ಒಂದೇ ತಾಸಿನಲ್ಲಿ ಉರುಳಿದ ಆರು ವಿಕೆಟ್‌ಗಳು

7
ದಕ್ಷಿಣ ಆಫ್ರಿಕಾ ‘ಎ’ ತಂಡದ ಬೌಲರ್ ಒಲಿವರ್ ಮಿಂಚು

ಒಂದೇ ತಾಸಿನಲ್ಲಿ ಉರುಳಿದ ಆರು ವಿಕೆಟ್‌ಗಳು

Published:
Updated:

ಬೆಂಗಳೂರು: ಶನಿವಾರ ಬೆಳಿಗ್ಗೆಯ ಒಂದು ತಾಸಿನಲ್ಲಿಯೇ ಭಾರತ ‘ಎ’ ತಂಡದ ಆರು ವಿಕೆಟ್‌ಗಳು ಪತನವಾದವು. ಡನ್ ಒಲಿವರ್ (63ಕ್ಕೆ6) ಅವರ ಶಿಸ್ತಿನ ದಾಳಿಯಿಂದಾಗಿ ಆತಿಥೇಯ ತಂಡವು ಮೊದಲ ಇನಿಂಗ್ಸ್‌ ನಲ್ಲಿ 345 ರನ್‌ ಗಳಿಸಿತು.

ಪಂದ್ಯದ ಮೊದಲ ಮೊದಲ ದಿನವಾದ ಶುಕ್ರವಾರ ಹನುಮವಿಹಾರಿ ಶತಕದ ಬಲದಿಂದ ಭಾರತ ಎ ತಂಡವು 4 ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಕೇವಲ 23 ರನ್ ಗಳಿಸಿ ಉಳಿದ ಆರೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಐದು ವಿಕೆಟ್‌ಗಳನ್ನು ಒಲಿವರ್ ಅವರೇ ಕಬಳಿಸಿದರು. ತುಸು ಜೋರಾಗಿಯೇ ಬೀಸುತ್ತಿದ್ದ ಗಾಳಿ ಮತ್ತು ಪಿಚ್‌ನ ತೇವಾಂಶ ಬಳಸಿಕೊಂಡ ಒಲಿವರ್ ಭಾರತ ಎ ತಂಡದ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸುವ ಅವಕಾಶವನ್ನೇ ನೀಡಲಿಲ್ಲ.

34 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಕೆ.ಎಸ್‌. ಭರತ್ ವಿಕೆಟ್ ಕಬಳಿಸುವ ಮೂಲಕ ದಿನದ ಆರಂಭ ಮಾಡಿದ ಒಲಿವರ್ ಅವರು ನಂತರ ಜಯಂತ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಅಂಕಿತ್ ರಜಪೂತ್ ಅವರ ವಿಕೆಟ್ ಪಡೆದರು.

ಶುಕ್ರವಾರ ಬೆಳಿಗ್ಗೆ ತಮ್ಮ ಮೊದಲ ಓವರ್‌ನಲ್ಲಿ ಒಲಿವರ್ ಅವರು ಮಯಂಕ್ ಅಗರವಾಲ್ ಅವರ ವಿಕೆಟ್ ಪಡೆದಿದ್ದರು. ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಹನುಮವಿಹಾರಿ ತಮ್ಮ ಖಾತೆಗೆ ಮತ್ತೆ 10 ರನ್ ಸೇರಿಸಿ ಔಟಾದರು. ಅವರು ಎನ್ರಿಚ್ ನಾರ್ಜಿ ಹಾಕಿದ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಎರಡನೇ ಸ್ಲಿಪ್‌ನಲ್ಲಿದ್ದ ಜುಬೇರ ಹಮ್ಜಾ ಅವರಿಗೆ ಕ್ಯಾಚಿತ್ತರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 101 ಓವರ್‌ಗಳಲ್ಲಿ 345 (ಜಿ. ಹನುಮವಿಹಾರಿ 148. ಕೆ.ಎಸ್. ಭರತ್ 34, ಜಯಂತ್ ಯಾದವ್ 1, ಯಜುವೇಂದ್ರ ಚಾಹಲ್ 1, ಮೊಹಮ್ಮದ್ ಸಿರಾಜ್ 4, ಡನ್ ಒಲಿವರ್ 63ಕ್ಕೆ6, ಅಂಕಿತ್ ನಾರ್ಜಿ 69ಕ್ಕೆ2, ಸೆನುರನ್ ಮುತುಸಾಮಿ 51ಕ್ಕೆ1, ಡೇನ್ ಪಿಡ್ತ್ 46ಕ್ಕೆ1)

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !