ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಎಂದು ಮರು ನಾಮಕರಣ ಮಾಡಿರುವುದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

2014ರ ನಂತರದಲ್ಲಿ ಗಾಂಧಿ ಹಾಗೂ ನೆಹರು ಹೆಸರುಗಳುಳ್ಳ ಕೆಲ ಯೋಜನೆಗಳ ಹೆಸರುಗಳನ್ನು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಬದಲಿಸಿದೆ. ಈ ಎಲ್ಲದರ ಕುರಿತು ದೇಶವ್ಯಾಪಿ ಟೀಕೆ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ. 2011ರಿಂದ 2013ರವರೆಗೆ ಪ್ರಕಟವಾದ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಸಿಕ್ಕ ಉತ್ತರದಂತೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಹಾಗು ನಂತರದಲ್ಲಿ ಪ್ರಧಾನಿಯಾದ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳಲ್ಲಿ ಸುಮಾರು 450 ಸರ್ಕಾರಿ ಸಂಸ್ಥೆ, ಯೋಜನೆ, ಸ್ಕೀಂಗಳು, ಕಟ್ಟಡ ಹಾಗೂ ಸ್ಥಳಗಳಿವೆ ಎಂದು ದಾಖಲಾಗಿದೆ.
.ನರೇಗಾ vs ವಿಬಿ–ಜಿ ರಾಮ್ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ.ನರೇಗಾ | ಯೋಜನೆ ಹೆಸರು, ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ: ಸಿಎಂ ಕಿಡಿ.
ಮಹಾತ್ಮ ಗಾಂಧಿ ಹೆಸರಿನ ಸಂಸ್ಥೆಗಳು

ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯೋಜನೆ ಆರಂಭಿಸಿದರು. 2006ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ 2024ರವರೆಗೆ ಸುಮಾರು 31 ಶತಕೋಟಿ ಮಾನವ ದಿನಗಳ ಸೃಜನೆಯಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿವೆ.

ಕೋವಿಡ್ ಸಾಂಕ್ರಾಮಿಕ ಹರಡಿದ್ದ ಸಂದರ್ಭದಲ್ಲಿ (2020–21) ಅತಿ ಹೆಚ್ಚು 389 ಕೋಟಿ ಮಾನವ ದಿನಗಳು ಈ ಯೋಜನೆಯಲ್ಲಿ ಸೃಜನೆಗೊಂಡಿದ್ದವು. ಈ ಯೋಜನೆ ಮೂಲಕ ವಾರ್ಷಿಕ 5 ಕೋಟಿ ಕುಟುಂಬಗಳು ಉದ್ಯೋಗ ಖಾತ್ರಿಯನ್ನು ಹೊಂದಿವೆ. ಯೋಜನೆಯಲ್ಲಿ ಮಹಿಳೆಯರ ಪಾಲು ಶೇ 56ರಷ್ಟು ಎಂದೂ ದಾಖಲೆಗಳು ಹೇಳುತ್ತವೆ.

2047ರ ‘ವಿಕಸಿತ ಭಾರತ’ ಗುರಿಸಾಧನೆಗೆ ‘ವಿಬಿ ಜಿ ರಾಮ್’ ಯೋಜನೆ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳಿಕೊಂಡಿದೆ.

‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಹೇಳಿಕೆ ಮೂಲಕ ಸರಳವಾಗಿ ಬದುಕಿ, ಅಹಿಂಸೆಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡ ಮಹಾತ್ಮಾ ಗಾಂಧಿ ಅವರು ಬ್ರಿಟಿಷರ ವಿರುದ್ಧ ತಾವು ನಂಬಿಕೊಂಡು ಬಂದ ತತ್ವಗಳನ್ನೇ ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಪ್ರಮುಖರು. ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ, ಗಾಂಧಿ ಶಿಲ್ಪ ಬಜಾರ್ ಹಾಗೂ ಮಹಾತ್ಮಾ ಗಾಂಧಿ ಬಂಕರ್ ವಿಮಾ ಯೋಜನೆಗಳಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರು ಇದೆ. ಇದನ್ನು ಹೊರತುಪಡಿಸಿದರೆ, ದೇಶದಲ್ಲಿ ಲೆಕ್ಕವಿಲ್ಲದಷ್ಟು ರಸ್ತೆ, ಬಡಾವಣೆ, ಕ್ರೀಡಾಂಗಣ ಮತ್ತು ಇತರ ಸ್ಥಳೀಯ ಸ್ಮಾರಕಗಳಿಗೆ ಮಹಾತ್ಮ ಗಾಂಧಿ ಅವರ ಹೆಸರು ಇಡಲಾಗಿದೆ.
.MGNREGA|ನರೇಗಾ ಸ್ವರೂಪ ಬದಲಿಗೆ ಮಸೂದೆ: ವಿಕಸಿತ ಭಾರತಕ್ಕೆ 'ಜಿ ರಾಮ್ ಜಿ' ಯೋಜನೆ.ನರೇಗಾ | ಐದು ವರ್ಷಗಳಲ್ಲಿ ಸರಾಸರಿ 50 ದಿನಗಳ ಉದ್ಯೋಗ: ಕೇಂದ್ರ ಸರ್ಕಾರ.
ಜವಾಹರಲಾಲ್ ನೆಹರು

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಅವರೊಂದಿಗೆ ಮುಂಚೂಣಿಯಲ್ಲಿ ನಿಂತು ಹೋರಾಡಿದವರು ಜವಾಹರಲಾಲ್ ನೆಹರು. ದೇಶದ ಮೊದಲ ಪ್ರಧಾನಿಯಾಗಿದ್ದ ಅವರ ಹೆಸರಿನಲ್ಲೂ ಹಲವು ಯೋಜನೆಗಳು ಇದ್ದವು. ಇವುಗಳಲ್ಲಿ ಕೆಲವು ಯೋಜನೆಗಳ ಹೆಸರುಗಳನ್ನು ಇತ್ತೀಚಿಗೆ ಬದಲಿಸಲಾಗಿದೆ.

