ಗುರುವಾರ , ಜೂನ್ 24, 2021
25 °C

ಕೋವಿಡ್‌: ₹ 11 ಕೋಟಿ ಸಂಗ್ರಹಿಸಿದ ವಿರಾಟ್‌–ಅನುಷ್ಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನಡೆಸುತ್ತಿರುವ ಕೋವಿಡ್ ಪರಿಹಾರ ನಿಧಿ ಸಂಗ್ರಹ ಅಭಿಯಾನದಲ್ಲಿ ಸುಮಾರು ₹ 11 ಕೋಟಿ ಸಂಗ್ರಹವಾಗಿದೆ.

ಕೊಹ್ಲಿ ದಂಪತಿ ಆರಂಭದಲ್ಲಿ ₹ 2 ಕೋಟಿ ದೇಣಿಗೆ ನೀಡಿ ಅಭಿಯಾನ ಆರಂಭಿಸಿದ್ದರು. ಇಲ್ಲಿ ಸಂಗ್ರಹವಾದ ಮೊತ್ತವನ್ನು ಆ್ಯಕ್ಟ್ ಗ್ರ್ಯಾಂಟ್ಸ್‌ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆಯು ಆಮ್ಲಜನಕ, ವೈದ್ಯರ ಸೇವೆ, ಲಸಿಕೆ ಕುರಿತು ಜಾಗೃತಿ ಹಾಗೂ ಟೆಲಿ ಮೆಡಿಸಿನ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ಒಂದು ವಾರದ ಅವಧಿಗೆ ನಡೆಯುತ್ತಿರುವ ಅಭಿಯಾನಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಒಟ್ಟು ₹ 7 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಮೊತ್ತವನ್ನು ದಾಟಿ ಅಭಿಯಾನ ಮುಂದುವರಿದಿದೆ.

ಇಸ್ಪೋರ್ಟ್ಸ್ ಸಂಸ್ಥೆಯಾದ ಎಂಪಿಎಲ್‌ ಕೂಡ ಕೋವಿಡ್ ಪರಿಹಾರ ನಿಧಿಗೆ ₹ 5 ಕೋಟಿ ನೀಡಿದೆ.

‘ನಿಧಿ ಸಂಗ್ರಹ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು