ಸೋಮವಾರ, ಜನವರಿ 25, 2021
18 °C

ಕ್ರಿಕೆಟ್‌: ಮಂಗಳೂರು, ಮೈಸೂರು, ಧಾರವಾಡ ವಲಯಗಳಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಂಗಳೂರು, ಮೈಸೂರು ಮತ್ತು ಧಾರವಾಡ ವಲಯ ತಂಡಗಳು ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರ ವಲಯ ತಂಡಗಳ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಜಯ ಗಳಿಸಿದವು. ಆದಿತ್ಯ ಗ್ಲೋಬಲ್ ಒಂದನೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರು ವಲಯ ತಂಡ ರಾಯಚೂರು ವಲಯವನ್ನು 82 ರನ್‌ಗಳಿಂದ ಮಣಿಸಿತು. ಗ್ರೀನ್ ವಿಲೇಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಲಯ, ತುಮಕೂರು ವಲಯವನ್ನು 182 ರನ್‌ಗಳಿಂದ ಸೋಲಿಸಿತು. ಬಿಜಿಎಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ವಲಯವನ್ನು ಧಾರವಾಡ ವಲಯ 92 ರನ್‌ಗಳಿಂದ ಮಣಿಸಿತು.  

ಸಂಕ್ಷಿಪ್ತ ಸ್ಕೋರು: ಮಂಗಳೂರು ವಲಯ: 43.1 ಓವರ್‌ಗಳಲ್ಲಿ 155 (ಯಶ್ ಕಳಸಣ್ಣವರ 25, ಸತ್ಯಸ್ವರೂಪ್ 23, ಸ್ಪರ್ಶ್ ಅನೂಪ್ ಹೆಗಡೆ 53; ಶೀತಲ್‌ ಕುಮಾರ್ 38ಕ್ಕೆ4, ಮಾಧವ್‌ ಬಜಾಜ್ 33ಕ್ಕೆ2); ರಾಯಚೂರು ವಲಯ: 14.3 ಓವರ್‌ಗಳಲ್ಲಿ 73 (ವಿಜಯ ರೆಡ್ಡಿ ಔಟಾಗದೆ 24; ವಿದ್ವತ್ ಕಾವೇರಪ್ಪ 33ಕ್ಕೆ6, ಅಭಿಲಾಶ್ ಶೆಟ್ಟಿ 26ಕ್ಕೆ4). ಫಲಿತಾಂಶ: ಮಂಗಳೂರು ವಲಯಕ್ಕೆ 82 ರನ್‌ಗಳ ಜಯ.

ಮೈಸೂರು ವಲಯ: 50 ಓವರ್‌ಗಳಲ್ಲಿ 9ಕ್ಕೆ 298 (ಚೇತನ್‌ ಎಲ್‌.ಆರ್‌ 62, ನಿಕಿನ್ ಜೋಸ್ 133, ಗೌತಮ್ ಸಾಗರ್‌ 27; ಪುನೀತ್‌ 42ಕ್ಕೆ5); ತುಮಕೂರು ವಲಯ: 32 ಓವರ್‌ಗಳಲ್ಲಿ 116 (ನಿರ್ಮಿತ್ ಶಶಿಧರ್ 42, ಶ್ರೇಯಸ್ ಕೆ.ಬಿ 36; ಅಂಕಿತ್ 17ಕ್ಕೆ2, ರಘು ಎಂ.ಆರ್‌ 25ಕ್ಕೆ2, ಉತ್ತಮ್ ಗೌಡ 20ಕ್ಕೆ3). ಫಲಿತಾಂಶ: ಮೈಸೂರು ವಲಯಕ್ಕೆ 182 ರನ್‌ಗಳ ಜಯ.

ಧಾರವಾಡ ವಲಯ: 48 ಓವರ್‌ಗಳಲ್ಲಿ 214 (ವಿಕಾಸ್ 25, ಪರೀಕ್ಷಿತ್ ಒಕ್ಕುಂದ 34, ಸುಧನ್ವ ಕುಲಕರ್ಣಿ 27, ಚಿರಾಗ್ ನಾಯಕ್ 44, ಇಂದ್ರಸೇನ ದಾನಿ 21, ಅಮರ್ ಮಹಾವೀರ್ 22; ಆದಿತ್ಯ 53ಕ್ಕೆ4, ಮುಬಾರಕ್ 44ಕ್ಕೆ2); ಶಿವಮೊಗ್ಗ ವಲಯ: 50 ಓವರ್‌ಗಳಲ್ಲಿ 7ಕ್ಕೆ 122 (ಯೂನುಸ್ ಬೇಗ್‌ 34, ಸೌರಭ್ ಎಸ್‌.ಆರ್‌ ಔಟಾಗದೆ 62; ಮುದಸ್ಸಿರ್ 17ಕ್ಕೆ3). ಫಲಿತಾಂಶ: ಧಾರವಾಡ ವಲಯಕ್ಕೆ 92 ರನ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು