ಬರ್ಮಿಂಗ್ಹ್ಯಾಮ್: ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಆಡಲಿದ್ದಾರೆ.

ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಾರ್ವಿಕ್ಶೈರ್ ತಂಡದ ಕೊನೆಯ ಮೂರು ಪಂದ್ಯಗಳಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಸಿರಾಜ್ ಅವರು ಸದ್ಯ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

‘ಮೊಹಮ್ಮದ್ ಸಿರಾಜ್ ಅವರು ನಮ್ಮ ಕ್ಲಬ್ ಪರ ಆಡಲು ಸಹಿ ಹಾಕಿದ್ದಾರೆ. ಸೆಪ್ಟೆಂಬರ್ 12ರಂದು ಅವರು ಎಜ್ಬಾಸ್ಟನ್ಗೆ ಬರಲಿದ್ದಾರೆ‘ ಎಂದು ವಾರ್ವಿಕ್ಶೈರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ ರಾಷ್ಟ್ರೀಯ ತಂಡದ ಪರ ಮೂರೂ ಮಾದರಿಗಳೂ ಸೇರಿ ಒಟ್ಟು 26 ಪಂದ್ಯಗಳನ್ನು ಆಡಿರುವ ಸಿರಾಜ್, 56 ವಿಕೆಟ್ ಗಳಿಸಿದ್ದಾರೆ. ವೃತ್ತಿಜೀವನದಲ್ಲಿ ಆಡಿದ ಒಟ್ಟು 207 ಪಂದ್ಯಗಳಿಂದ 403 ವಿಕೆಟ್ ಅವರ ಬತ್ತಳಿಕೆ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.