ಮಂಗಳವಾರ, ಮಾರ್ಚ್ 21, 2023
22 °C
ನಿಕಿನ್ ಜೋಸ್ ಶತಕ ವ್ಯರ್ಥ; ಸ್ವರೂಪಂ ಅಬ್ಬರದ ಬ್ಯಾಟಿಂಗ್

ವಿಜಯ್ ಹಜಾರೆ ಟ್ರೋಫಿ | ಕರ್ನಾಟಕ ಜಯದ ಓಟಕ್ಕೆ ಅಸ್ಸಾಂ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಜಯಿಸಿದ್ದ ಕರ್ನಾಟಕದ ಓಟಕ್ಕೆ ಶನಿವಾರ ಅಸ್ಸಾಂ ತಡೆಯೊಡ್ಡಿತು.

22 ಯಾರ್ಡ್ಸ್ ಸಾಲ್ಟ್‌ ಲೇಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ನಿಕಿನ್ ಜೋಸ್ (100; 106ಎ) ಗಳಿಸಿದ ಚೆಂದದ ಶತಕ ವ್ಯರ್ಥವಾಯಿತು. ಕರ್ನಾಟಕ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 296 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಅಸ್ಸಾಂ ತಂಡದ ಸ್ವರೂಪಂ ಪುರಕಾಯಸ್ಥ (ಔಟಾಗದೆ 112) ಅವರ ಅಮೋಘ ಶತಕ ಬಲದಿಂದ 48.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.   

ಕರ್ನಾಟಕದ ಅನುಭವಿ ಬೌಲರ್ ರೋನಿತ್ ಮೋರೆ, ವಾಸುಕಿ ಕೌಶಿಕ್ ಮತ್ತು ಗೌತಮ್ ವಿಕೆಟ್ ಕಬಳಿಸುವಲ್ಲಿ ವಿಫಲರಾದರು. ಮೈಸೂರಿನ ನಿಕಿನ್ ಜೋಸ್‌ ಅವರಿಗೆ ಇದು ಮೊದಲ ಟೂರ್ನಿಯಾಗಿದೆ. ಕಳೆದ ಪಂದ್ಯದಲ್ಲಿ ಅಲ್ಪ ಅಂತರದಲ್ಲಿ ಶತಕ ತಪ್ಪಿಸಿಕೊಂಡಿದ್ದರು. ಆದರೆ ಇಲ್ಲಿ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ ಶತಕ ಗಳಿಸಿದರು. 

ನಾಯಕ ಮಯಂಕ್ ಅಗರವಾಲ್ ಹಾಗೂ ಮನೀಷ್ ಪಾಂಡೆ ಅರ್ಧಶತಕಗಳನ್ನು ಗಳಿಸಿದರು. 

ಸಂಕ್ಷಿಪ್ತ ಸ್ಕೋರು
ಕರ್ನಾಟಕ: 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 296 (ಮಯಂಕ್ ಅಗರವಾಲ್ 64, ನಿಕಿನ್ ಜೋಸ್ 100, ಮನೀಷ್ ಪಾಂಡೆ ಔಟಾಗದೆ 58, ಮನೋಜ್ ಬಾಂಡಗೆ ಔಟಾಗದೆ 35, ರಿಯಾನ್ ಪರಾಗ್ 76ಕ್ಕೆ2)

ಅಸ್ಸಾಂ: 48.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 297 (ರಾಹುಲ್ ಹಜಾರಿಕಾ 50, ಸ್ವರೂಪಂ ಪುರಕಾಯಸ್ಥ ಔಟಾಗದೆ 112, ಶಿಬಶಂಕರ್ ರಾಯ್ ಔಟಾಗದೆ 66, ಮುರಳೀಧರ್ ವೆಂಕಟೇಶ್ 46ಕ್ಕೆ2)

ಫಲಿತಾಂಶ: ಅಸ್ಸಾಂ ತಂಡಕ್ಕೆ  6 ವಿಕೆಟ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು