ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ವಿದಾಯ ಹೇಳಿದ ಪ್ರಗ್ಯಾನ್ ಓಜಾ

Last Updated 26 ಫೆಬ್ರುವರಿ 2020, 12:13 IST
ಅಕ್ಷರ ಗಾತ್ರ

ಹೈದರಾಬಾದ್:ಟೀಂ ಇಂಡಿಯಾ ಸ್ಪಿನ್ನರ್‌ ಪ್ರಗ್ಯಾನ್ ಓಜಾ ಎಲ್ಲ ಮಾದರಿಯಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಓಜಾ, 16 ವರ್ಷಗಳ ಕಾಲವೃತ್ತಿಪರ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.2013ರ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದಿದ್ದರೂ, ಅವರು 2019ರ ವರೆಗೆ ದೇಶಿ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದಾರೆ.

ಭಾರತ ಪರಒಟ್ಟು 24 ಟೆಸ್ಟ್‌, 18 ಏಕದಿನ ಮತ್ತು 6 ಟಿ20 ಪಂದ್ಯ ಆಡಿರುವ ಸ್ಪಿನ್ನರ್‌, ಕ್ರಮವಾಗಿ 113, 21 ಮತ್ತು 10 ವಿಕೆಟ್‌ ಉರುಳಿಸಿದ್ದಾರೆ.

ನಿವೃತ್ತಿ ಸಂಬಂಧ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ‘ನಾನುಜೀವನದ ಮತ್ತೊಂದು ಹಂತಕ್ಕೆ ಸಾಗುವ ಸಮಯ ಇದು. ಪ್ರತಿಯೊಬ್ಬ ವ್ಯಕ್ತಿಯೂ ತೋರಿದ ಪ್ರೀತಿ ಮತ್ತು ಬೆಂಬಲ ನನ್ನೊಂದಿಗೆ ಯಾವಾಗಲು ಉಳಿದುಕೊಳ್ಳಲಿದೆ. ಅದು ಯಾವಾಗಲೂ ನನಗೆ ಪ್ರೇರಣೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

‘ಭಾರತದ ಕ್ರಿಕೆಟಿಗನಾಗಿ ಮತ್ತು ದೇಶವನ್ನು ಅತ್ಯಂತ ಎತ್ತರದ ಮಟ್ಟದಲ್ಲಿ ಪ್ರತಿನಿಧಿಸುವ ಕನಸನ್ನು ಚಿಕ್ಕವಯಸ್ಸಿನಲ್ಲೇ ಸಾಕಾರಗೊಳಿಸಿಕೊಂಡಿದ್ದೇನೆ’ ಎಂದೂ ತಿಳಿಸಿದ್ದಾರೆ.

ಓಜಾ ಅವರಬೌಲಿಂಗ್ ಶೈಲಿಯುಶಂಕಾಸ್ಪದ ರೀತಿಯಲ್ಲಿದೆ ಎಂದು 2014ರ ಡಿಸೆಂಬರ್‌ನಲ್ಲಿ ನಿರ್ಬಂಧ ಹೇರಲಾಗಿತ್ತು. ಬಳಿಕ 2015 ಜನವರಿಯಲ್ಲಿ ನಡೆದ ಬೌಲಿಂಗ್ ಪರೀಕ್ಷೆ ಬಳಿಕ ಅವರಿಗೆ ಬೌಲಿಂಗ್‌ ಮಾಡಲು ಅನುಮತಿ ನೀಡಲಾಗಿತ್ತು.

ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ಪರಒಟ್ಟು 92 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಓಜಾ, 89 ವಿಕೆಟ್‌ ಗಳಿಸಿದ್ದಾರೆ. 2010ರ ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ ಪಡೆದು ಪರ್ಪಲ್ ಕ್ಯಾಪ್‌ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT