ಭಾರತದ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಮಹಿಳಾ ತಂಡ: ಬೌಲಿಂಗ್ ಆಯ್ಕೆ

ಆಕ್ಲೆಂಡ್: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟ್ವಿಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡಕ್ಕೆ ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಮೊದಲ ಪಂದ್ಯದಲ್ಲಿ ದಾಖಲೆ ಮಾಡಿದ್ದ ಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರನ್ನು ಹೊರತುಪಡಿಸಿದರೆ ಉಳಿ ಆಟಗಾರ್ತಿಯರು ಎದುರಾಳಿ ಬೌಲರ್ಗಳ ದಾಳಿಯನ್ನು ಮೆಟ್ಟಿ ನಿಲ್ಲಲು ಆಗಿರಲಿಲ್ಲ.
ತಂಡಗಳು: ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಪ್ರಿಯಾ ಪೂನಿಯಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ತನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ದಯಾಳನ್ ಹೇಮಲತಾ, ಮಾನಸಿ ಜೋಶಿ, ಅರುಂಧತಿ ರೆಡ್ಡಿ
ನ್ಯೂಜಿಲೆಂಡ್: ಆ್ಯಮಿ ಸಾಟರ್ವೇಟ್ (ನಾಯಕಿ), ಸೂಸಿ ಬೇಟ್ಸ್, ಬೆರ್ನಾಡಿನ್ ಬೆಜುಡನಾಟ್, ಸೋಫಿ ಡಿವೈನ್, ಹೇಲಿ ಜೆನ್ಸೆನ್, ಕ್ಯಾಟ್ಲಿನ್ ಗುರೆ, ಲೇ ಕ್ಯಾಸ್ಪರೆಕ್, ಅಮೆಲಿಯಾ ಕೆರ್, ಫ್ರಾನ್ಸಿಸ್ ಮೆಕೆ, ಕಾತಿ ಮಾರ್ಟಿನ್, ರೋಸ್ಮೇರಿ ಮೇರ್, ಹನಾ ರೋ, ಲೀ ತಹುಹು.
We have won the toss and will have a bowl! 25 minutes till first ball! Well done Branch 🏏👏🏽😄 #NZvIND pic.twitter.com/1rMauJ1r3n
— WHITE FERNS (@WHITE_FERNS) February 8, 2019
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.