ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ತಂಡಕ್ಕೆ ವಾಸೀಂ ಜಾಫರ್‌ ಕೋಚ್‌

Last Updated 23 ಜೂನ್ 2020, 10:53 IST
ಅಕ್ಷರ ಗಾತ್ರ

ಮುಂಬೈ : ಭಾರತದ ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್‌ ಅವರು ಉತ್ತರಾಖಂಡ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಜಾಫರ್‌ ಅವರು ಒಂದು ವರ್ಷದ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದುಮುಂದಿನ ದೇಶಿಯ ಋತುವಿನಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ನಿರ್ಮಿಸಿರುವ ಜಾಫರ್‌ ಅವರು ಈ ವರ್ಷದ ಮಾರ್ಚ್‌ನಲ್ಲಿ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದರು.

‘ಮೊದಲ ಬಾರಿಗೆ ತಂಡವೊಂದರ ಕೋಚ್‌ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದು ನನ್ನ ಪಾಲಿಗೆ ಹೊಸ ಸವಾಲು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ’ ಎಂದು ಜಾಫರ್‌ ತಿಳಿಸಿದ್ದಾರೆ.

‘2018–19ನೇ ಸಾಲಿನ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಾಖಂಡ ತಂಡವು ವಿದರ್ಭ ವಿರುದ್ಧ ಆಡಿ ಸೋತಿತ್ತು. ಈ ತಂಡವು ಈಗ ಪ್ಲೇಟ್‌ ಗುಂಪಿಗೆ (ಡಿ ಗುಂಪು) ಹಿಂಬಡ್ತಿ ಹೊಂದಿದೆ. ಹೀಗಾಗಿ ಈಗ ನನ್ನ ಎದುರು ಬಹುದೊಡ್ಡ ಸವಾಲಿದೆ’ ಎಂದು 42 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.

‘ಮುಂಬೈ ಹಾಗೂ ವಿದರ್ಭ ಪರ ಆಡುವಾಗ ಆ ತಂಡಗಳಲ್ಲಿದ್ದ ಯುವ ಆಟಗಾರರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೆ. ಉತ್ತರಾಖಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆ ತಂಡವನ್ನು ಬಲಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT