ಸೋಮವಾರ, ಸೆಪ್ಟೆಂಬರ್ 27, 2021
25 °C
ನಸೂರ್ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಲೀಗ್ ಕ್ರಿಕೆಟ್ ಟೂರ್ನಿ

ಎಂಗ್ರೇಡ್ಸ್‌ ಕ್ಲಬ್ ತಂಡಕ್ಕೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ನಡೆಸಿದ ಸಚಿನ್ ಶಿಂಧೆ ಎಂಗ್ರೇಡ್ಸ್‌ ಕ್ರಿಕೆಟ್ ಕ್ಲಬ್ ತಂಡಕ್ಕೆ ಭರ್ಜರಿ ಗೆಲುವು ಗಳಿಸಿಕೊಟ್ಟರು.

ನಸೂರ್ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು ಒಂದರ ಮೂರನೇ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಎಂಗ್ರೇಡ್ಸ್‌, 183 ರನ್‌ಗಳಿಂದ ಕ್ಯಾವಲಿಯರ್ಸ್ ಕ್ರಿಕೆಟ್‌ ಕ್ಲಬ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಎಂಗ್ರೇಡ್ಸ್‌ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 313 ರನ್‌ ಗಳಿಸಿತ್ತು. ಸಚಿನ್‌ ಶಿಂಧೆ 58 ರನ್‌ ಗಳಿಸಿ ಮಿಂಚಿದ್ದರು. ಅಜಯ್ ಪಾಟೀಲ್‌ (62) ಮತ್ತು ಅವಿಶೇಕ್‌ (43) ಉತ್ತಮ ಕಾಣಿಕೆ ನೀಡಿದರು. ಗುರಿ ಬೆನ್ನತ್ತಿದ ಕ್ಯಾವಲಿಯರ್ಸ್‌ ತಂಡದ ಮೂರು ವಿಕೆಟ್ ಕಬಳಿಸಿದ ಸಚಿನ್ ಭಾರಿ ಪೆಟ್ಟು ನೀಡಿದರು.

