುದ್ಧ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿದ ಆರ್‌ಸಿಬಿ
LIVE

ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 82 ರನ್‌ ಅಂತರದ ಸುಲಭ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
Last Updated 12 ಅಕ್ಟೋಬರ್ 2020, 18:24 IST
ಅಕ್ಷರ ಗಾತ್ರ
17:4112 Oct 2020

ಆರ್‌ಸಿಬಿಗೆ 82 ರನ್ ಗೆಲುವು

ಕೊನೆಯ ಓವರ್‌ ಬೌಲಿಂಗ್ ಮಾಡಿದ ಇಸುರು ಉದಾನ ಕೇವಲ 4 ರನ್‌ ನೀಡಿ ಇನಿಂಗ್ಸ್‌ ಮುಗಿಸಿದರು. ಹೀಗಾಗಿ ಕೆಕೆಆರ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 112 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ 82 ರನ್‌ ಅಂತರದ ಜಯ ಸಾಧಿಸಿದ ಆರ್‌ಸಿಬಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಕೆಕೆಆರ್‌ 7 ಪಂದ್ಯಗಳಲ್ಲಿ 4ನೇ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

17:3512 Oct 2020

19ನೇ ಓವರ್ ಮುಕ್ತಾಯ

19ನೇ ಓವರ್‌ನ ಕೊನೆಯ ಎಸೆತದಲ್ಲಿ ಕಮಲೇಶ್‌ ನಾಗರಕೋಟಿ ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್ 108 ರನ್‌ ಗಳಿಸಿ 9 ವಿಕೆಟ್‌ ಕಳೆದುಕೊಂಡಿದೆ.

ಕೊನೆಯ ಓವರ್ ಆಟ ಬಾಕಿ ಉಳಿದಿದೆ.

19ನೇ ಓವರ್‌: ಕ್ರಿಸ್‌ ಮೋರಿಸ್‌ (0 1 1 1 1 W)

17:3112 Oct 2020

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 8 ವಿಕೆಟ್‌ಗೆ 104 ರನ್‌ ಗಳಿಸಿದೆ.

ಬೌಲರ್: ನವದೀಪ್‌ ಸೈನಿ (0 1 1 0 Wd 2 0)

17:2812 Oct 2020

17ನೇ ಓವರ್ ಮುಕ್ತಾಯ

17ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಹುಲ್‌ ತ್ರಿಪಾಠಿ ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್‌ 99 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ಮೊಹಮ್ಮದ್‌ ಸಿರಾಜ್‌ (0 0 4 0 0 W)

17:1812 Oct 2020

15ನೇ ಓವರ್ ಮುಕ್ತಾಯ

15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ ತಂಡ 7 ವಿಕೆಟ್‌ ಕಳೆದುಕೊಂಡು 90 ರನ್‌ ಗಳಿಸಿದೆ. ಇದೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ 1 ರನ್‌ ಗಳಿಸಿ ಔಟಾಗಿದ್ದಾರೆ.

ಈ ಹಂತದಲ್ಲಿ ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಿತ್ತು.

ಬೌಲರ್‌: ಕ್ರಿಸ್‌ ಮೋರಿಸ್‌ (1 0 1 1 W 1)

17:0912 Oct 2020

14ನೇ ಓವರ್ ಮುಕ್ತಾಯ: ರಸೆಲ್ ವಿಕೆಟ್ ಪತನ

14ನೇ ಓವರ್‌ನ ಮೊದಲ 3 ಎಸೆತಗಳಲ್ಲಿ 14 ರನ್‌ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಆ್ಯಂಡ್ರೆ ರಸೆಲ್‌, 5ನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಓವರ್‌ನ ಅಂತ್ಯಕ್ಕೆ ಕೆಕೆಆರ್‌ 6 ವಿಕೆಟ್ ಕಳೆದುಕೊಂಡು 87 ರನ್ ಕಲೆಹಾಕಿದೆ.

ಬೌಲರ್‌: ಇಸುರು ಉದಾನ (4 6 4 0 W 1)

17:0312 Oct 2020

13ನೇ ಓವರ್ ಮುಕ್ತಾಯ

13 ಓವರ್‌ ಮುಕ್ತಾಯಕ್ಕೆ ಕೆಕೆಆರ್‌ 5 ವಿಕೆಟ್ ನಷ್ಟಕ್ಕೆ 71 ರನ್‌ ಗಳಿಸಿಕೊಂಡಿದೆ.

ಬೌಲರ್‌: ಕ್ರಿಸ್‌ ಮೊರಿಸ್ (0 1 0 1 0 0)

16:5712 Oct 2020

12ನೇ ಓವರ್ ಮುಕ್ತಾಯ

12ನೇ ಓವರ್‌ನ ಮೊದಲ ಎಸೆತದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಎಯಾನ್‌ ಮಾರ್ಗನ್ (8) ಔಟ್‌ ಆಗಿದ್ದಾರೆ.

ಈ ಓವರ್‌ನ ಅಂತ್ಯಕ್ಕೆ ಕೆಕೆಆರ್‌ 5 ವಿಕೆಟ್‌ ಕಳೆದುಕೊಂಡು 69 ರನ್ ಗಳಿಸಿಕೊಂಡಿದೆ. ರಾಹುಲ್‌ ತ್ರಿಪಾಠಿ ಮತ್ತು ಆ್ಯಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಾರೆ. ಗೆಲ್ಲಲು ಕೊನೆಯ 48 ಎಸೆತಗಳಲ್ಲಿ 126 ರನ್ ಬೇಕಾಗಿದೆ.

ಬೌಲರ್‌: ವಾಷಿಂಗ್ಟನ್ ಸುಂದರ್‌ (W 1 1 2 0 1)

16:5112 Oct 2020

11ನೇ ಓವರ್ ಮುಕ್ತಾಯ; ನಾಯಕ ಕಾರ್ತಿಕ್‌ ಪೆವಿಲಿಯನ್‌ಗೆ

ಕಳೆದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಅಮೋಘ ಬ್ಯಾಟಿಂಗ್‌ ನಡೆಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೆಕೆಆರ್‌ ನಾಯಕ ದಿನೇಶ್‌ ಕಾರ್ತಿಕ್‌ ಈ ಬಾರಿ ಕೇವಲ 1 ರನ್‌ ಗಳಿಸಿ ಔಟಾಗಿದ್ದಾರೆ.

ಸದ್ಯ 11 ಓವರ್‌ ಮುಗಿದಿದ್ದು, ಆರ್‌ಸಿಬಿ 4 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದೆ.

ಬೌಲರ್‌: ಯಜುವೇಂದ್ರ ಚಾಹಲ್‌ (0 1 W L1 1 0)

16:4712 Oct 2020

10ನೇ ಓವರ್ ಮುಕ್ತಾಯ: ಗಿಲ್‌ ರನೌಟ್

ಕೆಕೆಆರ್‌ನ ಭರವಸೆಯ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ 10ನೇ ಓವರ್‌ನಲ್ಲಿ ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ ಆಗಿದ್ದಾರೆ.

ಸದ್ಯ ಕೆಕೆಆರ್‌ ಮೊತ್ತ 3 ವಿಕೆಟ್‌ಗೆ 61 ರನ್‌ ಆಗಿದೆ.

ಬೌಲರ್‌: ವಾಷಿಂಗ್ಟನ್ ಸುಂದರ್ (1 0 W 1 4 1)