ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಟೆಸ್ಟ್ ಗೆ ರಾಹುಲ್ ಅಲಭ್ಯ; ಕರ್ನಾಟಕದ ಪಡಿಕ್ಕಲ್‌ಗೆ ದೊರೆತ ಅವಕಾಶ

Published 12 ಫೆಬ್ರುವರಿ 2024, 16:26 IST
Last Updated 12 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ರಾಜ್‌ಕೋಟ್: ಇಂಗ್ಲೆಂಡ್ ವಿರುದ್ಧ ಫೆ. 15ರಿಂದ ನಡೆಯಲಿರುವ 3ನೇ ಕ್ರಿಕೆಟ್ ಟೆಸ್ಟ್‌ಗೆ ಅನುಭವಿ ಬ್ಯಾಟರ್ ಕೆ.ಎಲ್.ರಾಹುಲ್ ಅಲಭ್ಯರಾಗಿದ್ದಾರೆ. ಇವರ ಬದಲು ಕನ್ನಡಿಗ ದೇವದತ್ತ ಪಡಿಕ್ಕಲ್‌ ಅವರಿಗೆ ಅವಕಾಶ ಲಭಿಸಿದೆ.

ತೊಡೆಯ ಸ್ನಾಯು ನೋವಿನಿಂದ ಬಳಲುತ್ತಿರುವ ರಾಹುಲ್ ಅವರು ಸಂಪೂರ್ಣ ಗುಣಮುಖರಾಗದ ಕಾರಣ ಬಿಸಿಸಿಐ ಈ ನಿರ್ಣಯ ಕೈಗೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ 2 ನೇ ಟೆಸ್ಟ್‌ನಲ್ಲೂ ಅವರು ಆಡಲಿಲ್ಲ.

ಇವರ ಸ್ಥಾನಕ್ಕೆ ದೇವದತ್ತ ಪಡಿಕ್ಕಲ್‌ ಸ್ಥಾನ ಪಡೆದಿದ್ದಾರೆ. ರಣಜಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 151 ರನ್ ಸಿಡಿಸಿದ ಎಡಗೈ ಬ್ಯಾಟರ್, ರಾಹುಲ್ ಬದಲು ಆಡಲಿದ್ದಾರೆ.

ಈ ಪಂದ್ಯ ಹೊರತುಪಡಿಸಿ ಉಳಿದವುಗಳಿಗೆ ರಾಹುಲ್ ಲಭ್ಯತೆ ಅವರ ಫಿಟ್ನೆಸ್ ಆಧರಿಸಿದೆ. ರಾಜ್ಕೋಟ್‌ನಲ್ಲಿ ನಡೆಯುವ ಮೂರನೇ ಟೆಸ್ಟ್ ಗೆ ಅವರು ಅಲಭ್ಯ. ಸದ್ಯ ಅವರು ಶೇ 90 ರಷ್ಟು ಗುಣಮುಖರಾಗಿದ್ದಾರೆ. ಬಿಸಿಸಿಐನ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಬಿಸಿಸಿಐ ಹೇಳಿದೆ.

ಮೂರನೇ ಪಂದ್ಯವು ರಾಜ್‌ಕೋಟ್‌ನಲ್ಲಿ ಫೆಬ್ರುವರಿ 15 ರಂದು ನಡೆಯಲಿದೆ. ಉಳಿದೆರಡು ಪಂದ್ಯಗಳು ಕ್ರಮವಾಗಿ ರಾಂಚಿ (ಫೆ.23) ಹಾಗೂ ಧರ್ಮಶಾಲಾದಲ್ಲಿ (ಮಾ.7) ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT