ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌: 33 ಎಸೆತಗಳಲ್ಲಿ ಶತಕ ಸಿಡಿಸಿದ ಲೋಫ್ಟಿ ಈಟೊನ್

Published 27 ಫೆಬ್ರುವರಿ 2024, 12:40 IST
Last Updated 27 ಫೆಬ್ರುವರಿ 2024, 12:40 IST
ಅಕ್ಷರ ಗಾತ್ರ

ಕೀರ್ತಿಪುರ (ನೇಪಾಳ), (ಪಿಟಿಐ): ನಮೀಬಿಯಾದ ಜಾನ್ ನಿಕೋಲ್ ಲೋಫ್ಟಿ ಈಟೊನ್ ಅವರು ಮಂಗಳವಾರ ಟಿ20 ತ್ರಿಕೋನ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದು ಟಿ20 ಇತಿಹಾಸದಲ್ಲೇ ಅತಿ ವೇಗದ ಶತಕ ಎನಿಸಿದೆ.

ನೇಪಾಳದ ಕುಶಲ್‌ ಮಲ್ಲ ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಅವರು ಒಂದು ಎಸೆತದಿಂದ ಸುಧಾರಿಸಿದರು. 22 ವರ್ಷದ ಲೋಫ್ಟಿ ಈಟೊನ್ 36 ಎಸೆತಗಳಲ್ಲಿ 101 ರನ್ ಬಾರಿಸಿದ್ದು, ಇದರಲ್ಲಿ 11 ಬೌಂಡರಿ, ಎಂಟು ಸಿಕ್ಸರ್‌ಗಳಿದ್ದವು. ಸ್ಟ್ರೈಕ್ ರೇಟ್‌ 280.55! ಅವರು 33 ಟಿ20 ಪಧ್ಯಗಳನ್ನು 36 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದು ಯಾವುದೇ ಮಾದರಿಯಲ್ಲಿ ಅವರ ಮೊದಲ ಶತಕ.

ಕುಶಲ ಮಲ್ಲ ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ಈ ಹಿಂದಿನ ದಾಖಲೆ ಸ್ಥಾಪಿಸಿದ್ದರು. ಆ ಪಂದ್ಯದಲ್ಲಿ ನೇಪಾಳ 3 ವಿಕೆಟ್‌ಗೆ 314 ರನ್‌ಗಳ ವಿಶ್ವದಾಖಲೆ ಮೊತ್ತ ಗಳಿಸಿತ್ತು.

ಮಂಗೋಲಿಯಾ 4 ವಿಕೆಟ್‌ಗೆ 206 ರನ್ ಗಳಿಸಿತು. ಮಲಾನ್ ಕುಜರ್ 59 ರನ್ ಗಳಿಸಿ ಅಜೇಯರಾಗುಳಿದರು. ಉತ್ತರವಾಗಿ ನೇಪಾಳ 19ನೇ ಓವರಿನಲ್ಲಿ 186 ರನ್‌ಗಳಿಗೆ ಆಲೌಟ್ ಆಯಿತು. ರುಬೆನ್ ಟ್ರಂಪೆಲ್‌ಮನ್ 29 ರನ್ನಿಗೆ 4 ವಿಕೆಟ್‌ ಪಡೆದರು. ನೇಪಾಳ ಪರ ದೀಪೇಂದ್ರ ಸಿಂಗ್ ಐರಿ (48) ಮಾತ್ರ ಸ್ವಲ್ಪ ಹೋರಾಟ ತೋರಿದರು.

ನೆದರ್ಲೆಂಡ್ಸ್‌ ಈ ಟೂರ್ನಿಯಲ್ಲಿ ಆಡುತ್ತಿರುವ ಮೂರನೇ ತಂಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT