ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಭರತ್‌ ಶತಕದ ಅಬ್ಬರ

Last Updated 11 ಜುಲೈ 2018, 15:58 IST
ಅಕ್ಷರ ಗಾತ್ರ

ಬೆಂಗಳೂರು: ಭರತ್‌ ಗಳಿಸಿದ ಶತಕದ ನೆರವಿನಿಂದ ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (2) ತಂಡವು ಕೆಎಸ್‌ಸಿಎ ಆಶ್ರಯದ ಗುಂಪು ಒಂದರ 1, 2, 3ನೇ ಡಿವಿಷನ್‌ನ 19 ವರ್ಷದೊಳಗಿನವರ ಅಂತರ ಕ್ಲಬ್‌ ಟೂರ್ನಿಯಲ್ಲಿ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಜಯಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (2) ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 276 ರನ್‌ ಗಳಿಸಿತು. ತಂಡದ ಪರವಾಗಿ ಭರತ್‌ ಅವರು 158 ರನ್‌ ಗಳಿಸಿ ಔಟಾಗದೆ ಉಳಿದರು.

ಗುರಿ ಬೆನ್ನತ್ತಿದ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ ತಂಡವು 50 ಓವರ್‌ಗಳಲ್ಲಿ 232 ರನ್‌ ಗಳಿಸಿ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್‌: ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (2): 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 276 (ಭರತ್‌ ಔಟಾಗದೆ 158, ಇಶಾನ್‌ 29, ಎ. ವಿ. ಶ್ರೇಯಸ್‌ 26, ಪ್ರತೀಕ್‌ 34ಕ್ಕೆ 2, ನಿಜಾಮ್‌ 31ಕ್ಕೆ 4).

ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 232 (ಪ್ರಣವ್‌ 61, ಗೌತಮ್‌ ದಿಲೀಪ್‌ 20, ಮೌರ್ಯ ಔಟಾಗದೆ 50, ಅನೀಶ್‌ 34ಕ್ಕೆ 3, ಸಂಜಯ್‌ 34ಕ್ಕೆ 3). ಫಲಿತಾಂಶ: ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (2)ಗೆ 44 ರನ್‌ಗಳ ಜಯ.

ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (1): 45.5 ಓವರ್‌ಗಳಲ್ಲಿ 163 (ಚಿರಾಗ್‌ 35, ಆದಿತ್ಯ 21, ಮಂಜು 20, ಪ್ರತೀಕ್‌ 25, ಪ್ರದೀಪ್‌ 40, ಶ್ರೀವತ್ಸ್ 25ಕ್ಕೆ 3, ಅನಿಲ್‌ 38ಕ್ಕೆ 3).

ದೂರವಾಣಿ ಕ್ರಿಕೆಟರ್ಸ್‌ (1): 28.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 (ವಿ. ಮೋಹಿತ್‌ 107, ಪ್ರದೀಪ್‌ 34ಕ್ಕೆ 3, ಪ್ರತೀಕ್‌ 42ಕ್ಕೆ 2). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 4 ವಿಕೆಟ್‌ಗಳ ಗೆಲುವು.

ಬಿಇಎಲ್‌ ಕಾಲೋನಿ ರಿಕ್ರಿಯೇಷನ್‌ ಕ್ಲಬ್‌: 30 ಓವರ್‌ಗಳಲ್ಲಿ 134 (ಜಬ್ಬಾರ್‌ 28, ಮನೋಜ್‌ 24, ಫೈಜಾನ್‌ 20, ಶ್ರೀರಾಮ್‌ 16ಕ್ಕೆ 2, ಬಿಶಜ್‌ 29ಕ್ಕೆ 2, ಸೈಯದ್‌ ಖನಿತ್‌ 8ಕ್ಕೆ 2).

ವಿಶ್ವೇಶ್ವರಪುರಂ ಕ್ರಿಕೆಟ್‌ ಕ್ಲಬ್‌ (2): 20.2 ಓವರ್‌ಗಳಲ್ಲಿ 126 (ಯೂನಸ್‌ 22, ಸೈಯದ್‌ ನವಾಜ್‌ 44, ಸಾಯಿ ಕಾರ್ತಿಕ್‌ 30ಕ್ಕೆ 2, ಆದರ್ಶ್‌ 49ಕ್ಕೆ 3, ಪವನ್‌ 24ಕ್ಕೆ 2). ಫಲಿತಾಂಶ:ಬಿಇಎಲ್‌ ಕಾಲೋನಿ ರಿಕ್ರಿಯೇಷನ್‌ ಕ್ಲಬ್‌ಗೆ 8 ರನ್‌ಗಳಿಂದ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT