ತರೋಬಾ, ವೆಸ್ಟ್ ಇಂಡೀಸ್: ಮತ್ತೊಮ್ಮೆ ಆಲ್ರೌಂಡ್ ಆಟದ ಮೂಲಕ ಮಿಂಚಿದ ಸುನಿಲ್ ನಾರಾಯಣ್ ಅವರುಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಟ್ರಿನ್ಬ್ಯಾಗೊ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.ಭರ್ಜರಿ ಅರ್ಧಶತಕ (53, 38 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ ಅವರು ಒಂದು ವಿಕೆಟ್ (19ಕ್ಕೆ1) ಕೂಡ ಗಳಿಸಿದರು. ಟ್ರಿನ್ಬ್ಯಾಗೊ ತಂಡ ಗುರುವಾರ ಏಳು ವಿಕೆಟ್ಗಳಿಂದ ಜಮೈಕಾ ತಲ್ಲಾವಾಸ್ಅನ್ನು ಮಣಿಸಿತು.

ಟ್ರಿನ್ಬ್ಯಾಗೊ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ನಲ್ಲಿ ಆರಂಭದಿಂದಲೇ ಕುಸಿತದ ಹಾದಿ ಹಿಡಿದ ತಲ್ಲಾವಾಸ್ ತಂಡಕ್ಕೆ ಗ್ಲೆನ್ ಫಿಲಿಪ್ಸ್ (58) ಹಾಗೂ ಆಸಿಫ್ ಅಲಿ (22) ಅಲ್ಪ ಆಸರೆಯಾದರು. ಆ್ಯಂಡ್ರೆ ರಸೆಲ್ (25) ಕೂಡ ಕಾಣಿಕೆ ನೀಡಿದರು. ನಿಗದಿತ 20 ಓವರ್ಗಳಲ್ಲಿ ತಂಡವು ಎಂಟು ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಾಧಾರಣ ಗುರಿ ಬೆನ್ನತ್ತಿದ ಟ್ರಿನ್ಬ್ಯಾಗೊ ಇನಿಂಗ್ಸ್ನ ಮೂರನೇ ಎಸೆತದಲ್ಲೇ ಲೆಂಡ್ಲ್ ಸಿಮನ್ಸ್ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್ ಜೊತೆಯಾಟದಲ್ಲಿ ನಾರಾಯಣ್ ಹಾಗೂ ಕಾಲಿನ್ ಮುನ್ರೊ (ಔಟಾಗದೆ 49, 5 ಬೌ, 2 ಸಿ.) 75 ರನ್ ಕಲೆಹಾಕಿದರು.

ಟ್ರಿನ್ಬ್ಯಾಗೊ ತಂಡ 1.5 ಓವರ್ಗಳು ಬಾಕಿ ಇರುವಂತೆ ಗೆಲುವಿನ ದಡ ತಲುಪಿತು.

ಮತ್ತೊಂದು ಪಂದ್ಯದಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ತಂಡವು ಡಕ್ವರ್ತ್ ಲೂಯಿಸ್ ನಿಯಮದಡಿ ಏಳು ವಿಕೆಟ್ಗಳಿಂದ ಬಾರ್ಬಡಾಸ್ ಟ್ರೈಡೆಂಟ್ಸ್ ಎದುರು ಗೆದ್ದಿತು.

ಸಂಕ್ಷಿಪ್ತ ಸ್ಕೋರ್: ಜಮೈಕಾ ತಲ್ಲಾವಾಸ್: 20 ಓವರ್ಗಳಲ್ಲಿ ಎಂಟು ವಿಕೆಟ್ಗೆ 135 (ಗ್ಲೆನ್ ಫಿಲಿಪ್ಸ್ 58, ಆ್ಯಂಡ್ರೆ ರಸೆಲ್ 25, ಆಸಿಫ್ 22; ಜಾಯ್ಡೆನ್ ಸೀಲ್ಸ್ 21ಕ್ಕೆ 2, ಅಲಿ ಖಾನ್ 25ಕ್ಕೆ 2, ಫವಾದ್ ಅಹ್ಮದ್ 18ಕ್ಕೆ 1, ಸುನಿಲ್ ನಾರಾಯಣ್ 19ಕ್ಕೆ 1) ಟ್ರಿನ್ಬ್ಯಾಗೊ ನೈಟ್ ರೈಡರ್ಸ್: 18.1 ಓವರ್ಗಳಲ್ಲಿ ಮೂರು ವಿಕೆಟ್ಗೆ 136 (ಸುನಿಲ್ ನಾರಾಯಣ್ 53, ಕಾಲಿನ್ ಮುನ್ರೊ ಔಟಗಾದೆ 49, ಡರೆನ್ ಬ್ರಾವೊ 14; ಮುಜೀಬ್ ವುರ್ ರೆಹಮಾನ್ 13ಕ್ಕೆ 1, ಫಿಡೆಲ್ ಎಡ್ವರ್ಡ್ಸ್ 19ಕ್ಕೆ 1, ಸಂದೀಪ್ ಲ್ಯಾಮಿಚಾನೆ 30ಕ್ಕೆ 1). ಫಲಿತಾಂಶ:ಟ್ರಿನ್ಬ್ಯಾಗೊ ನೈಟ್ ರೈಡರ್ಸ್ ತಂಡಕ್ಕೆ ಏಳು ವಿಕೆಟ್ಗಳ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.