ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ನ್ಯೂಜಿಲೆಂಡ್

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದರೆ ಭಾರತಕ್ಕೆ ರಹದಾರಿ; ಆಸ್ಟ್ರೇಲಿಯಾ ಔಟ್
Last Updated 2 ಫೆಬ್ರುವರಿ 2021, 16:52 IST
ಅಕ್ಷರ ಗಾತ್ರ

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ನ್ಯೂಜಿಲೆಂಡ್ ತಂಡವು ಲಗ್ಗೆ ಇಟ್ಟಿದೆ.

ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕಗೆ ಕಿವೀಸ್ ಬಳಗವು ಪಾತ್ರವಾಗಿದೆ.

ಕೋವಿಡ್ –19 ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ಎದುರಿನ ಸರಣಿಯನ್ನು ರದ್ದು ಮಾಡಿದೆ. ಅದರಿಂದಾಗಿ ನ್ಯೂಜಿಲೆಂಡ್‌ಗೆ ಫೈನಲ್ ಪ್ರವೇಶವು ಈಗಲೇ ಒಲಿಯಿತು.

ಐಸಿಸಿಯು ರೂಪಿಸಿರುವ ಪರಿಸ್ಕೃತ ನಿಯಮದ ಪ್ರಕಾರ ಪಾಯಿಂಟ್ಸ್‌ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಶೇ 70ರಷ್ಟು ಸಾಧನೆ ಮಾಡಿದೆ. ಈ ವಾರಆರಂಭವಾಗಲಿರುವಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಭಾರತವು ಗೆದ್ದರೆ. ಫೈನಲ್‌ ಪ್ರವೇಶ ಖಚಿತ.

ಪ್ರಸ್ತುತ ಭಾರತವು ಡಬ್ಲ್ಯುಟಿಸಿ ಪಾಯಿಂಟ್ಸ್‌ ನಲ್ಲಿ ಶೇ 71.7ರ ಸಾಧನೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಶೇ 69.2 ಗಳಿಸಿದೆ. ಇಂಗ್ಲೆಂಡ್ 65.2 ಪಾಯಿಂಟ್ಸ್‌ ಹೊಂದಿದೆ.

ಭಾರತದಲ್ಲಿ ನಡೆಯಲಿರುವ ಸರಣಿಯನ್ನು ಜಯಿಸುವ ತಂಡಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಇದೆ. ಉಳಿದಂತೆ ಯಾವ ತಂಡವೂ ಫೈನಲ್ ಪ್ರವೇಶದ್ವಾರದ ಸನಿಹವಿಲ್ಲ.

ಒಂದೊಮ್ಮೆ ಭಾರತ ಮತ್ತು ಇಂಗ್ಲೆಂಡ್ ಸರಣಿಯು ಡ್ರಾ ಆದರೆ. ಆಸ್ಟ್ರೇಲಿಯಾಕ್ಕೆ ಮತ್ತೊಂದು ಅವಕಾಶ ಸಿಗಬಹುದು. ಅದಕ್ಕಾಗಿ ಆಸ್ಟ್ರೇಲಿಯಾ ತಂಡವು ತನ್ನ ಮುಂದಿನ ಸರಣಿಯಲ್ಲಿ ಜಯಿಸಬೇಕು.

ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಜೂನ್ 18ರಂದು ಆಯೋಜಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT