ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಆಯ್ಕೆಗಾರ ಸ್ಥಾನ: ರೇಸ್‌ನಲ್ಲಿ ಮಿಥುನ್, ನಿಖಿಲ್ ಚೋಪ್ರಾ

Published 21 ಮಾರ್ಚ್ 2024, 15:59 IST
Last Updated 21 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಮಾಜಿ ಸ್ಪಿನ್ನರ್ ನಿಖಿಲ್ ಚೋಪ್ರಾ, ದೆಹಲಿಯ ಬ್ಯಾಟರ್‌  ಮಿಥುನ್ ಮನ್ಹಾಸ್  ಮತ್ತು ಹಾಲಿ ಜೂನಿಯರ್ ಆಯ್ಕೆಗಾರ ಕೃಷ್ಣ ಮೋಹನ್ ಅವರು ಬಿಸಿಸಿಐ ಸೀನಿಯರ್‌ ತಂಡದ ಆಯ್ಕೆಗಾರ ಸ್ಥಾನದ ಪೈಪೋಟಿಯಲ್ಲಿದ್ದಾರೆ.

ಐವರು ಸದಸ್ಯರ ಆಯ್ಕೆ ಸಮಿತಿಯಲ್ಲಿನ ಒಂದು ಸ್ಥಾನಕ್ಕೆ ಜನವರಿಯಲ್ಲಿ ಬಿಸಿಸಿಐ  ಅರ್ಜಿಗಳನ್ನು ಆಹ್ವಾನಿಸಿತ್ತು.  

ಈಗ ಪಶ್ಚಿಮ ವಲಯವನ್ನು ಈಗ ಇಬ್ಬರು– ಸಲೀಲ್‌ ಅಂಕೋಲಾ ಮತ್ತು ಅಧ್ಯಕ್ಷ ಅಜಿತ್‌ ಅಗರ್ಕರ್‌ ಪ್ರತಿನಿಧಿಸುತ್ತಿದ್ದಾರೆ. ಉತ್ತರ ವಲಯದಿಂದ ಆಯ್ಕೆಗಾರನ ನೇಮಕವಾದಲ್ಲಿ ಸಲೀಲ್ ಅಂಕೋಲಾ ಸ್ಥಾನ ತೆರವು ಮಾಡಬೇಕಾಗುತ್ತದೆ. ಚೇತನ್‌ ಶರ್ಮಾ ಅವರ ರಾಜೀನಾಮೆಯಿಂದ ಉತ್ತರ ವಲಯ ಆಯ್ಕೆಗಾರ ಹುದ್ದೆ ತೆರವಾಗಿತ್ತು.

ಕೃಷ್ಣ ಮೋಹನ್ 2021ರಿಂದ ಜೂನಿಯರ್ ತಂಡದ ಆಯ್ಕೆಸಮಿತಿಯಲ್ಲಿದ್ದಾರೆ. ಮಾಜಿ ವಿಕೆಟ್‌ ಕೀಪರ್‌ ಅಜಯ್ ರಾತ್ರಾ ಸಹ ರೇಸ್‌ನಲ್ಲಿದ್ದಾರೆ.

ಮಿಥುನ್ ಮನ್ಹಾಸ್
ಮಿಥುನ್ ಮನ್ಹಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT