ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿನ್ನಿಂಗ್ ಕ್ಯಾಪ್ಟನ್’ ವಿರಾಟ್ ಕೊಹ್ಲಿ

ವಿಂಡೀಸ್ ಎದುರು ಭಾರತಕ್ಕೆ 2–0ಯಿಂದ ಸರಣಿ ಜಯ; ಹೀನಾಯ ಸೋಲು ಅನುಭವಿಸಿದ ಆತಿಥೇಯರು
Last Updated 3 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಜಮೈಕಾ (ಪಿಟಿಐ/ಎಎಫ್‌ಪಿ): ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತ್ಯಂತ ಜಯಶಾಲಿ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು.

ಸೋಮವಾರ ಕಿಂಗ್ಸ್‌ಟನ್‌ನಲ್ಲಿ ಭಾರತ ತಂಡವು 257 ರನ್‌ಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಜಯಿಸಿತು. ಅದರೊಂದಿಗೆ ವಿರಾಟ್ ನಾಯಕತ್ವದಲ್ಲಿ ಭಾರತವು ಜಯಿಸಿದ 28ನೇ ಜಯ ಇದಾಗಿದೆ. ಒಟ್ಟು 48 ಟೆಸ್ಟ್‌ಗಳಲ್ಲಿ ವಿರಾಟ್ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಇದು ಭಾರತ ತಂಡದ ನಾಯಕತ್ವದ ಶ್ರೇಷ್ಠ ಸಾಧನೆಯಾಗಿದೆ. ಮಹೇಂದ್ರಸಿಂಗ್ ಧೋನಿ ಅವರು 27 ಟೆಸ್ಟ್‌ಗಳಲ್ಲಿ ಜಯಿಸಿದ್ದರು. ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಅಲ್ಲದೇ ಈ ಪಂದ್ಯವನ್ನು ಗೆದ್ದು ವಿಂಡೀಸ್‌ನಲ್ಲಿ ಟೆಸ್ಟ್ ಸರಣಿಯನ್ನು 2–0ಯಿಂದ ಭಾರತವು ವಶ ಮಾಡಿಕೊಂಡಿತು. ಟ್ವೆಂಟಿ–20, ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಸತತ ಜಯಭೇರಿ ಬಾರಿಸಿದ ಸಾಧನೆಯನ್ನು ವಿರಾಟ್ ಬಳಗವು ಮಾಡಿತು.

ಹನುಮವಿಹಾರಿ ಶತಕ, ಮಯಂಕ್ ಅಗರವಾಲ್, ವಿರಾಟ್ ಮತ್ತು ಇಶಾಂತ್ ಶರ್ಮಾ ಅವರ ಅರ್ಧಶತಕಗಳ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ ಭಾರತವು 416 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಆತಿಥೇಯ ತಂಡಕ್ಕೆ ಜಸ್‌ಪ್ರೀತ್ ಬೂಮ್ರಾ ಸಿಂಹಸ್ವಪ್ನರಾದರು. ಆರು ವಿಕೆಟ್ ಕಬಳಿಸಿದ ಅವರು 117 ರನ್‌ಗಳಿಗೆ ವಿಂಡೀಸ್‌ ತಂಡವನ್ನು ಹೆಡೆಮುರಿ ಕಟ್ಟಿದರು. ಎರಡನೇ ಇನಿಂಗ್ಸ್‌ನಲ್ಲಿ 54.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 168 ರನ್‌ ಗಳಿಸಿದ ಭಾರತ ಡಿಕ್ಲೆರ್ ಮಾಡಿಕೊಂಡಿತು.

ಅಜಿಂಕ್ಯ ರಹಾನೆ (ಔಟಾಗದೆ 64;109ಎಸೆತ, 8ಬೌಂಡರಿ, 1ಸಿಕ್ಸರ್) ಮತ್ತು ಹನುಮವಿಹಾರಿ (ಔಟಾಗದೆ 53; 76ಎಸೆತ, 8ಬೌಂಡರಿ) ಅರ್ಧಶತಕಗಳನ್ನು ಹೊಡೆದು ಮಿಂಚಿದರು. ಗೆಲುವಿಗಾಗಿ 467 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆತಿಥೇಯ ತಂಡವು 210 ರನ್‌ಗಳಿಗೆ ಆಟ ಮುಗಿಸಿತು.

ಭಾರತದ ಮಧ್ಯಮವೇಗಿ ಮೊಹಮ್ಮದ್ ಶಮಿ (65ಕ್ಕೆ3) ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (58ಕ್ಕೆ3) ತಮ್ಮ ಕೈಚಳಕ ಮೆರೆದರು.ವಿಂಡೀಸ್ ತಂಡದ ಬ್ಯಾಟ್ಸ್‌ಮನ್ ಶಾಮ್ರನ್ ಬ್ರೂಕ್ಸ್‌ (50; 119ಎಸೆತ, 9ಬೌಂಡರಿ) ಅರ್ಧಶತಕ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ: 416, ವೆಸ್ಟ್ ಇಂಡೀಸ್ 117, ಎರಡನೇ ಇನಿಂಗ್ಸ್‌: ಭಾರತ: 54.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 168 ಡಿಕ್ಲೇರ್; ವೆಸ್ಟ್ ಇಂಡೀಸ್: 59.5 ಓವರ್‌ಗಳಲ್ಲಿ 210 (ಶಾಮ್ರಾ ಬ್ರೂಕ್ಸ್‌ 50, ಜರ್ಮೈನ್ ಬ್ಲ್ಯಾಕ್‌ವುಡ್ 38, ಜೇಸನ್ ಹೋಲ್ಡರ್ 39, ಡರೆನ್ ಬ್ರಾವೊ 23, ಇಶಾಂತ್ ಶರ್ಮಾ 37ಕ್ಕೆ2, ಜಸ್‌ಪ್ರೀತ್ ಬೂಮ್ರಾ 31ಕ್ಕೆ1, ಮೊಹಮ್ಮದ್ ಶಮಿ 65ಕ್ಕೆ3, ರವೀಂದ್ರ ಜಡೇಜ 58ಕ್ಕೆ3) ಫಲಿತಾಂಶ: ಭಾರತಕ್ಕೆ 257 ರನ್‌ಗಳ ಜಯ ಮತ್ತು 2–0ಯಿಂದ ಸರಣಿ ಜಯ. ಪಂದ್ಯಶ್ರೇಷ್ಠ: ಹನುಮವಿಹಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT