ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NZ vs AUS: ನ್ಯೂಜಿಲೆಂಡ್‌ಗೆ ಕಠಿಣ ಗುರಿ

Published 2 ಮಾರ್ಚ್ 2024, 16:12 IST
Last Updated 2 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ವೆಲಿಂಗ್ಟನ್‌: ಆಸ್ಟ್ರೇಲಿಯಾ ವಿರುದ್ಧ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಗೆಲ್ಲಲು 369 ರನ್‌ಗಳ ಗುರಿಯನ್ನು ಎದುರಿಸಿರುವ ಆತಿಥೇಯ ನ್ಯೂಜಿಲೆಂಡ್‌ ತಂಡ ಮೂರನೇ ದಿನವಾದ ಶನಿವಾರ ಆಟ ಮುಗಿದಾಗ 3 ವಿಕೆಟ್‌ಗೆ 111 ರನ್‌ ಗಳಿಸಿದೆ. ಗೆಲುವಿಗೆ ನ್ಯೂಜಿಲೆಂಡ್‌ ಇನ್ನೂ 258 ರನ್ ಗಳಿಸಬೇಕಾಗಿದೆ.

ಸೊಗಸಾದ ಕಟ್‌ ಮತ್ತು ಪುಲ್‌ ಹೊಡೆತಗಳನ್ನು ಪ್ರದರ್ಶಿಸಿದ ರಚಿನ್ ರವೀಂದ್ರ 56 ರನ್‌ (94ಎ, 4x8, 61) ಗಳಿಸಿ ಔಟಾಗದೇ ಉಳಿದರು. ಅವರೊಡನೆ ಡೇರಿಲ್ ಮಿಚೆಲ್ 11 ರನ್ ಗಳಿಸಿ ಆಟ ಕಾದಿರಿಸಿಕೊಂಡರು. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್‌ಗೆ 52 ರನ್ ಸೇರಿಸಿದ್ದಾರೆ. ಸ್ಪಿನ್ನರ್‌ ನೇಥನ್ ಲಯನ್ ಎರಡು ವಿಕೆಟ್‌ ಪಡೆದಿದ್ದಾರೆ.

ಇದಕ್ಕೆ ಮೊದಲು, ಅಪರೂಪಕ್ಕೆ ಬೌಲ್ ಮಾಡುವ ಆಫ್‌ ಸ್ಪಿನ್ನರ್‌ ಗ್ಲೆನ್‌ ಫಿಲಿಪ್ಸ್‌ ಜೀವನ ಶ್ರೇಷ್ಠ ನಿರ್ವಹಣೆಯಲ್ಲಿ 45 ರನ್ನಿಗೆ 5 ವಿಕೆಟ್‌ ಪಡೆದರು. ಇದರಿಂದ ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್‌ 164 ರನ್‌ಗಳಿಗೆ ಸೀಮಿತಗೊಂಡಿತು. ನೈಟ್‌ ವಾಚ್‌ಮನ್ ಆಗಿ ಆಡಿದ್ದ ಲಯನ್ ಗಳಿಸಿದ 41 ರನ್‌ಗಳು ತಂಡದ ಗರಿಷ್ಠ ವೈಯಕ್ತಿಕ ಮೊತ್ತ ಎನಿಸಿತು.

ಸ್ಕೋರುಗಳು: ಮೊದಲ ಇನಿಂಗ್ಸ್: 383, ನ್ಯೂಜಿಲೆಂಡ್‌: 179; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 51.1 ಓವರುಗಳಲ್ಲಿ 164 (ನೇಥನ್ ಲಯನ್ 41, ಕ್ಯಾಮರಾನ್ ಗ್ರೀನ್ 34, ಟ್ರಾವಿಸ್‌ ಹೆಡ್‌ 29; ಸೌಥಿ 46ಕ್ಕೆ2, ಮ್ಯಾಟ್‌ ಹೆನ್ರಿ 36ಕ್ಕೆ3, ಗ್ಲೆನ್‌ ಫಿಲಿಪ್ಸ್‌ 45ಕ್ಕೆ5); ನ್ಯೂಜಿಲೆಂಡ್‌: 41 ಓವರುಗಳಲ್ಲಿ 3 ವಿಕೆಟ್‌ಗೆ 111 (ರಚಿನ್ ರವೀಂದ್ರ ಬ್ಯಾಟಿಂಗ್‌ 56, ಡೇರಿಲ್ ಮಿಚೆಲ್ ಬ್ಯಾಟಿಂಗ್‌ 12; ಲಯನ್ 27ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT