ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ಅಭ್ಯಾಸ ಶುರು

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಭಾರತ ತಂಡದ ಸಿದ್ಧತೆ: ಬಳಗಕ್ಕೆ ಇಂದು ರೋಹಿತ್ ಶರ್ಮಾ
Published 29 ಮೇ 2023, 16:49 IST
Last Updated 29 ಮೇ 2023, 16:49 IST
ಅಕ್ಷರ ಗಾತ್ರ

ಅರುಂಡೆಲ್, ಸಸೆಕ್ಸ್: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಎರಡು ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಈಗ ಟೆಸ್ಟ್ ಮಾದರಿಗೆ ಮರಳಲು ಸಿದ್ಧರಾಗಿದ್ದಾರೆ.

ಜೂನ್ 7ರಿಂದ ಇಂಗ್ಲೆಂಡ್‌ನ  ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಸೋಮವಾರ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ ನಲ್ಲಿ  ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ಅವರೊಂದಿಗೆ ಅಭ್ಯಾಸ ನಡೆಸಿದರು. 

ಐಪಿಎಲ್‌ನಲ್ಲಿ ಆಡುವಾಗ ತಮ್ಮ ಎಡಭುಜದ ಗಾಯದ ಚಿಕಿತ್ಸೆಗಾಗಿ ಉನದ್ಕತ್ ತಂಡದಿಂದ ಹೊರಬಿದ್ದಿದ್ದರು. ಇದೀಗ ಅವರು ಫಿಟ್‌ ಆಗಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮಂಗಳವಾರ ತಂಡವನ್ನು ಸೇರಿಕೊಳ್ಳುವರು. ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ಪ್ಲೇಆಫ್ ಪ್ರವೇಶಿಸಿತ್ತು.

’ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾ ಎದುರಿನ ಡಬ್ಲ್ಯುಟಿಸಿ ಫೈನಲ್‌ಗಾಗಿ ಅರುಂಡೆಲ್ ಕ್ಯಾಸಲ್ ಕ್ರಿಕೆಟ್‌ ಕ್ಲಬ್‌ನಲ್ಲಿ ಅಭ್ಯಾಸ  ಆರಂಭಿಸಿದ್ದಾರೆ‘ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ನೂತನ ಪೋಷಾಕು ಧರಿಸಿಕೊಂಡ ಕೊಹ್ಲಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಅವರು ಜಾಗಿಂಗ್ ಮಾಡಿದರು. ಆಫ್‌ಸ್ಪಿನ್ನರ್ ಆರ್. ಅಶ್ವಿನ್ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು. ಉನದ್ಕತ್ ಅವರು  ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬೌಲಿಂಗ್ ತರಬೇತುದಾರ ಪಾರಸ್ ಮಾಂಬ್ರೆ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಚೇತೇಶ್ವರ್ ಪೂಜಾರ ಅವರು ಸಸೆಕ್ಸ್ ತಂಡದ ಪರವಾಗಿ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.

ಜೈಸ್ವಾಲ್ ಸೇರ್ಪಡೆ

ಮುಂಬೈ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಋತುರಾಜ್ ಗಾಯಕವಾಡ ಬದಲಿಗೆ ಜೈಸ್ವಾಲ್ ಅವರನ್ನು  ಆಯ್ಕೆ ಮಾಡಲಾಗಿದೆ. 

ಗಾಯಕವಾಡ್ ಅವರ ವಿವಾಹ ಸಮಾರಂಭವು ಜೂನ್ 3 ಮತ್ತು 4ರಂದು ನಡೆಯಲಿದೆ.

ಜೈಸ್ವಾಲ್ ಅವರು ಅವರು ರೋಹಿತ್, ರವೀಂದ್ರ ಜಡೇಜ, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಕೆ.ಎಸ್. ಭರತ್ ಮತ್ತು ಅಜಿಂಕ್ಯ ರಹಾನೆ ಅವರೊಂದಿಗೆ ತಂಡ ಸೇರಿಕೊಳ್ಳುವರು.

2021ರಲ್ಲಿಯೂ ಭಾರತ ತಂಡವು ಫೈನಲ್ ಪ್ರವೇಶಿಸಿತ್ತು. ನ್ಯೂಜಿಲೆಂಡ್ ವಿರುದ್ಧ ಪರಾಭವಗೊಂಡಿತ್ತು.

Rajasthan Royals
Rajasthan Royals

Cut-off box - ಆಸ್ಟ್ರೇಲಿಯಾ ತಂಡಕ್ಕೆ ಜೋಶ್ ಲಂಡನ್ (ಪಿಟಿಐ): ವೇಗಿ ಜೋಶ್ ಹ್ಯಾಜಲ್‌ವುಡ್ ಅವರಿಗೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸೋಮವಾರ 15 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ. ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವರು. 32 ವರ್ಷದ ಹ್ಯಾಜಲ್‌ವುಡ್ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ತಂಡ : ಪ್ಯಾಟ್ ಕಮಿನ್ಸ್ (ನಾಯಕ) ಸ್ಕಾಟ್ ಬೊಲಾಂಡ್ ಅಲೆಕ್ಸ್ ಕ್ಯಾರಿ ಕ್ಯಾಮರಾನ್ ಗ್ರೀನ್ ಮಾರ್ಕಸ್ ಹ್ಯಾರಿಸ್ ಜೋಶ್ ಹ್ಯಾಜಲ್‌ವುಡ್ ಟ್ರಾವಿಸ್ ಹೆಡ್ ಜೋಶ್ ಇಂಗ್ಲಿಸ್ ಉಸ್ಮಾನ್ ಖ್ವಾಜಾ ಮಾರ್ನಸ್ ಲಾಬುಷೇನ್ ನೇಥನ್ ಲಯನ್ ಟಾಡ್ ಮರ್ಫಿ ಸ್ಟೀವ್ ಸ್ಮಿತ್ ಮಿಚೆಲ್ ಸ್ಟಾರ್ಕ್ ಡೇವಿಡ್ ವಾರ್ನರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT