ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಝ್‌ಬಾಲ್‌ ತಂತ್ರ | ಪರಿಷ್ಕರಣೆ ಅಗತ್ಯ: ಬ್ರೆಂಡನ್ ಮೆಕ್ಕಲಂ

Published 11 ಮಾರ್ಚ್ 2024, 16:18 IST
Last Updated 11 ಮಾರ್ಚ್ 2024, 16:18 IST
ಅಕ್ಷರ ಗಾತ್ರ

ಧರ್ಮಶಾಲಾ: ಇಂಗ್ಲೆಂಡ್‌ ತಂಡದ ‘ಬಾಝ್‌ಬಾಲ್‌’ ತಂತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೋಚ್‌ ಬ್ರೆಂಡನ್ ಮೆಕ್ಕಲಂ ಒಪ್ಪಿಕೊಂಡರು.

ಭಾರತ ಶನಿವಾರ ಮುಕ್ತಾಯಗೊಂಡ ಸರಣಿಯಲ್ಲಿ ಈ ತಂತ್ರದ ದೋಷಗಳನ್ನು ಬಯಲುಗೊಳಿಸಿ ತಂಡವನ್ನು ಅಧೀರಗೊಳಿಸಿತ್ತು. 0–1 ಹಿನ್ನಡೆಯಿಂದ ಪುಟಿದೆದ್ದ ಭಾರತ ನಂತರ ಎಲ್ಲ ನಾಲ್ಕೂ ಟೆಸ್ಟ್‌ಗಳಲ್ಲಿ ಜಯಗಳಿಸಿ ಬಾಝ್‌ಬಾಲ್‌ಗೆ ತಿರುಮಂತ್ರ ಹಾಕಿತ್ತು.

‘ಕೆಲವೊಮ್ಮೆ ದೋಷಗಳು ಗೊತ್ತಾಗುವುದಿಲ್ಲ. ಈಗ ಭಾರತ ವಿರುದ್ಧ ಸರಣಿಯಲ್ಲಿ ಆದಂತೆ, ಈ ತಂತ್ರದ ದೌರ್ಬಲ್ಯಗಳು ಬಹಿರಂಗವಾದರೆ ಈ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ನಾವು ನಂಬಿದ ತಂತ್ರವನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ’ ಎಂದು ಅವರು ಬ್ರಿಟನ್‌ನ ಮಾಧ್ಯಮಗಳಿಗೆ ಭಾನುವಾರ ತಿಳಿಸಿದರು.

‘ಸರಣಿ ಮುಂದುವರಿದಂತೆ ನಾವು ಮೆತ್ತಗಾದೆವು. ನಮ್ಮ ಮೇಲೆ ಭಾರತದ ಬೌಲರ್‌ಗಳು ಅಷ್ಟೇ ಅಲ್ಲ, ಭಾರತದ ಬ್ಯಾಟಿಂಗ್ ಸರದಿಯೂ ಹೆಚ್ಚಿನ ಒತ್ತಡ ಹೇರಿತು’ ಎಂದು ಅವರು ಹೇಳಿದರು.

ಭಾರತದ ಯುವ ಆಟಗಾರರ ಪಡೆ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್, ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್‌, ಧ್ರುವ್ ಜುರೇಲ್, ಸರ್ಫರಾಜ್ ಖಾನ್ ಮೊದಲಾದವರು ಅವಕಾಶಗಳನ್ನು ಬಳಸಿಕೊಂಡರು. ಸರಣಿ ಒಂದರಲ್ಲಿ ಇಂಗ್ಲೆಂಡ್‌ನ ಬಾಝ್‌ಬಾಲ್ ತಂತ್ರ ಇಷ್ಟೊಂದು ಹಿನ್ನಡೆ ಕಂಡಿದ್ದು ಇದೇ ಮೊದಲ ಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT