ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ನಸೀಮ್ ಶಾ ಅವರ ಪೂರ್ವಜರ ಮನೆಯ ಮೇಲಿನ ಗುಂಡಿನ ದಾಳಿಗೆ ಆಸ್ತಿ ವಿವಾದ ಕಾರಣವಾಗಿರಬಹುದು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

ಖೈಬರ್ ಪಖ್ತುಂಖ್ವಾದ ಲೋವರ್ ದಿರ್ ಜಿಲ್ಲೆಯಲ್ಲಿರುವ ನಸೀಮ್ ಅವರ ಪೂರ್ವಜರ ಮನೆಯನ್ನು ಗುರಿಯಾಗಿರಿಸಿಕೊಂಡು ಅಪರಿಚಿತ ದಾಳಿಕೋರರು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಹಾಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಾಗಿ ಪಾಕಿಸ್ತಾನ ತಂಡದ ಜೊತೆಗಿರುವ ನಸೀಮ್ ಮನೆಗೆ ವಾಪಾಸ್ಸಾಲ್ಲ.

ಘಟನೆ ಕುರಿತು ಲೋವರ್ ದಿರ್ನ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ತೈಮೂರ್ ಖಾನ್ ಮಾತನಾಡಿ, ‘ಆಸ್ತಿ ವಿವಾದ ಅಥವಾ ಸ್ಥಳೀಯ ದ್ವೇಷದ ಕಾರಣದಿಂದ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆಯಿಂದಾಗಿ ಈ ಪ್ರದೇಶದ ಶಾಂತಿಯುತ ವಾತಾವರಣ ಹದಗೆಡುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ತೈಮೂರ್ ಖಾನ್ ಅವರು ನಸೀಮ್ ಶಾ ತಂದೆ ಮತ್ತು ಅವರ ಇತರ ಸಂಬಂಧಿಕರನ್ನು ಭೇಟಿಯಾಗಿ ಘಟನೆ ಕುರಿತು ತನಿಖೆ ನಡೆಸಲು ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲ, ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.