ಸದ್ಯ ಇರುವುದರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ (JNTU), ಜವಾಹರಲಾಲ್ ನೆಹರು (JNTU), ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ (JNPT), ನೆಹರು ತಾರಾಲಯ ಮತ್ತು ವಿಜ್ಞಾನ ಕೇಂದ್ರ, ಜವಾಹರಲಾಲ್ ನೆಹರು ಕ್ರೀಡಾಂಗಣಗಳು ಇವೆ.

ಜವಾಹರಲಾಲ್ ನೆಹರು ಅರ್ಬನ್ ರಿನೀವಲ್ ಮಿಷನ್ (JnNURM) ಯೋಜನೆಯನ್ನು ಹಾಲಿ ಕೇಂದ್ರ ಸರ್ಕಾರವು ಅಟಲ್ ನಗರ ಪುನರ್ವಸತಿ ಮತ್ತು ಪರಿವರ್ತನೆ ಯೋಜನೆ (Atal Mission for Rejuvenation and Urban Transformation (AMRUT)) ಎಂದು ಬದಲಿಸಲಾಗಿದೆ.

ಇಂದಿರಾ ಗಾಂಧಿ

ಹಂತಕರ ಗುಂಡಿಗೆ ಬಲಿಯಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ನೀಡುವ ಉದ್ದೇಶದಿಂದ ಬಹಳಷ್ಟು ಸಂಸ್ಥೆಗಳು ಹಾಗೂ ಯೋಜನೆಗಳಿಗೆ ಅವರ ಹೆಸರುಗಳನ್ನು ಇಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ

ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (IGIA)

ಇಂದಿರಾ ಗಾಂಧಿ ಆವಾಸ್ ಯೋಜನೆ (ಹಾಲಿ ಇದು ಪ್ರಧಾನಮಂತ್ರಿ ಆವಾಸ್ ಯೋಜನಾ)

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ

ಇಂದಿರಾ ಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ

ಇವುಗಳೊಂದಿಗೆ ಹಲವು ಕ್ರೀಡಾಂಗಣ, ವನ್ಯಜೀವಿ ಅಭಯಾರಣ್ಯಗಳಿಗೆ ಇಂದಿರಾ ಗಾಂಧಿ ಅವರ ಹೆಸರು ಇಡಲಾಗಿದೆ.

ರಾಜೀವ್ ಗಾಂಧಿ

ಮೇಲಿನ ಮೂವರಿಗಿಂತ ರಾಜೀವ್ ಗಾಂಧಿ ಅವರ ಹೆಸರಿನ ಅತಿ ಹೆಚ್ಚು ಸಂಸ್ಥೆ ಹಾಗೂ ಯೋಜನೆಗಳಿವೆ. 2011ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗಳಿಗೆ ಸುಮಾರು 200ರಷ್ಟು ಎಂದು ಸರ್ಕಾರಿ ದಾಖಲೆಗಳು ಹೇಳಿವೆ.

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (RGIA)

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (ಭಾರತದ ಅತ್ಯುನ್ನತ ಕ್ರೀಡಾ ಗೌರವ ಇದಾಗಿದ್ದು, ಸದ್ಯ ಇದರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಿಸಲಾಗಿದೆ)

ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನಾ

ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ

ಕರ್ನಾಟಕದಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೆಲವೆಡೆ ಅವರ ಹೆಸರಿನಲ್ಲಿ ಎಂಜಿನಿಯರಿಂಗ್ ಕಾಲೇಜುಗಳೂ ಇವೆ.

ರಾಜೀವ್ ಅವರ ಸೋದರ ಸಂಜಯ್ ಗಾಂಧಿ ಅವರ ಹೆಸರಿನಲ್ಲಿ ಹೆಚ್ಚಿನ ಸಂಸ್ಥೆಗಳು ಇಲ್ಲ. ಬೆಂಗಳೂರಿನಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ಮಹಾರಾಷ್ಟ್ರದಲ್ಲಿ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ ಇವೆ.

2014ರಿಂದ 2025ರೊಳಗೆ ಮರು ನಾಮಕರಣಗೊಂಡ ಯೋಜನೆಗಳು

ಈ ದಿಗ್ಗಜರ ಹೆಸರಿನ ಯೋಜನೆಗಳು ಮಾತ್ರವಲ್ಲದೆ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿದ್ದ ನಿರ್ಮಲ್ ಭಾರತ್ ಅಭಿಯಾನ್ ಅನ್ನು ಸ್ವಚ್ಛ ಭಾರತ ಅಭಿಯಾನ್ ಎಂದಾಗಿ ಹಾಗೂ ರಾಷ್ಟ್ರೀಯ ಇ–ಆಡಳಿತ ಯೋಜನೆಯನ್ನು ಡಿಜಿಟಲ್ ಇಂಡಿಯಾ ಆಗಿಯೂ ಕೇಂದ್ರ ಸರ್ಕಾರ ಬದಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.