ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌ಗೆ ಮಹಮದುಲ್ಲಾ ಹಠಾತ್‌ ವಿದಾಯ

Last Updated 10 ಜುಲೈ 2021, 12:31 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್‌ ಮಹಮದುಲ್ಲಾ, ಹಠಾತ್‌ ನಿರ್ಧಾರದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ 150 ರನ್‌ ಹೊಡೆದ ಮರುದಿನವೇ ಈ ನಿರ್ಧಾರಕ್ಕೆ ಬಂದಿದ್ದಾರೆ.

ಟೆಸ್ಟ್‌ ಜೀವನವನ್ನು ಮುಂದುವರಿಸಲು ತಮಗೆ ಮನಸ್ಸಿಲ್ಲ ಎಂದು ಅವರು ಸಹೋದ್ಯೋಗಿಗಳಿಗೆ ತಿಳಿಸಿರುವುದಾಗಿ ಕ್ರಿಕ್‌ಬಝ್‌ ವೆಬ್‌ಸೈಟ್‌ ವರದಿ ಮಾಡಿದೆ. ಇದರಿಂದ ತಂಡದ ಚಿಂತಕರ ಚಾವಡಿ ಕಷ್ಟಕ್ಕೆ ಸಿಲುಕಿದೆ. ಅವರು ಟಿ–20 ರಾಷ್ಟ್ರೀಯ ತಂಡದ ಹಾಲಿ ನಾಯಕರೂ ಸಹ.

‘ಹೌದು, ಈ ಪಂದ್ಯದ ನಂತರ ಅವರು (ಮಹಮದುಲ್ಲಾ) ಟೆಸ್ಟ್‌ ಜೀವನವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ನಮಗೆ ಅಧಿಕೃತವಾಗಿ ತಿಳಿಸಿಲ್ಲ. ಇದೊಂದು ಭಾವನಾತ್ಮಕ ಹೇಳಿಕೆಯೇ ಎಂದು ತಿಳಿದುಬರಬೇಕಿದೆ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮೂಲವನ್ನು ಉಲ್ಲೇಖಿಸಿ ಈ ವೆಬ್‌ಸೈಟ್‌ ವರದಿ ಮಾಡಿದೆ.

ಮಹಮದುಲ್ಲಾ 49 ಟೆಸ್ಟ್‌ಗಳನ್ನು ಆಡಿದ್ದು, 31 ಪ್ಲಸ್‌ ಸರಾಸರಿಯಲ್ಲಿ 2,764 ರನ್‌ ಗಳಿಸಿದ್ದಾರೆ. ನಾಲ್ಕು ಅರ್ಧ ಶತಕಗಳೂ ಇದರಲ್ಲಿ ಸೇರಿವೆ. 35 ವರ್ಷದ ಈ ಆಟಗಾರ 2009ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬ್ಯಾಟಿಂಗ್‌ನಲ್ಲಿ ವಿಫಲರಾದರೂ, ಎಂಟು ವಿಕೆಟ್‌ಗಳನ್ನು ಪಡೆದು ಚೊಚ್ಚಲ ಟೆಸ್ಟ್‌ ಪಂದ್ಯ ಸ್ಮರಣೀಯವಾಗುವಂತೆ ಮಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಪಡೆದಿದ್ದು, ಬಾಂಗ್ಲಾದೇಶ ಹೊರದೇಶದಲ್ಲಿ ಮೊದಲ ಜಯ ದಾಖಲಿಸಲು ನೆರವಾಗಿದ್ದರು.

ಹ್ಯಾಮಿಲ್ಟನ್‌ನಲ್ಲಿ ಎಂಟನೇ ಕ್ರಮಾಂಕದಲ್ಲಿ ಆಡಿ ಗಳಿಸಿದ್ದ ಶತಕವೂ ಅವರ ಸಾಮರ್ಥ್ಯ ತೋರಿಸಿತ್ತು. 2015ರ ಏಕದಿನ ವಿಶ್ವಕಪ್‌ನಲ್ಲಿ ಅವರು ಬಾಂಗ್ಲಾದೇಶದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿದ್ದರು. ಆ ಟೂರ್ನಿಯಲ್ಲಿ ಅವರ ಶತಕವು, ಇಂಗ್ಲೆಂಡ್‌ ತಂಡವನ್ನು ಟೂರ್ನಿಯಿಂದ ಹೊರಬೀಳುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಜಂಟಿ ಆತಿಥ್ಯ ವಹಿಸಿದ್ದ ನ್ಯೂಜಿಲೆಂಡ್‌ ವಿರುದ್ಧವೂ 128 ರನ್‌ ಚಚ್ಚಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT