ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಭಾರತ ತಂಡಕ್ಕೆ ನಾಯಕನಾಗದಿದ್ದರೆ ನಷ್ಟ–ನಾಚಿಕೆಗೇಡು: ಗಂಭೀರ್

Last Updated 11 ನವೆಂಬರ್ 2020, 16:07 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಟ್ವೆಂಟಿ–20 ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡದಿದ್ದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಅಲ್ಲದೇ ಅದು ನಾಚಿಕೆಗೇಡಿನ ವಿಷಯ ಎಂದು ಮಾಜಿ ಕ್ರಿಕಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

’ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಲು ರೋಹಿತ್ ನಾಯಕತ್ವದ ಪಾಲು ದೊಡ್ಡದು. ಅವರನ್ನು ಸೀಮಿತ ಓವರ್‌ಗಳ ಭಾರತ ತಂಡಕ್ಕೆ ನಾಯಕನನ್ನಾಗಿ ಮಾಡಬೇಕು‘ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದರು.

’ತಂಡದ ಯಶಸ್ಸಿನಲ್ಲಿ ಎಲ್ಲ ಆಟಗಾರರ ಸಹಭಾಗೀತ್ವ ಮುಖ್ಯ. ತಂಡವಿದ್ದಂತೆ ನಾಯಕನಿರುತ್ತಾನೆಂದು ಒಪ್ಪಿಕೊಳ್ಳುತ್ತೇನೆ. ಆದರೆ, ನಾಯಕ ಉತ್ತಮ ಅಥವಾ ಅಲ್ಲವೇ ಎಂಬುದನ್ನು ತೀರ್ಮಾನಿಸಲು ಒಂದೇ ರೀತಿಯ ಮಾನದಂಡ ಇರಬೇಕಾಗುತ್ತದೆ. ರೋಹಿತ್ ಯಶಸ್ಸು ಅವರ ಅರ್ಹತೆಯೂ ಹೌದು‘ ಎಂದು ಸಂಸದರೂ ಆಗಿರುವ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

’ಎರಡು ವಿಶ್ವಕಪ್ ಮತ್ತು ಮೂರು ಐಪಿಎಲ್ ಪ್ರಶಸ್ತಿ ಜಯಿಸಿದ್ದರಿಂದಲೇ ಮಹೇಂದ್ರಸಿಂಗ್ ಧೋನಿ ಅವರನ್ನು ಶ್ರೇಷ್ಠ ನಾಯಕರೆಂದು ನಾವು ಹೇಳುತ್ತೇವೆ. ಅವರು ತಮ್ಮ ತಂಡಗಳನ್ನು ಗೆಲುವಿನತ್ತ ಮುನ್ನಡೆಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ರೋಹಿತ್ ಐಪಿಎಲ್ ಸಾಧನೆಯೂ ಅಂತಹದ್ದೇ. ಇದಕ್ಕಿಂತ ಇನ್ನೂ ಹೆಚ್ಚು ಏನು ಮಾಡಬೇಕು ಅವರು? ಸೀಮಿತ ಓವರ್‌ಗಳ ರಾಷ್ಟ್ರೀಯ ತಂಡಕ್ಕೆ ಅವರನ್ನು ನಾಯಕನನ್ನಾಗಿ ಮಾಡಿದಿದ್ದರೆ ಅದು ನಾಚಿಕೆಗೇಡು‘ ಎಂದಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರುತ ತಂಡದ ವೈಫಲ್ಯಕ್ಕೆ ಅದರ ನಾಯಕ ವಿರಾಟ್ ಕೊಹ್ಲಿ ಹೊಣೆ ಹೊರಬೇಕು. ನಾಯಕತ್ವ ಬಿಟ್ಟುಕೊಡಬೇಕು ಎಂದು ಗಂಭೀರ್ ಈಚೆಗೆ ಹೇಳಿದ್ದರು.

’ರಾಷ್ಟ್ರೀಯ ತಂಡದ ಮಟ್ಟಿಗೆ ವಿರಾಟ್ ಕೊಹ್ಲಿ ನಾಯಕತ್ವ ದುರ್ಬಲವೆಂದು ನಾನು ಹೇಳುತ್ತಿಲ್ಲ. ಆದರೆ ನಾಯಕತ್ವವನ್ನು ವಿಭಜಿಸಿಕೊಳ್ಳಬೇಕು. ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ರೋಹಿತ್‌ ಸಾಧನೆ ಚೆನ್ನಾಗಿದೆ. ಅವರಿಗೆ ನಾಯಕತ್ವ ನೀಡಬೇಕು‘ ಎಂದು ಗಂಭೀರ್ ಹೇಳಿದ್ದಾರೆ.

ಇಂಗ್ಲೆಂಡ್ ಮಾಜಿ ಆಟಗಾರ ಮೈಕೆಲ್ ವಾನ್ ಕೂಡ ರೋಹಿತ್ ನಾಯಕತ್ವವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

’ಭಾರತ ಟಿ20 ತಂಡಕ್ಕೆ ರೋಹಿತ್ ನಾಯಕರಾಗಲು ಅರ್ಹರು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಅವರನ್ನು ಅಭಿನಂದಿಸಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ’ಗೆಲ್ಲುವುದೇ ಹವ್ಯಾಸ ಮಾಡಿಕೊಂಡಿರುವ ತಂಡ ಮುಂಬೈ ಇಂಡಿಯನ್ಸ್‌. ವಿಶ್ವದ ಶ್ರೇಷ್ಠ ಕ್ರಿಕೆಟ್ ಫ್ರ್ಯಾಂಚೈಸಿ ಇದು. ರೋಹಿತ್ ಮತ್ತು ತಂಡವು ಈ ಪ್ರಶಸ್ತಿಯ ನಿಜವಾದ ಒಡೆಯರು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT