‘ಇದು ಮರೆಯಬೇಕಾದ ಒಟಿಪಿ 49204084041’: ಸೆಹ್ವಾಗ್

ಅಡಿಲೇಡ್: ಅಡಿಲೇಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಂಡ ಟೀಮ್ ಇಂಡಿಯಾವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಒಟಿಪಿಯಂತಹ ಮರೆಯಬೇಕು ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗುವ ಮೂಲಕ ಇದುವರೆಗೆ ಭಾರತ ಒಂದು ಇನ್ನಿಂಗ್ಸ್ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಯಾವೊಬ್ಬ ಬ್ಯಾಟ್ಸ್ಮನ್ ಸಹ ಎರಡಂಕಿಗೆ ಹೋಗಲೇ ಇಲ್ಲ.
ಟೀಮ್ ಇಂಡಿಯಾದ 11 ಆಟಗಾರರು ಗಳಿಸಿದ 4,9,2,0,4,0,8,4,0,4,1 ರನ್ ಅನ್ನು ಒಟಿಪಿ ಎಂದು ಜರಿದಿರುವ ವೀರೇಂದ್ರ ಸೆಹ್ವಾಗ್, ಈ ಒಟಿಪಿಯನ್ನು ಯಾರೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಲು ಇಷ್ಟಪಡುವುದಿಲ್ಲ. "ಇದು ಮರೆಯಬೇಕಾದ ಒಟಿಪಿ 49204084041," ಟ್ವಿಟ್ಟರ್ನಲ್ಲಿ ಟೀಕಿಸಿದ್ದಾರೆ.
The OTP to forget this is 49204084041 .#INDvsAUSTest
— Virender Sehwag (@virendersehwag) December 19, 2020
ಮೊದಲ ಇನ್ನಿಂಗ್ಸ್ನಲ್ಲಿ 244 ರನ್ ಪೇರಿಸಿ 56 ರನ್ಗಳಿಂದ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಮಕಾಡೆ ಮಲಗಿದೆ. ಒಟ್ಟಾರೆ 62 ರನ್ ಲೀಡ್ ಜೊತೆ ಮೂರನೇ ದಿನದ ಆಟ ಆರಂಭಿಸಿದ ಭಾರತ ಬ್ಯಟ್ಸ್ಮನ್ಗಳು, ಆಸ್ಟ್ರೇಲಿಯಾ ವೇಗಿಗಳ ಎದುರು ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಿನ್ನೆಯ ಮೊತ್ತ ಕೇವಲ 27 ರನ್ ಸೇರಿಸಿ ಟೀಮ್ ಇಂಡಿಯಾ ಆಲೌಟ್ ಆಯಿತು. ಕೇವಲ 90 ರನ್ ಸುಲಭದ ಟಾರ್ಗೆಟ್ ಪಡೆ ಆಸಿಸ್ ಗೆಲುವು ದಾಖಲಿಸಿತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.