ಲೀಡ್ಸ್: ಸುಮಾರು 8 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ಮರಳಿದ ಕನ್ನಡಿಗ ಕರುಣ್ ನಾಯರ್ ಖಾತೆ ತೆರೆಯಲು ವಿಫಲರಾಗಿ ನಿರಾಸೆ ಮೂಡಿಸಿದರು.
.ಬಾಲ್ಯದ ಗೆಳೆಯರಾದ ರಾಹುಲ್, ಪ್ರಸಿದ್ಧ ಜತೆ ಆಡುವುದರಿಂದ ಹೆಚ್ಚು ಆರಾಮ: ಕರುಣ್.
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಅವರು 4 ಎಸೆತಗಳನ್ನು ಎದುರಿಸಿ ಸೊನ್ನೆಗೆ ಔಟಾಗಿ ಭಾರವಾದ ಹೆಜ್ಜೆಗಳೊಂದಿಗೆ ಪೆವಿಲಿಯನ್ಗೆ ಮರಳಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದ ಮೊದಲ ಸೆಷನ್ನಲ್ಲಿ ನಾಯಕ ಶುಭಮನ್ ಗಿಲ್ ಔಟಾದ ಬಳಿಕ ಪೆವಿಲಿಯನ್ಗೆ ಬಂದ ಅವರು, ಆತ್ಮ ವಿಶ್ವಾಸದಿಂದಲೇ ಬೌಲರ್ಗಳನ್ನು ಎದುರಿಸಿದರು.
.ಭಾರತದ ಡ್ರೆಸಿಂಗ್ ರೂಮ್ ಮರುಪ್ರವೇಶಿಸಿದ ಕರುಣ್ ನಾಯರ್ .
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಸೆತದಲ್ಲಿ ನಾಯರ್ ಹೊಡೆದ ಚೆಂಡು ಗಾಳಿಯಲ್ಲಿ ಸಾಗಿತು. ಒಲಿ ಪೋಪ್ ಹಾರಿ ಅದ್ಭುತವಾಗಿ ಅದನ್ನು ಕ್ಯಾಚ್ ಆಗಿ ಪರಿವರ್ತಿಸಿದರು.

ಕಳೆದ ತಿಂಗಳು ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡದ ಪರವಾಗಿ ಅನಧೀಕೃತ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್ ಮೇಲೆ ಅಭಿಮಾನಿಗಳ ನಿರೀಕ್ಷೆಗಳ ಭಾರವೇ ಇತ್ತು. ಅಲ್ಲದೆ ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್ನಲ್ಲಿ ರನ್ ಸೂರೆಗೈದಿದ್ದ ಅಭಿಮಾನಿಗಳಿಗೆ ಅವರು ಉತ್ತಮವಾಗಿ ಬ್ಯಾಟ್ ಮಾಡುವ ಭರವಸೆ ಇಟ್ಟುಕೊಂಡಿದ್ದರು.

ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಅವಕಾಶ ಸಿಗದೆ ಬೇಸರಗೊಂಡಿದ್ದ ಅವರು, ‘ಕ್ರಿಕೆಟ್ ನನಗೊಂದು ಅವಕಾಶ ಕೊಡು’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಅವರ ಬೆಂಬಲಕ್ಕೆ ಕ್ರಿಕೆಟ್ ಅಭಿಮಾನಿಗಳು ನಿಂತಿದ್ದರು.
.ಕರುಣ್ ನಾಯರ್ಗೆ ‘ಇನ್ನೊಂದು ಅವಕಾಶ’ ಕೊಟ್ಟ ಕ್ರಿಕೆಟ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.