ಭಾನುವಾರ, ಮೇ 22, 2022
25 °C

ಮಹಿಳಾ ವಿಶ್ವಕಪ್ ಕ್ರಿಕೆಟ್‌: ಸ್ಥಳ ಬದಲಾವಣೆ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಆತಿಥೇಯ ರಾಷ್ಟ್ರ ನ್ಯೂಜಿಲೆಂಡ್‌ನಲ್ಲಿ ಕೋವಿಡ್‌–19ರ ಓಮೈಕ್ರಾನ್‌ ರೂಪಾಂತರದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದರೂ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸ್ಥಳಗಳ ಸಂಖ್ಯೆ ಅಥವಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟೂರ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಡ್ರಿಯಾ ನೆಲ್ಸನ್ ಶುಕ್ರವಾರ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯು ಮಾರ್ಚ್‌ 4ರಂದು ಆರಂಭವಾಗಬೇಕಿದ್ದು, ಮೊದಲ ‍ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಮತ್ತು ವೆಸ್ಟ್ ಇಂಡೀಸ್‌ ಮುಖಾಮುಖಿಯಾಗಲಿವೆ.

ಸೋಂಕು ಪ್ರಕರಣಗಳು ಹೆಚ್ಚಾಗಿರುವುದರಿಂದ ನ್ಯೂಜಿಲೆಂಡ್‌ನಲ್ಲಿ ಇತ್ತೀಚೆಗೆ ಹೆಚ್ಚು ನಿರ್ಬಂಧಗಳನ್ನು ಹೇರಲಾಗುತ್ತಿದೆ.

‘2021ರಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯನ್ನು ನಾವು ಈ ವರ್ಷ ಆಯೋಜಿಸಲು ದೀರ್ಘ ಕಾಲದಿಂದ ತಯಾರಿ ನಡೆಸಿದ್ದೇವೆ. ತೌರಂಗದಲ್ಲಿ ಮೊದಲ ಪಂದ್ಯ ಆರಂಭಕ್ಕೆ ಇನ್ನು 35 ದಿನ ಬಾಕಿ ಇದೆ. 66 ದಿನಗಳ ಬಳಿಕ ಫೈನಲ್ ನಡೆಯಲಿದೆ. ಎಲ್ಲ ಪಂದ್ಯಗಳೂ ನ್ಯೂಜಿಲೆಂಡ್‌ನಲ್ಲೇ ನಡೆಯಲಿದ್ದು, ಸ್ಥಳ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ‘ ಎಂದು ನೆಲ್ಸನ್ ಶುಕ್ರವಾರ ಆಯ್ದ ವರದಿಗಾರರೊಂದಿಗೆ ನಡೆಸಿದ ಕಾಲ್‌ ಕಾನ್ಫ್‌ರೆನ್ಸ್‌ನಲ್ಲಿ ತಿಳಿಸಿದರು.

ತೌರಂಗಾ, ಡ್ಯುನೆಡಿನ್‌, ಹ್ಯಾಮಿಲ್ಟನ್‌, ವೆಲ್ಲಿಂಗ್ಟನ್‌, ಆಕ್ಲಂಡ್‌ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ಪಂದ್ಯಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು