ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 28ರಿಂದ ಲಂಕಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ

Last Updated 28 ಜುಲೈ 2020, 13:40 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು (ಎಸ್‌ಎಲ್‌ಸಿ) ಇದೇ ಮೊದಲ ಬಾರಿ ಆಯೋಜಿಸುತ್ತಿರುವ ಲಂಕಾ ಪ್ರೀಮಿಯರ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ಆಗಸ್ಟ್‌ 28ರಂದು ಆರಂಭವಾಗಲಿದೆ. ಸೋಮವಾರ ನಡೆದ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೀಗ್‌ ನಡೆಸಲು ಅನುಮೋದನೆ ದೊರೆತಿದೆ ಎಂದು ಎಸ್‌ಎಲ್‌ಸಿ ಹೇಳಿದೆ.

ಐದು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 23 ಪಂದ್ಯಗಳ ಟೂರ್ನಿ ಇದಾಗಿರಲಿದೆ. ಫೈನಲ್‌ ಪಂದ್ಯ ಸೆಪ್ಟೆಂಬರ್‌ 20ರಂದು ನಡೆಯಲಿದೆ.

’ಆರ್‌.ಪ್ರೇಮದಾಸ, ರಣಗಿರಿ ಡಂಬುಲ, ಪಲ್ಲೆಕೆಲೆ ಹಾಗೂ ಮಹಿಂದ ರಾಜಪಕ್ಷೆ ಅಂತರರಾಷ್ಟ್ರೀಯ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಕೊಲಂಬೊ, ಕ್ಯಾಂಡಿ, ಗಾಲ್‌, ಡಂಬುಲ ಹಾಗೂ ಜಾಫ್ನಾ ಹೆಸರಿನ ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ‘ ಎಂದು ಎಸ್‌ಎಲ್‌ಸಿ ತಿಳಿಸಿದೆ.

‘ಶ್ರೀಲಂಕಾದ ಪ್ರಮುಖ ಆಟಗಾರರು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ 70 ಆಟಗಾರರು ಹಾಗೂ ಹತ್ತು ಮಂದಿ ಉನ್ನತ ದರ್ಜೆಯ ಕೋಚ್‌ಗಳು ಟೂರ್ನಿಗೆ ಲಭ್ಯವಿರುವುದಾಗಿ ಹೇಳಿದ್ದಾರೆ’ ಎಂದೂ ಮಂಡಳಿ ವಿವರಿಸಿದೆ.

ಪ್ರತಿ ಫ್ರಾಂಚೈಸ್‌ಗಳು ಆರು ಮಂದಿ ವಿದೇಶಿ ಆಟಗಾರರನ್ನು ಹೊಂದಲು ಅವಕಾಶವಿದೆ. ಆದರೆ ಆಡುವ 11ರ ಬಳಗದಲ್ಲಿ ಈ ಸಂಖ್ಯೆ ನಾಲ್ಕಕ್ಕೆ ಸೀಮಿತ. ಟೂರ್ನಿಯ ವೇಳಾಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

ಲಂಕಾ ಪ್ರೀಮಿಯರ್‌ ಲೀಗ್‌ ನಡೆಸುವ ಆಲೋಚನೆ 2018ರಲ್ಲೇ ಹುಟ್ಟಿಕೊಂಡಿತ್ತು. ಈ ವರ್ಷದ ಆಗಸ್ಟ್‌ 8ರಿಂದ 22ರವರೆಗೆ ಟೂರ್ನಿಯನ್ನು ನಡೆಸುವ ವಿಶ್ವಾಸವನ್ನೂ ಮಂಡಳಿ ಹೊಂದಿತ್ತು. ಆದರೆ ವಿದೇಶಿ ಆಟಗಾರರ ಆಗಮನಕ್ಕೆ ರಾಷ್ಟ್ರದ ಗಡಿಗಳನ್ನು ಮುಕ್ತವಾಗಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT