ಓವರ್‌ನಲ್ಲಿ ಸತತ ಐದು ಸಿಕ್ಸರ್‌ ಸಿಡಿಸಿದ ನೀಶಮ್‌

7

ಓವರ್‌ನಲ್ಲಿ ಸತತ ಐದು ಸಿಕ್ಸರ್‌ ಸಿಡಿಸಿದ ನೀಶಮ್‌

Published:
Updated:
Prajavani

ತೌರಂಗ, ನ್ಯೂಜಿಲೆಂಡ್‌ (ಎಎಫ್‌ಪಿ): ಒಂದೂವರೆ ವರ್ಷದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಜೇಮ್ಸ್ ಜೀಶಮ್‌ ಅವರ ಆಲ್‌ರೌಂಡ್ ಆಟದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿತು.

ತಿಸಾರ ಪೆರೇರ ಅವರ ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಎಡಗೈ ಬ್ಯಾಟ್ಸ್‌ಮನ್‌ ನೀಶಮ್‌ 13 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದರು. ನಂತರ ಬೌಲಿಂಗ್‌ನಲ್ಲೂ ಮಿಂಚಿ ಮೂರು ವಿಕೆಟ್ ಕಬಳಿಸಿದರು. ಇದರ ಪರಿಣಾಮ ಆತಿಥೇಯರು 45 ರನ್‌ಗಳ ಗೆಲುವು ಸಾಧಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ ಏಳು ವಿಕೆಟ್‌ಗಳಿಗೆ 371 ರನ್‌ ಗಳಿಸಿತ್ತು. ಸ್ಫೋಟಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ 139 ಎಸೆತಗಳಲ್ಲಿ 138 ರನ್‌ ಗಳಿಸಿದರು. ಗುರಿ ಬೆನ್ನತ್ತಿದ ಶ್ರೀಲಂಕಾ ಛಲದಿಂದ ಕಾದಾಡಿತು. ತಂಡದ ಕುಶಾಲ ಪೆರೇರ ಶತಕ ಸಿಡಿಸಿದರೆ, ನಿರೋಷನ್ ಡಿಕ್ವೆಲ್ಲಾ 76 ರನ್‌ ಗಳಿಸಿದರು. ಕುಶಾಲ ಮತ್ತು ಧನುಶ್ಕಾ ಗುಣತಿಲಕ ಮೊದಲ ವಿಕೆಟ್‌ಗೆ 17 ಓವರ್‌ಗಳಲ್ಲಿ 119 ರನ್‌ ಸೇರಿಸಿ ತಂಡದಲ್ಲಿ ಜಯದ ಭರವಸೆ ಮೂಡಿಸಿದರು. ಇವರ ಜೊತೆಯಾಟವನ್ನು ನೀಶಮ್ ಮುರಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 7ಕ್ಕೆ 371 (ಮಾರ್ಟಿನ್ ಗಪ್ಟಿಲ್‌ 138, ಕೇನ್‌ ವಿಲಿಯಮ್ಸನ್‌ 78, ರೋಸ್ ಟೇಲರ್‌ 54, ಜೇಮ್ಸ್ ನೀಶಮ್‌ ಅಜೇಯ 47; ಲಸಿತ್ ಮಾಲಿಂಗ 78ಕ್ಕೆ2, ಪ್ರದೀಪ್‌ 72ಕ್ಕೆ2, ತಿಸಾರ ಪೆರೇರ 80ಕ್ಕೆ2); ಶ್ರೀಲಂಕಾ: 49 ಓವರ್‌ಗಳಲ್ಲಿ 326 (ನಿರೋಷನ್ ಡಿಕ್ವೆಲ್ಲಾ 76, ಧನುಷ್ಕಾ ಗುಣತಿಲಕ 43, ಕುಶಾಲ ಪೆರೇರ 102; ಟ್ರೆಂಟ್ ಬೌಲ್ಟ್ 65ಕ್ಕೆ2, ಫೆರ್ಗುಸನ್‌ 65ಕ್ಕೆ 2, ಇಶ್‌ ಸೋಧಿ 53ಕ್ಕೆ2, ಜೇಮ್ಸ್ ನೀಶಮ್‌ 38ಕ್ಕೆ3). ಫಲಿತಾಂಶ: ನ್ಯೂಜಿಲೆಂಡ್‌ಗೆ 45 ರನ್‌ಗಳ ಜಯ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !