ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಧ್ಯಮವೇಗಿ ವಾಸುಕಿ ಕೌಶಿಕ್ ಅವರು ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆದು ಗೋವಾ ಬಳಗದಲ್ಲಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ದೇಶಿ ಟೂರ್ನಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಮುಖ ಬೌಲರ್ ಆಗಿದ್ದ 32 ವರ್ಷದ ಕೌಶಿಕ್ ಹೋದ ವರ್ಷದ ರಣಜಿ ಋತುವಿನಲ್ಲಿ ಪ್ರಮುಖ ಬೌಲರ್ಗಳ ಗೈರುಹಾಜರಿಯಲ್ಲಿ ತಂಡದ ಬೌಲಿಂಗ್ ಸಾರಥ್ಯವನ್ನು ಕೌಶಿಕ್ ಸಮರ್ಥವಾಗಿ ನಿಭಾಯಿಸಿದ್ದರು. ಅಲ್ಲದೇ ಕಳೆದ ಋತುವಿನಲ್ಲಿ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ ಅವರು ಒಟ್ಟು 18 ವಿಕೆಟ್ ಗಳಿಸಿದ್ದರು. ಅದರಲ್ಲಿ ಒಂದು 5 ವಿಕೆಟ್ ಗೊಂಚಲು ಸೇರಿತ್ತು. ಆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದರು. ತಮಿಳುನಾಡು ತಂಡದ ವರುಣ್ ಚಕ್ರವರ್ತಿ ಅವರು ಕೂಡ 18 ವಿಕೆಟ್ ಪಡೆದಿದ್ದರು. ಪಂಜಾಬ್ ವೇಗಿ ಅರ್ಷದೀಪ್ ಸಿಂಗ್ (20) ಅಗ್ರಸ್ಥಾನ ಪಡೆದಿದ್ದರು.

‘ನನ್ನ ಮನವಿಗೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಇನ್ನೊಂದು ವರ್ಷವಾದರೂ ಕರ್ನಾಟಕದಲ್ಲಿ ಆಡುವಂತೆ ಪದಾಧಿಕಾರಿಗಳು ಸಲಹೆ ನೀಡಿದರು. ಆದರೆ, ಇನ್ನು ಮುಂದೆ ಭಾರತ ತಂಡಕ್ಕೆ ಆಡುವ ಅವಕಾಶ ಸಿಗುವುದು ಕಷ್ಟ. ಇನ್ನೆರಡು, ಮೂರು ವರ್ಷ ಬಿಟ್ಟರೆ ನಂತರ ಬೇರೆ ರಾಜ್ಯಗಳ ತಂಡಗಳಿಂದಲೂ ಸ್ಪಂದನೆ ಸಿಗುವುದಿಲ್ಲ. ಆದ್ದರಿಂದ ನಾನು ಗೋವಾಕ್ಕೆ ತೆರಳಲು ನಿರ್ಧರಿಸಿದೆ. ದೇಶಿ ಕ್ರಿಕೆಟ್ನಲ್ಲಿ ಆದಷ್ಟು ಹೆಚ್ಚು ವರ್ಷಗಳ ಕಾಲ ಆಡುವ ಗುರಿ ನನ್ನದು‘ ಎಂದು ಕೌಶಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ವೃತ್ತಿಯಿಂದ ಎಂಜಿನಿಯರ್: ಕೌಶಿಕ್ ಅವರು ರಾಜ್ಯ ಕ್ರಿಕೆಟ್ ತಂಡಕ್ಕೆ 2019ರಲ್ಲಿ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಅವರು ಸಾಫ್ಟವೇರ್ ಕಂಪೆನಿಯ ಉದ್ಯೋಗಿಯಾಗಿದ್ದರು. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ತಮ್ಮ ಉದ್ಯೋಗ ತ್ಯಜಿಸಿ ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದರು.

ಅಲ್ಲಿಂದ ಇಲ್ಲಿಯವರೆಗೆ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ 93 ವಿಕೆಟ್ ಗಳಿಸಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಗಳಿಸಿದ್ದರು. ಏಕದಿನ ಮಾದರಿಯಲ್ಲಿ 44 ಪಂದ್ಯಗಳಿಂದ 88 ವಿಕೆಟ್ ಹಾಗೂ 38 ಟಿ20 ಪಂದ್ಯಗಳಿಂದ 48 ವಿಕೆಟ್ ಗಳಿಸಿದ್ದಾರೆ.

‘ಕರ್ನಾಟಕ ತಂಡದಲ್ಲಿ ಆಡುವಾಗ ರಣಜಿ ಟ್ರೋಫಿ ಜಯಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರ ಇದೆ. ಒಂದು ಬಾರಿ ಸೆಮಿಫೈನಲ್ ವರೆಗೂ ತಂಡ ಬಂದಿತ್ತು. ಆದರೆ ಕನಸು ಕೈಗೂಡಿರಲಿಲ್ಲ. ಅದನ್ನು ಬಿಟ್ಟರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಪ್ರಮುಖ ಬಿಸಿಸಿಐ ಟ್ರೋಫಿ ಜಯದಲ್ಲಿ ಭಾಗಿಯಾಗಿದ್ದೆ ಎನ್ನುವ ತೃಪ್ತಿ ಇದೆ’ ಎಂದೂ ಕೌಶಿಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.