ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಮೂರು ದಿನಗಳ ಕ್ವಾರಂಟೈನ್‌ಗೆ ತಂಡಗಳ ಬೇಡಿಕೆ

Last Updated 5 ಆಗಸ್ಟ್ 2020, 12:52 IST
ಅಕ್ಷರ ಗಾತ್ರ

ನವದೆಹಲಿ:ಐಪಿಎಲ್‌ನಲ್ಲಿ‌ ಆಡಲು ಯುಎಇಗೆ ತೆರಳುವ ಆಟಗಾರರ ಕ್ವಾರಂಟೈನ್‌ ಅವಧಿಯನ್ನು ಮೂರು ದಿನಗಳಿಗೆ ನಿಗದಿಪಡಿಸಬೇಕುಎಂದು ಫ್ರಾಂಚೈಸಿಗಳು ಬೇಡಿಕೆ ಮುಂದಿಟ್ಟಿವೆ.

ಬಿಸಿಸಿಐ ಸಿದ್ಧಪಡಿಸಿರುವ ಮಾರ್ಗಸೂಚಿಗಳ (ಎಸ್‌ಒಪಿ) ಅನ್ವಯ ಆರು ದಿನಗಳ ಕ್ವಾರಂಟೈನ್ ಪಾಲಿಸಬೇಕು.

ಸೂಕ್ತ ಮುನ್ಸೂಚನೆಯೊಂದಿಗೆ ತಂಡ ಹಾಗೂ ಕುಟುಂಬದೊಂದಿಗೆ ರಾತ್ರಿ ಭೋಜನಕ್ಕೆ ಮಂಡಳಿಯು ಅನುಮತಿ ನೀಡಬೇಕೆಂದೂ ತಂಡಗಳು ಕೇಳಿಕೊಂಡಿವೆ.

ಈ ಮೇಲಿನ ಅಂಶಗಳು ಸೇರಿದಂತೆ ತಾವು ತಂಗುವ ಹೊಟೇಲ್‌ಗೆ, ವ್ಯಕ್ತಿಗಳ ಸಂಪರ್ಕ ಇಲ್ಲದೆ ಹೊರಗಡೆಯಿಂದ ಆಹಾರ ತಲುಪಿಸುವ ಕುರಿತು ತಂಡಗಳು ಬೇಡಿಕೆ ಸಲ್ಲಿಸಿವೆ.

ಬಿಸಿಸಿಐ ಸಿದ್ಧಪಡಿಸಿರುವ ತಾತ್ಕಾಲಿಕ ಎಸ್‌ಒಪಿ ಪ್ರಕಾರ, ಆಟಗಾರರು ಹಾಗೂ ನೆರವು ಸಿಬ್ಬಂದಿ ಕ್ವಾರಂಟೈನ್‌ ಅವಧಿಯ ಮೊದಲ, ಮೂರನೇ ಹಾಗೂ ಆರನೇ ದಿನಗಳಂದು ಕೋವಿಡ್–19‌ ತಪಾಸಣೆಗೆ ಒಳಗಾಗಬೇಕು. ಇದರಲ್ಲಿ ನೆಗೆಟಿವ್‌ ಫಲಿತಾಂಶ ಬಂದರೆ ಆಟಗಾರರು ತರಬೇತಿಗೆ ತೆರಳಬಹುದು. ಇದಾದ ಬಳಿಕ ಐದು ದಿನಗಳಿಗೊಮ್ಮೆ ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

‘ಹೋದ ಆರು ತಿಂಗಳುಗಳಿಂದ ಆಟಗಾರರು ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಸಾಧ್ಯವಾದಷ್ಟು ಅವರು ಅಭ್ಯಾಸ ನಡೆಸಲು ಎದುರುನೋಡುತ್ತಿದ್ದಾರೆ‘ ಎಂದು ಅಧಿಕಾರಿ ಹೇಳಿದರು.

ವೈದ್ಯಕೀಯ ಪರಿಣತರ ಸಲಹೆಗೆ ಒಳಪಟ್ಟು, ಆಟಗಾರರಿಗೆ ಜೀವ ಸುರಕ್ಷಾ ವಾತಾವರಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡುವುದನ್ನು ಪರಿಗಣಿಸಬಹುದೇ?.. ಎಂಬ ಅಂಶವು ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳಲ್ಲಿ ಒಂದು ಎನ್ನಲಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಸೇರಿದಂತೆ ಕೆಲವು ತಂಡಗಳು ಯುಎಇಗೆ ನಿಗದಿತ ದಿನಾಂಕಕ್ಕಿಂತ ಮುನ್ನವೇ ತೆರಳಲು ಬಯಸಿದ್ದರೂ ಆಗಸ್ಟ್‌ 20ಕ್ಕಿಂತ ಮುನ್ನ ತಂಡಗಳು ತೆರಳುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT