ಇಂದೋರ್: ಶುಭಂ ಶರ್ಮಾ ಅವರ ತಾಳ್ಮೆಯ ಶತಕದ ಬಲದಿಂದ ಮಧ್ಯಪ್ರದೇಶ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕದ ಎದುರು ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತ ಪೇರಿಸಿದೆ.

ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ ಮೂರನೇ ದಿನವಾದ ಭಾನುವಾರದ ಮುಕ್ತಾಯಕ್ಕೆ ಶುಭಂ (ಬ್ಯಾಟಿಂಗ್ 143; 243ಎ, 4X13, 6X2) ಅವರ ಶತಕದ ಬಲದಿಂದ 140 ಓವರ್ಗಳಲ್ಲಿ 8 ವಿಕೆಟ್ಗಳಿಗೆ 425 ರನ್ ಗಳಿಸಿತು.

ಎರಡನೇ ದಿನದಾಟದ ಬಹುತೇಕ ಅವಧಿಯು ಮಳೆಗೆ ಆಹುತಿಯಾಗಿತ್ತು. ಮೊದಲ ದಿನದಾಟದಲ್ಲಿ ಶುಭಂ ಅವರು 40 ರನ್ ಗಳಿಸಿದ್ದಾಗ ಸ್ನಾಯುಸೆಳೆತದ ಕಾರಣ ವಿಶ್ರಾಂತಿ ಪಡೆದಿದ್ದರು. ಹರಪ್ರೀತ್ ಸಿಂಗ್ ಭಾಟಿಯಾ (91; 204ಎ) ಅವರು ಶತಕದ ಸನಿಹ ಎಡವಿದರು. ಮಧ್ಯಮವೇಗಿ ವಿ. ಕೌಶಿಕ್ ಎಸೆತವನ್ನು ಅಂದಾಜಿಸುವಲ್ಲಿ ತಪ್ಪಿದ ಅವರು ಬೌಲ್ಡ್ ಆದರು. ಅವರ ನಂತರ ಸಾರಾಂಶ್ ಜೈನ್ (51; 128ಎ, 4X4) ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.

ಇನ್ನೊಂದೆಡೆ ನಾಯಕ ಶುಭಂ ಬೌಲರ್ಗಳ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಿದರು. ಮೊದಲ ದಿನದಾಟದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ಕರ್ನಾಟಕದ ಬೌಲರ್ಗಳು ಭಾನುವಾರವೂ ಅಷ್ಟೇ ವಿಕೆಟ್ ಪಡೆದರು.

ಪ್ರಸಿದ್ಧ ಕೃಷ್ಣ ಕೇವಲ ಎಂಟು ಓವರ್ ಮಾತ್ರ ಬೌಲಿಂಗ್ ಮಾಡಿದರು. ಇದರಿಂದಾಗಿ ತಮ್ಮ ಮೇಲೆ ಬಿದ್ದ ಹೆಚ್ಚುವರಿ ಒತ್ತಡವನ್ನು ಕೌಶಿಕ್ ಮತ್ತು ವೈಶಾಖ (83ಕ್ಕೆ2) ಅವರು ನಿಭಾಯಿಸಿದರು. ಆದರೆ ಸ್ಪಿನ್ ವಿಭಾಗದಲ್ಲಿ ಎಡಗೈ ಬೌಲರ್ ಹಾರ್ದಿಕ್ ರಾಜ್ ಒಬ್ಬರು ಪರಿಣಾಮಕಾರಿಯಾಗಿದ್ದರು. ಆದರೆ ಅನುಭವಿ ಲೆಗ್ಸ್ಪಿನ್ನರ್ ಶ್ರೇಯಸ್ ಗೋಪಾಲ್ ವಿಕೆಟ್ ಪಡೆಯುವಲ್ಲಿ ವಿಫಲರಾದರು.

ಪಂದ್ಯದಲ್ಲಿ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಆದ್ದರಿಂದ ಸೋಲು, ಗೆಲುವಿನ ಫಲಿತಾಂಶ ಬರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಡ್ರಾ ಆಗಿ ಉಭಯ ತಂಡಗಳು ಅಂಕಗಳನ್ನು ಹಂಚಿಕೊಳ್ಳುವ ಸಾಧ್ಯತೆಯೇ ಹೆಚ್ಚು.

ಮೊದಲ ಇನಿಂಗ್ಸ್: ಮಧ್ಯಪ್ರದೇಶ: 140 ಓವರ್ಗಳಲ್ಲಿ 8ಕ್ಕೆ425 (ಶುಭಂ ಶರ್ಮಾ ಬ್ಯಾಟಿಂಗ್ 143, ಹರಪ್ರೀತ್ ಸಿಂಗ್ ಭಾಟಿಯಾ 91, ಸಾರಾಂಶ್ ಜೈನ್ 51, ವಾಸುಕಿ ಕೌಶಿಕ್ 78ಕ್ಕೆ2, ವೈಶಾಖ ವಿಜಯಕುಮಾರ್ 83ಕ್ಕೆ2, ಹಾರ್ದಿಕ್ ರಾಜ್ 79ಕ್ಕೆ2) ವಿರುದ್ಧ –ಕರ್ನಾಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.