ಸಂಕ್ಷಿಪ್ತ ಸ್ಕೋರು: ಎಂಗ್ರೇಡ್ಸ್‌ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 313 (ಸಚಿನ್ ಶಿಂಧೆ 58, ಅಜಯ್ ಪಾಟೀಲ್ 62, ಅವಿಶೇಕ್‌ 43, ಸುಹಾಸ್‌ 28; ಅಭಿಷೇಕ್‌ ಬಿ 34ಕ್ಕೆ2, ಲಂಕೇಶ್‌ 59ಕ್ಕೆ4); ಕ್ಯಾವಲಿಯರ್ಸ್‌ ಕ್ರಿಕೆಟ್ ಕ್ಲಬ್‌: 27.3 ಓವರ್‌ಗಳಲ್ಲಿ 130 (ಸೈಯದ್‌ ಜಫರುದ್ದೀನ್‌ 34; ಪ್ರಜ್ವಲ್‌ ಕೆ 21ಕ್ಕೆ2, ಯತೀಶ್‌ 32ಕ್ಕೆ2, ಸಚಿನ್ ಶಿಂಧೆ 6ಕ್ಕೆ3). ಫಲಿತಾಂಶ: ಎಂಗ್ರೇಡ್ಸ್‌ ಕ್ರಿಕೆಟ್ ಕ್ಲಬ್‌ಗೆ 183 ರನ್‌ಗಳ ಜಯ; ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟರ್ಸ್‌ ಕೆಜಿಎಫ್: 41.3 ಓವರ್‌ಗಳಲ್ಲಿ 128 (ಅಬಿನಾಶ್‌ 51, ಅಂಕುಶ್‌ ಬೋಪಣ್ಣ 25, ಶಶಿಧರ್‌ 26; ನಿತಿನ್ ಮುಲ್ಕಿ 10ಕ್ಕೆ2, ನಮನ್‌ ಜಿ 22ಕ್ಕೆ4); ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌ (2): 32.5 ಓವರ್‌ಗಳಲ್ಲಿ 4ಕ್ಕೆ 132 (ರಾಜ ಎಂ 21, ಶ್ರೀಕರ್‌ 32, ದಿಲೀಪ್‌ ಅಜೇಯ 40). ಫಲಿತಾಂಶ: ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌ಗೆ 6 ವಿಕೆಟ್‌ಗಳ ಜಯ; ಜಾಲಿ ಕ್ರಿಕೆಟರ್ಸ್‌: 41.2 ಓವರ್‌ಗಳಲ್ಲಿ 169 (ಅನಿರುದ್ಧ 38, ನಿಖಿಲ್‌ 47; ವಿಶಾಲ್ ಕೊಠಾರಿ 33ಕ್ಕೆ2, ಶಿವಂ ಶುಕ್ಲ 23ಕ್ಕೆ2, ಅಮನ್ ರಾಜ್‌ 18ಕ್ಕೆ2); ಮಲ್ಲೇಶ್ವರಂ ಜಿಮ್ಖಾನ: 43.1 ಓವರ್‌ಗಳಲ್ಲಿ 6ಕ್ಕೆ 170 (ಅಮನ್‌ ರಾಜ್‌ 94, ನವೀನ್‌ 31; ಅಮೋಘ್‌ ಡೊಕ್ಕ 24ಕ್ಕೆ2, ಅಭ್ಯುದಯ ಉಪಾಧ್ಯಾಯ 35ಕ್ಕೆ2). ಫಲಿತಾಂಶ: ಮಲ್ಲೇಶ್ವರಂ ಜಿಮ್ಖಾನಕ್ಕೆ 4 ವಿಕೆಟ್‌ಗಳ ಜಯ; ನೆಪ್ಚೂನ್ ಕ್ರಿಕೆಟ್ ಕ್ಲಬ್‌: 49.3 ಓವರ್‌ಗಳಲ್ಲಿ 242 (ರಯಾನ್‌ ಅಹಮ್ಮದ್‌ 52, ಮದನ್‌ ಜಾಗ 62, ವಿಜಯಕಾಂತ್‌ 34, ನಾಗೇಂದ್ರ 46ಕ್ಕೆ3, ವಿಶಾಲ್‌ ಸಂಜಯ್‌ ಕುಮಾರ್‌ 44ಕ್ಕೆ2, ಕ್ಲೆಮೆಂಟ್‌ ರಾಜಮೋಹನ್‌ 36ಕ್ಕೆ3); ಹೇಮಂಡ್ಸ್‌ ಕ್ರಿಕೆಟ್ ಕ್ಲಬ್‌: 48.5 ಓವರ್‌ಗಳಲ್ಲಿ 5ಕ್ಕೆ 244 (ಅರವಿಂದ 37, ಲಿಖಿತ್‌ 47, ಸಿದ್ಧಿತ್ ಗುಲ್ವಾಡಿ 72, ಚಂದನ್‌ ಕದಮ್‌ ಅಜೇಯ 43). ಫಲಿತಾಂಶ: ಹೇಮಂಡ್ಸ್‌ ಕ್ರಿಕೆಟ್ ಕ್ಲಬ್‌ಗೆ 5 ವಿಕೆಟ್ ಜಯ; ಕೋಲ್ಸ್‌ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 248 (ತನು 70, ಸೋಮಶೇಖರ್ 37, ರೂಪೇಶ್‌ ಅಜೇಯ 39; ಅನೀಶ್‌ 50ಕ್ಕೆ3, ವಿನೋದ್‌ 38ಕ್ಕೆ3, ತೇಜಸ್‌ ಅಂಗಡಿ 35ಕ್ಕೆ2); ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್ ಕ್ಲಬ್‌: 40.5 ಓವರ್‌ಗಳಲ್ಲಿ 190 (ಬದ್ರಿ ನಾರಾಯಣ್‌ 38, ಕುನಾಲ್ ಕಪೂರ್ 55; ಮಧುಸೂದನ್‌ 27ಕ್ಕೆ4, ಭರತ್‌ ಪ್ರಸಾದ್‌ 33ಕ್ಕೆ2). ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್ ಕ್ಲಬ್‌ಗೆ 58 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು