ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ | ರಾಜಸ್ಥಾನ್ ರಾಯಲ್ಸ್‌ಗೆ ಪೋರಿಯ ಪತ್ರ

Last Updated 4 ಆಗಸ್ಟ್ 2020, 19:45 IST
ಅಕ್ಷರ ಗಾತ್ರ
ADVERTISEMENT
"ರಾಜಸ್ಥಾನ್ ರಾಯಲ್ಸ್‌ಗೆ ಪತ್ರ ಬರೆದ ಹುಡುಗಿ"

‘ರಾಬಿನ್ ಉತ್ತಪ್ಪ ನನ್ನ ನೆಚ್ಚಿನ ತಂಡದ ಪೋಷಾಕು ಧರಿಸಿ ಆಡುವುದನ್ನು ನೋಡಲು ಬಹಳ ತವಕದಿಂದ ಕಾಯುತ್ತಿದ್ದೇನೆ. ತವರಿನಂಗಳಕ್ಕೆ ಬಂದು ಚಿಯರ್ ಮಾಡಲು ಆಗಲ್ಲ. ಏಕೆಂದರೆ ನೀವು ಯುಎಇಯಲ್ಲಿ ಆಡಲು ಹೊರಟಿದ್ದೀರಿ. ಆದರೆ, ತವರುಮನೆಯಿಂದ ಕೂತು ಹುರಿದುಂಬಿಸುತ್ತೇನೆ’

–ಪುಟಾಣಿ ಹುಡುಗಿಯೊಬ್ಬಳು ರಾಜಸ್ಥಾನ್ ರಾಯಲ್ಸ್‌ ಕ್ರಿಕೆಟ್‌ ತಂಡಕ್ಕೆ ಬರೆದಿರುವ ಪತ್ರದಲ್ಲಿರುವ ಚೆಂದದ ಸಾಲು ಇದು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯು ಈ ಬಾರಿ ನಡೆಯುವುದು ಖಚಿತವಾದ ಕೂಡಲೇ ಅಭಿಮಾನಿಗಳು ಮೈಕೊಡವಿಕೊಂಡು ಎದ್ದಿದ್ದಾರೆ. ಅದರಲ್ಲಿ ಈ ಪೋರಿಯೂ ಒಬ್ಬಳು. ಈಕೆ ನೋಟ್‌ಬುಕ್‌ನಲ್ಲಿ ಈ ಪತ್ರ ಬರೆಯುತ್ತ ಸಾಗುವ ಒಂದು ವಿಡಿಯೊವನ್ನು ರಾಜಸ್ಥಾನ್ ರಾಯಲ್ಸ್‌ ತಂಡವು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದೆ. ಅದರ ಸಾರಾಂಶ ಹೀಗಿದೆ;

