ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಲರ್‌ಗೆ ರಾಜಸ್ಥಾನ ರಾಯಲ್ಸ್‌ ಮಾಲೀಕರಿಂದ ಕಪಾಳಮೋಕ್ಷ

Last Updated 13 ಆಗಸ್ಟ್ 2022, 19:39 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ತಾವು 2011ರಲ್ಲಿ ಐಪಿಎಲ್‌ನಲ್ಲಿ ಆಡುತ್ತಿದ್ದ ಫ್ರ್ಯಾಂಚೈಸಿ ಮಾಲೀಕರು ಕಪಾಳಮೋಕ್ಷ ಮಾಡಿದ್ದರು ಎಂದು ಆರೋಪಿಸಿದ್ದಾರೆ.

2011ರಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಟೇಲರ್ ಸೊನ್ನೆ ಸುತ್ತಿದ್ದರು. ಆಗ ತಂಡದ ಮಾಲೀಕರು ಕಪಾಳಮೋಕ್ಷ ಮಾಡಿದ್ದರು ಎಂದು ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್‌ ಅ್ಯಂಡ್ ವೈಟ್‌’ ನಲ್ಲಿ ಉಲ್ಲೇಖಿಸಿದ್ದಾರೆ.

‘195 ರನ್‌ಗಳ ಮೊತ್ತವನ್ನು ಬೆನ್ನಟ್ಟಿದ್ದೆವು. ನಾನು ಎಲ್‌ಬಿಡಬ್ಲ್ಯು ಆಗಿದ್ದೆ. ಅದರಿಂದಾಗಿ ಗುರಿ ಸನಿಹ ಸಾಗಲೂ ತಂಡಕ್ಕೆ ಆಗಿರಲಿಲ್ಲ. ಪಂದ್ಯದ ನಂತರ ನಾನೂ ಸೇರಿದಂತೆ ತಂಡದ ಆಟಗಾರರು, ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಹೋಟೆಲ್‌ನ ಮಹಡಿಯಲ್ಲಿರುವ ಬಾರ್‌ನಲ್ಲಿದ್ದರು. ಲಿಝ್ ಹರ್ಲೆ ಅವರು ವಾರ್ನಿ (ಶೇನ್ ವಾರ್ನ್) ಜೊತೆಗೆ ಇದ್ದರು.

‘ರಾಯಲ್ಸ್‌ ತಂಡದ ಮಾಲೀಕರು ನನ್ನ ಬಳಿ ಬಂದರು. ರಾಸ್ ನೀನು ಸೊನ್ನೆ ಸುತ್ತಲು ಲಕ್ಷಾಂತರ ರೂಪಾಯಿ ಹಣ ಕೊಡುತ್ತಿಲ್ಲ ನಾವು ಎಂದು ಹೇಳಿ ಕೆನ್ನೆಗೆ ಮೂರು, ನಾಲ್ಕು ಸಲ ಹೊಡೆದರು. ಅವರು ನಗುತ್ತಿದ್ದರು. ಅಷ್ಟೇನೂ ಜೋರಾಗಿ ಪೆಟ್ಟಾಗಿರಲಿಲ್ಲ. ಆದರೆ, ಅವರು ಹೊಡೆಯುವಂತೆ ನಟಿಸಿದ್ದರೆಂದು ಕೂಡ ಹೇಳುವಂತಿಲ್ಲ’ ಎಂದು ಟೇಲರ್ ಬರೆದಿದ್ದಾರೆ.

ಟೇಲರ್ 2008 ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ 2011ರಲ್ಲಿ ರಾಜಸ್ಥಾನ ತಂಡದಲ್ಲಿ ಆಡಿದ್ದರು. ನಂತರ ಡೆಲ್ಲಿ ಹಾಗೂ ಪುಣೆ ವಾರಿಯರ್ಸ್‌ ಇಂಡಿಯಾ ತಂಡದಲ್ಲಿ ಕೂಡ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT