ಭಾನುವಾರ, ಸೆಪ್ಟೆಂಬರ್ 15, 2019
30 °C

ಹುಬ್ಬಳ್ಳಿ ಟೈಗರ್ಸ್‌ ಸಾಧಾರಣ ಮೊತ್ತ

Published:
Updated:

ಮೈಸೂರು: ಪ್ರವೀಣ್‌ ದುಬೆ ಅವರ ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಗೆಲುವಿಗೆ ಸಾಧಾರಣ ಗುರಿ ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 ರನ್‌ ಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ತಂಡ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು. ವಾರಿಯರ್ಸ್‌ ತಂಡದ ರಾಮ್‌ ಸರಿಖ್‌ ಯಾದವ್, ವೈಶಾಖ್‌ ವಿಜಯಕುಮಾರ್‌ ಶಿಸ್ತಿನ ಬೌಲಿಂಗ್‌ ಪ್ರದರ್ಶನ ನೀಡಿದರು.

ಪ್ರವೀಣ್‌ ದುಬೆ ನಾಲ್ಕು ಬೌಂಡರಿ, ಎರಡು ಸಿಕ್ಸರ್‌ಗಳ ನೆರವಿನಿಂದ 52 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 (ಲವನೀತ್‌ ಸಿಸೋಡಿಯಾ 29, ಎಂ.ವಿಶ್ವನಾಥನ್‌ 18, ಶಿಶಿರ್‌ ಭವಾನೆ 16, ಪ್ರವೀಣ್‌ ದುಬೆ 52, ರಾಮ್‌ ಸಾರಿಖ್‌ ಯಾದವ್ 26ಕ್ಕೆ 2, ವೈಶಾಖ್‌ ವಿಜಯಕುಮಾರ್ 30ಕ್ಕೆ 2, ಎಂ.ವೆಂಕಟೇಶ್ 30ಕ್ಕೆ 2) ವಿವರ ಅಪೂರ್ಣ

Post Comments (+)