ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಪೊಲಾರ್ಡ್: ಈಗ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್

Last Updated 15 ನವೆಂಬರ್ 2022, 9:40 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‌ನ ಖ್ಯಾತ ಕ್ರಿಕೆಟಿಗ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ, ಅವರನ್ನು ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.

ಹೌದು, ತಮ್ಮ ವಿದಾಯದ ಬಗ್ಗೆ ಪೊಲಾರ್ಡ್ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದು,ಇನ್ನಷ್ಟು ವರ್ಷ ಐಪಿಎಲ್‌ನಲ್ಲಿ ಆಡಬೇಕೆಂದುಕೊಂಡಿದ್ದೆ. ಆದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ನಿವೃತ್ತಿಯ ನಿರ್ಧಾರ ಮಾಡಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು. ಮುಂಬೈ ತಂಡದ ಪರ ಆಡಿರುವ ನನಗೆ ಐಪಿಎಲ್‌ನ ಬೇರಾವ ತಂಡದ ಪರವಾಗಿ ಮುಂಬೈ ವಿರುದ್ಧ ಆಡಲು ಇಷ್ಟಲಿಲ್ಲ. ಒಮ್ಮೆ ಇಂಡಿಯನ್ಸ್ ಆಟಗಾರನಾದರೆ, ಯಾವಾಗಲೂ ಮುಂಬೈ ಇಂಡಿಯನ್ಸ್ ಆಟಗಾರನೆ ಎಂದು ಹೇಳಿಕೊಂಡಿದ್ದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಇದರ ಬೆನ್ನಲ್ಲೇ, ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಐದು ಬಾರಿ ಚಾಂಪಿಯನ್ ಆದ ತಂಡದ ಆಧಾರ ಸ್ತಂಭಗಳಲ್ಲಿ ಪೊಲಾರ್ಡ್ ಸಹ ಒಬ್ಬರು. ಐಪಿಎಲ್‌ಗೆ ಅವರು ವಿದಾಯ ಹೇಳಿದ್ದು, ಮುಂಬರುವ ಐಪಿಎಲ್ ಸರಣಿಯಲ್ಲಿ ಅವರು ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್ ಪರ 13 ಆವೃತ್ತಿಗಳಲ್ಲಿ ಆಡಿರುವ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಅವರು ಬ್ಯಾಟಿಂಗ್ ತರಬೇತುದಾರರಾಗಿ ಮುಂಬೈ ಇಂಡಿಯನ್ಸ್ ಕುಟುಂಬದಲ್ಲೇ ಮುಂದುವರಿಯಲಿದ್ದಾರೆ. ಈ ಪೀಳಿಗೆ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಅವರು, 2010ರಲ್ಲಿ ಮುಂಬೈ ತಂಡ ಸೇರಿದ್ದರು. 5 ಐಪಿಎಲ್ ಟ್ರೋಫಿ ಮತ್ತು 2 ಚಾಂಪಿಯನ್ಸ್ ಲೀಗ್ ಸರಣಿ ಗೆಲುವಿನಲ್ಲಿ ತಂಡದ ಜೊತೆಗಿದ್ದರು ಎಂದು ಅದು ಹೇಳಿದೆ.

ಅವರು ಯಾವಾಗಲೂ ಮುಂಬೈ ಇಂಡಿಯನ್ಸ್ ಜೊತೆಯಲ್ಲೇ ಇರುತ್ತಾರೆ. ಅವರ ದಶಕಗಳ ಕ್ರಿಕೆಟ್ ಅನುಭವವನ್ನು ಮುಂಬೈ ತಂಡದ ಬ್ಯಾಟಿಂಗ್ ಶಕ್ತಿಯನ್ನು ಬಲಪಡಿಸಲು ಬಳಸುತ್ತಾರೆ ಎಂದು ಫ್ರಾಂಚೈಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT