ಗುರುವಾರ , ಡಿಸೆಂಬರ್ 1, 2022
20 °C

ರಾಜ್‌ಕೋಟ್‌ನಲ್ಲಿ ಇರಾನಿ ಕಪ್ ಟೂರ್ನಿ: ಪೂಜಾರಗೆ ಮಿಂಚುವ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್: ಭಾರತ ಟೆಸ್ಟ್ ತಂಡದ ಆಯ್ಕೆದಾರರ ಗಮನ ಸೆಳೆಯುವ ಛಲದಲ್ಲಿರುವ  ಚೇತೇಶ್ವರ್ ಪೂಜಾರ, ಹನುಮವಿಹಾರಿ ಹಾಗೂ ಮಯಂಕ್ ಅಗರವಾಲ್ ಅವರು ಶನಿವಾರ ಆರಂಭವಾಗಲಿರುವ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಕಳೆದ ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಹನುಮವಿಹಾರಿ ನಾಯಕತ್ವದ ರೆಸ್ಟ್ ಆಫ್‌ ಇಂಡಿಯಾ ತಂಡಗಳು ಮುಖಾಮುಖಿಯಾಗಲಿವೆ.

ಕೋವಿಡ್‌ ಕಾರಣದಿಂದಾಗಿ ಕಳೆದ ಎರಡು ವರ್ಷ ಇರಾನಿ ಟ್ರೋಫಿ ಟೂರ್ನಿ ನಡೆದಿರಲಿಲ್ಲ. 

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಪೂಜಾರ ಅವರಿಗೆ ಇದು ಉತ್ತಮ ಅವಕಾಶವಾಗಿದೆ. ಅವರು ಆತಿಥೇಯ ಸೌರಾಷ್ಟ್ರದ ಪರ ಕಣಕ್ಕಿಳಿಯಲಿದ್ದಾರೆ. ಜಯದೇವ್ ಉನದ್ಕತ್ ತಂಡದ ನಾಯಕರಾಗಿದ್ದಾರೆ. ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ  ಮಯಂಕ್ ಅಗರವಾಲ್ ಆಡುತ್ತಿದ್ದಾರೆ. ಅಲ್ಲದೇ ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್ ಹಾಗೂ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರೂ  ಈ ತಂಡದಲ್ಲಿದ್ದಾರೆ. ಕಾಶ್ಮೀರದ ವೇಗಿ ಉಮ್ರಾನ್ ಮಲೀಕ್ ಅವರೂ ತಮ್ಮ ಯಾರ್ಕರ್ ಪ್ರತಿಭೆಯನ್ನು ತೋರಲು ಸಿದ್ಧರಾಗಿದ್ದಾರೆ. 

ತಂಡಗಳು: ಸೌರಾಷ್ಟ್ರ: ಜಯದೇವ್ ಉನದ್ಕತ್ (ನಾಯಕ), ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಸವದಾ, ಚಿರಾಗ್ ಜಾನಿ, ಕಮಲೇಶ್ ಮಕ್ವಾನಾ, ಧರ್ಮೇಂದ್ರಸಿಂಹ ಜಡೇಜ, ಪ್ರೇರಕ್ ಮಂಕಡ್, ಚೇತನ್ ಸಕಾ ರಿಯಾ, ಸ್ನೆಲ್ ಪಟೇಲ್, ವಿಶ್ವ ರಾಜಸಿಂಹ ಜಡೇಜ, ಖುಷಾಂಗ್ ಪಟೇಲ್, ಹರ್ವಿಕ್ ದೇಸಾಯಿ, ಸಮರ್ಥ್ ವ್ಯಾಸ್, ಪಾರ್ಥ್ ಭಟ್, ಕಿಶನ್ ಪರಮಾರ್

ರೆಸ್ಟ್ ಆಫ್ ಇಂಡಿಯಾ: ಹನುಮವಿಹಾರಿ (ನಾಯಕ), ಮಯಂಕ್ ಅಗರವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಯಶ್ ಧುಳ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಕೆ.ಎಸ್. ಭರತ, ಉಪೇಂದ್ರ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್, ಆರ್. ಸಾಯಿಕಿಶೋರ್, ಮುಕೇಶ್ ಕುಮಾರ್, ಉಮ್ರಾನ್ ಮಲಿಕ್, ಕುಲದೀಪ್ ಸೇನ್, ಅರ್ಜನ್ ನಾಗಸ್ವಲ್ಲಾ

ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು