ಗುರುವಾರ , ಜೂನ್ 30, 2022
21 °C

ಭಾರತ ವಿರುದ್ಧ ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ನಮ್ಮ ತಂಡಕ್ಕಿದೆ– ಟ್ರೆಂಟ್ ಬೌಲ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೌಂಟ್ ಮೌಂಗನುಯಿ(ನ್ಯೂಜಿಲೆಂಡ್): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಮ್ಮ ತಂಡವು ಭಾರತ ತಂಡದ ವಿರುದ್ಧ ಸೆಣಸಿ ಇತಿಹಾಸ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವಿಶ್ವಾಸವಿದೆ ಎಂದು ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರು ಹೇಳಿದ್ದಾರೆ.

ಡಬ್ಲ್ಯೂಟಿಸಿ ಫೈನಲ್ ಪಂದ್ಯವು ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್ನಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿವೆ.

‘ನಮ್ಮ ತಂಡವು ವಿಶ್ವದ ಇತರೆಡೆ ಪ್ರಯಾಣಿಸಿ ನೀಡಿದ ಪ್ರದರ್ಶನದ ರೀತಿ ನೋಡಿದರೆ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಇದೆ’ ಎಂದು ಬೌಲ್ಟ್ ಬೇ ಓವಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಒಂದು ದೊಡ್ಡ ವೇದಿಕೆಯಾಗಿದೆ. ನಾನು ಅಲ್ಲಿಗೆ ಹೋಗಬಹುದು ಮತ್ತು ಎರಡನೇ ಟೆಸ್ಟ್‌ (ಇಂಗ್ಲೆಂಡ್ ವಿರುದ್ಧ)ನಲ್ಲಿ ತಂಡದ ಭಾಗವಾಗಬಲ್ಲೆ’ ಎಂದು ಅವರು ಹೇಳಿದರು.

‘ಅರ್ಹತೆ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಾನು ಸ್ವಲ್ಪ ಸಮಯ ತೆಗೆದುಕೊಂಡಿದ್ದೇನೆ, ಎಲ್ಲವೂ ಅಂಕಗಳಿಂದಲೇ ಹೇಗೆ ಆಗುತ್ತದೆ, ಅದು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ, ಫೈನಲ್ ಪಂದ್ಯದ ಬಗ್ಗೆ ಉತ್ಸಾಹವು ಈಗ ಹೆಚ್ಚುತ್ತಿದೆ’ ಎಂದು ಬೌಲ್ಟ್ ಹೇಳಿದರು.

ಡಬ್ಲ್ಯುಟಿಸಿ ಫೈನಲ್‌ನಲ್ಲಿ ಬಳಸಲಾಗುವ ಡ್ಯೂಕ್ಸ್ ಚೆಂಡಿನ ಬಗ್ಗೆ ಮಾತನಾಡುತ್ತಾ, ‘ನನಗೆ ಇದರ ಬಗ್ಗೆ ಹೆಚ್ಚು ಅನುಭವವಿಲ್ಲ, ಇಂಗ್ಲೆಂಡ್‌ನಲ್ಲಿ ಬೆರಳೆಣಿಕೆಯಷ್ಟು ಟೆಸ್ಟ್‌ಗಳನ್ನು ಆಡಿದ್ದೇನೆ. ಇದು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ’ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು