ಕ್ಯಾನಬೆರ್ರಾ: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಈಗ ’ಸಮಾಧಾನಕರ‘ ಜಯದತ್ತ ಚಿತ್ತ. ಆದರೆ ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ಗೆ ಏಕದಿನ ಕ್ರಿಕೆಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿ.

ಕೊರೊನಾ ಕಾಲಘಟ್ಟದಲ್ಲಿ ಆತಿಥ್ಯ ವಹಿಸಿದ ಮೊದಲ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2–0ಯಿಂದ ಕೈವಶ ಮಾಡಿಕೊಂಡಿದೆ. ಆದರೆ, ಭಾರತ ತಂಡಕ್ಕೆ ಇನ್ನೂ ಒಂದು ಪಂದ್ಯವನ್ನೂ ಜಯಿಸಲು ಸಾಧ್ಯವಾಗಿಲ್ಲ. ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಪಡೆಯ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಬ್ಯಾಟಿಂಗ್ನಲ್ಲಿಯೂ ಅರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದ್ದರು. ಆದರೆ ದೊಡ್ಡ ಜೊತೆಯಾಟ ಅಡುವಲ್ಲಿ ಎಡವಿದ್ದರು. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ತಮ್ಮ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಆದರೆ ’ಫಿನಿಷರ್‘ ಕೊರತೆ ಕಾಡುತ್ತಿದೆ.

ಬೌಲರ್ಗಳು ಯಥೇಚ್ಚವಾಗಿ ರನ್ ಬಿಟ್ಟುಕೊಡುತ್ತಿರುವುದು ಚಿಂತೆಯ ವಿಷಯವಾಗಿದೆ. ಆದ್ದರಿಂದ ಈ ಪಂದ್ಯದಲ್ಲಿ ನವದೀಪ್ ಸೈನಿಗೆ ವಿಶ್ರಾಂತಿ ಕೊಟ್ಟು ಶಾರ್ದೂಲ್ ಠಾಕೂರ್ಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಯಾರ್ಕರ್ ಪರಿಣತ ತಂಗರಸು ನಟರಾಜ್ ಅವರಿಗೆ ಪದಾರ್ಪಣೆಯ ಅವಕಾಶವೂ ಸಿಗಬಹುದು.

ಟೆಸ್ಟ್ ಸರಣಿಯಲ್ಲಿ ಫಿಟ್ ಆಗಿ ಉಳಿಯಲು ಬೂಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ಕೊಟ್ಟರೆ, ಈ ಇಬ್ಬರೂ ಬೌಲರ್ಗಳಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.

ಮುಂಬರುವ ಟಿ20 ಮತ್ತು ಟೆಸ್ಟ್ ಸರಣಿಗಳಲ್ಲಿ ಗೆಲುವು ಸಾಧಿಸಬೇಕಾದರೆ ಬೌಲಿಂಗ್ ಪಡೆಯನ್ನು ಬಲಿಷ್ಠಗೊಳಿಸಲು ಈ ಪ್ರಯೋಗಗಳಿಗೆ ತಂಡದ ಆಡಳಿತ ಕೈಹಾಕುವುದು ಅನಿವಾರ್ಯವಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತದ ಬೌಲರ್ಗಳು ಎದುರಾಳಿಗಳಿಗೆ ಒಟ್ಟು 69 ಬೌಂಡರಿ ಮತ್ತು 19 ಸಿಕ್ಸರ್ಗಳನ್ನು ಬಿಟ್ಟುಕಟ್ಟಿದ್ದಾರೆ. ಇಷ್ಟು ದುರ್ಬಲ ಬೌಲಿಂಗ್ ಅನ್ನು ತಂಡವು ಹಿಂದೆಂದೂ ಕಂಡಿರಲಿಲ್ಲ.

ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಡೇವಿಡ್ ವಾರ್ನರ್ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಆದರೆ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿರುವ ಸ್ಟೀವನ್ ಸ್ಮಿತ್ ಅವರಿಗೆ ಕಡಿವಾಣ ಹಾಕುವ ಸವಾಲು ಬೌಲರ್ಗಳಿಗೆ ಇದೆ. ಆ್ಯರನ್ ಫಿಂಚ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಾರ್ನಸ್ ಲಾಬುಷೇನ್ ಅವರನ್ನು ಕೊನೆಯ ಹಂತದ ಓವರ್ಗಳಲ್ಲಿ ಕಟ್ಟಿಹಾಕುವ ತಂತ್ರ ಕಂಡುಕೊಳ್ಳದಿದ್ದರೆ ಅವರ ಬ್ಯಾಟಿಂಗ್ ಭರಾಟೆಯಲ್ಲಿ ವಿರಾಟ್ ಬಳಗ ಮಂಕಾಗುವುದನ್ನು ಅಲ್ಲಗಳೆಯುವಂತಿಲ್ಲ.

ಈ ವರ್ಷದ ಆರಂಭದಲ್ಲಿ ಭಾರತ ತಂಡವು ನ್ಯೂಜಿಲೆಂಡ್ನಲ್ಲಿ 0–3ರಿಂದ ಸರಣಿ ಸೋತಿತ್ತು.ಈಗ ಆಸ್ಟ್ರೇಲಿಯಾದೆದುರು ಕೂಡ ಅಂತಹ ಆತಂಕವನ್ನು ವಿರಾಟ್ ಪಡೆ ಎದುರಿಸುತ್ತಿದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್. ರಾಹುಲ್ (ಉಪನಾಯಕ/ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಟಿ. ನಟರಾಜನ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡಾರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ಕೀಪರ್), ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್ ಹ್ಯಾಜಲ್ವುಡ್, ಸೀನ್ ಅಬಾಟ್, ಆ್ಯಷ್ಟನ್ ಆಗರ್, ಕೆಮರಾನ್ ಗ್ರೀನ್, ಮೊಯಸೆಸ್ ಹೆನ್ರಿಕ್ಸ್, ಆ್ಯಂಡ್ರ್ಯೂ ಟೈ, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್.

ಪಂದ್ಯ ಆರಂಭ: ಬೆಳಿಗ್ಗೆ 9.10

ನೇರಪ್ರಸಾರ: ಸೋನಿ ನೆಟ್ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.