ಸೌತಾಂಪ್ಟನ್: ಅನುಭವಿ ಆಟಗಾರರಾದ ಮೋಯಿನ್ ಅಲಿ ಹಾಗೂ ಜಾನಿ ಬೇಸ್ಟೊ ಅವರು ಐರ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಪ್ರಕಟಿಸಲಾಗಿರುವ ಇಂಗ್ಲೆಂಡ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ 24 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದೆ.

ವಿಕೆಟ್ ಕೀಪರ್ ಬೇಸ್ಟೊ ಹಾಗೂ ಆಲ್‌ರೌಂಡರ್ ಮೋಯಿನ್ ಅವರನ್ನು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು.

ಐರ್ಲೆಂಡ್ ಎದುರಿನ ಸರಣಿಯಲ್ಲಿ ಪಾಲ್ ಕಾಲಿಂಗ್‌ವುಡ್ ಅವರು ಆಂಗ್ಲರ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಈ ಸರಣಿಗಾಗಿ ಇಂಗ್ಲೆಂಡ್ ತಂಡವು ಇದೇ ತಿಂಗಳ 16ರಿಂದ ಅಭ್ಯಾಸ ಆರಂಭಿಸಲಿದೆ.

ಮೊದಲ ಏಕದಿನ ಪಂದ್ಯವು ಜುಲೈ 30ಕ್ಕೆ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಆಗಸ್ಟ್ 1 ಮತ್ತು 4ರಂದು ನಿಗದಿಯಾಗಿವೆ.

ಬೆನ್ ಸ್ಟೋಕ್ಸ್, ಜೋ ರೂಟ್ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡಕ್ಕೆ ಪರಿಗಣಿಸಿಲ್ಲ.

ಸಂಭಾವ್ಯ ತಂಡ: ಎಯೊನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೇಸ್ಟೊ, ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಹೆನ್ರಿ ಬ್ರೂಕ್ಸ್, ಬ್ರೇಡನ್ ಕಾರ್ಸ್, ಟಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ಲೌರಿ ಇವಾನ್ಸ್, ರಿಚರ್ಡ್ ಗ್ಲೀಸನ್, ಲೂಯಿಸ್ ಗ್ರೆಗೋರಿ, ಸ್ಯಾನ್ ಹೇನ್, ಟಾಮ್ ಹೆಲ್ಮ್, ಲಿಯಾಮ್ ಲಿವಿಂಗ್‌ಸ್ಟೋನ್, ಶಕೀಬ್ ಮಹಮ್ಮದ್, ಮ್ಯಾಟ್ ಪಾರ್ಕಿನ್‌ಸನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜೇಮ್ಸ್ ವಿನ್ಸ್ ಮತ್ತು ಡೇವಿಡ್ ವಿಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.