ಶುಕ್ರವಾರ, ಆಗಸ್ಟ್ 19, 2022
27 °C

ಐಪಿಎಲ್‌ ಟೂರ್ನಿ: ಭಾರತ ತಂಡದ ಆಟಗಾರ ವಿನಯಕುಮಾರ್ ವೀಕ್ಷಕ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ತಂಡದ ಆಟಗಾರ ಆರ್‌. ವಿನಯಕುಮಾರ್ ಅವರು ಐಪಿಎಲ್‌ ಟೂರ್ನಿಗಾಗಿ ಸ್ಟಾರ್‌ ಸ್ಪೋರ್ಟ್ಟ್‌ ಕನ್ನಡ ವಾಹಿನಿಯಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ.

ವಿನಯಕುಮಾರ್ ನಾಯಕತ್ವದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಎರಡು ಬಾರಿ ರಣಜಿ ಟ್ರೋಫಿ ಜಯಿಸಿತ್ತು. ಹೋದ ದೇಶಿ ಋತುವಿನಲ್ಲಿ ಅವರು ಪುದುಚೇರಿ ತಂಡವನ್ನು ಪ್ರತಿನಿಧಿಸಿದ್ದರು.

ಭಾರತ ತಂಡದ ಇನ್ನೊಬ್ಬ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್, ಭರತ್ ಚಿಪ್ಲಿ, ಅಖಿಲ್ ಬಾಲಚಂದ್ರ, ಜೆ.ಕೆ. ಅನಿಲಕುಮಾರ್, ಶ್ರೀನಿವಾಸ್ ಮೂರ್ತಿ ಕನ್ನಡ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುವರು. ರೀನಾ ಡಿಸೋಜಾ, ಮಧು ಹಾಗೂ ಶ್ರೀನಿವಾಸ್ ನಿರೂಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು