ಮುಂಬೈ (ಪಿಟಿಐ): ‘ಈ ಋತುವಿನ ದೇಶಿಯ ಕ್ರಿಕೆಟ್ ವೇಳಾಪಟ್ಟಿಯಿಂದ ವಿಜಯ್ ಹಜಾರೆ, ದುಲೀಪ್ ಮತ್ತು ದೇವಧರ್ ಟ್ರೋಫಿ ಟೂರ್ನಿ ತೆಗೆದು ಹಾಕುವುದು ಒಳಿತು’ ಎಂದು ಭಾರತದ ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಟೂರ್ನಿಗಳನ್ನು ರದ್ದು ಮಾಡಿದರೆ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯನ್ನು ಪೂರ್ಣ ಪ್ರಮಾಣದಲ್ಲಿ ಆಯೋಜಿಸಬಹುದು’ ಎಂದಿದ್ದಾರೆ.

‘ಕೊರೊನಾ ಬಿಕ್ಕಟ್ಟು ಬಗೆಹರಿದ ಕೂಡಲೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸು ವುದಕ್ಕೆ ಬಿಸಿಸಿಐ ಮೊದಲ ಆದ್ಯತೆ ನೀಡಲಿದೆ’ ಎಂದು ಜಾಫರ್ ಹೇಳಿದ್ದಾರೆ.

‘ಐಪಿಎಲ್ ಬಳಿಕ ಮೊದಲು ಇರಾನಿ ಕಪ್, ನಂತರ ರಣಜಿ ಟ್ರೋಫಿ ನಡೆಸುವ ಸಾಧ್ಯತೆ ಇದೆ. ಈ ಮೂರು ಟೂರ್ನಿಗಳಿಗೆ ಮಹತ್ವ ನೀಡಿದರೆ ಸಾಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.