ಪ್ರಿಯ ರಾಜಸ್ಥಾನ್ ರಾಯಲ್ಸ್‌...
ನಾವು ಹೋದ ವರ್ಷ ಭೇಟಿಯಾಗಿದ್ದೆವು. ನಾನು ಸವಾಯಿ ಮಾನ್‌ಸಿಂಗ್ (ಜೈಪುರ) ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಖತ್ ಮಜಾ ಮಾಡಿದ್ದೆ. ಡಿಜೆಯು ಐಪಿಎಲ್ ಸಂಗೀತ ಪೆ..ಪೆ..ಪಮ್‌.. ನುಡಿಸಿದಾಗಲೆಲ್ಲ ಪುಳಕಿತಳಾಗಿದ್ದೆ. ನಿಮ್ಮದೇ ಜೆರ್ಸಿ ಧರಿಸಿದ್ದೆ. ಅಷ್ಟೇ ಅಲ್ಲ ನಾನು ಪ್ರತಿದಿನವೂ ನಿಮ್ಮೆಲ್ಲರನ್ನೂ ಬಹಳ ಹತ್ತಿರದಿಂದ ಗಮನಿಸುತ್ತಿದ್ದೇನೆ. ಜೀವನದಲ್ಲಿ ಹೋರಾಟ ಮಾಡುವುದನ್ನು ನಿಮ್ಮ ಆಟ, ಛಲಗಳಿಂದ ಕಲಿತೆ. ಸ್ವಿಂಗ್ ನಲ್ಲಿ ಮಾಸ್ಟರ್‌ ಮಾಡುವುದನ್ನು ಕಲಿತೆ. ದೊಡ್ಡ ಟೈರ್‌ಗಳಲ್ಲಿ ವ್ಯಾಯಾಮ ಮಾಡುವುದನ್ನು ನೋಡಿ ಅಚ್ಚರಿಗೊಂಡೆ. ಬೆನ್ ಸ್ಟೋಕ್ಸ್‌ಗೆ ಅವರನ್ನು ನೋಡಿ ಪುಷ್‌ ಅಪ್, ಸ್ಟ್ರೆಂಚಿಂಗ್ ಮಾಡುವುದನ್ನು ಕಲಿತೆ. ರಾಬಿನ್ ನಮ್ಮ ತಂಡದಲ್ಲಿ ಆಡಲು ಬರುತ್ತಿದ್ದಾರೆ. ಅವರ ಆಟ ನೋಡಲು ಕಾಯುತ್ತಿದ್ದೇನೆ. ಜೋಫ್ರಾ ಆರ್ಚರ್ ಬೌಲಿಂಗ್ ನೆಟ್ಸ್‌ನಲ್ಲಿ ನೋಡಿದೆ. ಅಬ್ಬಾ ಎಷ್ಟೊಂದು ಸ್ಫೂರ್ತಿದಾಯಕ. ನನ್ನಪ್ಪನೊಂದಿಗೆ ನಮ್ಮನೆ ಉದ್ಯಾನದಲ್ಲಿ ಆಡುತ್ತಿದ್ದೇನೆ.

ನಿಮಗೆಲ್ಲರಿಗೂ ಶುಭ ಹಾರೈಕೆಗಳು...
ಆದರೆ, ಈ ಇಡಿ ವಿಡಿಯೊದಲ್ಲಿ ಆ ಬಾಲಕಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಅಪಾರ ಸಂಖ್ಯೆಯ ಅಭಿಮಾನಿಗಳ ಮೆಚ್ಚುಗೆಯನ್ನು ಈ ದೃಶ್ಯ ತುಣುಕುಗಳಿಸುತ್ತಿದೆ. ತಂಡದಲ್ಲಿರುವ ಕನ್ನಡಿಗ ಶ್ರೇಯಸ್ ಗೋಪಾಲ್, ಕೇರಳದ ಸಂಜು ಸ್ಯಾಮ್ಸನ್ ಮತ್ತಿತರ ಬಗ್ಗೆಯೂ ಪತ್ರದಲ್ಲಿ ಉಲ್ಲೇಖವಿದೆ.

ರಾಜಸ್ಥಾನ್ ರಾಯಲ್ಸ್‌ಗೆ ಪತ್ರ ಬರೆದ ಹುಡುಗಿ

ಸೆಪ್ಟೆಂಬರ್‌ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ನಡೆಯಲಿದೆ. ಅದಕ್ಕಾಗಿ ತಂಡಗಳು ಒಂದು ತಿಂಗಳು ಮುಂಚೆಯೇ ದುಬೈಗೆ ತೆರಳಿ ತಾಲೀಮು ನಡೆಸುವ ನಿರೀಕ್ಷೆ ಇದೆ. ಕೊರೊನಾ ಕಾಲದಲ್ಲಿ ಐಪಿಎಲ್ ನಂತರ ಮನರಂಜನೆ ಭರಿತ ಕ್ರಿಕೆಟ್ ನಡೆಯುತ್ತಿರುವುದು ಎಲ್ಲ ವಯೋವರ್ಗದ ಅಭಿಮಾನಿಗಳಲ್ಲಿ ಸಂತಸದ ಅಲೆ ಎಬ್ಬಿಸಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT