ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಟೆಸ್ಟ್‌ ತಂಡದಲ್ಲಿ ಪುಕೊವ್‌ಸ್ಕಿ, ಗ್ರೀನ್‌

Last Updated 12 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಯುವ ಪ್ರತಿಭೆ ವಿಲ್ ಪುಕೊವ್‌ಸ್ಕಿ ಮತ್ತು ಕ್ಯಾಮರೂನ್ ಗ್ರೀನ್ ಒಳಗೊಂಡಂತೆ ಐವರು ಹೊಸಬರಿಗೆ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡುವ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ನೀಡಲಾಗಿದೆ. ಡಿಸೆಂಬರ್ 17ರಂದು ಆರಂಭವಾಗಲಿರುವ ಟೆಸ್ಟ್ ಸರಣಿಗೆ 17 ಮಂದಿಯ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.

ಟಿಮ್ ಪೇನ್ ತಂಡವನ್ನು ಮುನ್ನಡೆಸಲಿದ್ದು ಮಧ್ಯಮ ವೇಗಿ ಸೀನ್ ಅಬೋಟ್, ಲೆಗ್ ಸ್ಪಿನ್ನರ್ ಮಿಷೆಲ್ ಸ್ವೆಪ್ಸನ್ ಮತ್ತು ಆಲ್‌ರೌಂಡರ್ ಮೈಕೆಲ್ ನೆಸೆರ್‌ಗೆ ಸ್ಥಾನ ಲಭಿಸಿದೆ. ಇವರೆಲ್ಲರೂ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ ಎಂದೂ ಅದು ತಿಳಿಸಿದೆ. ಭಾರತ ಎದುರಿನ ಅಭ್ಯಾಸ ಪಂದ್ಯಕ್ಕೆ 19 ಮಂದಿಯ ಆಸ್ಟ್ರೇಲಿಯಾ ’ಎ‘ ತಂಡವನ್ನೂ ಆಯ್ಕೆ ಮಾಡಲಾಗಿದ್ದು ಇದರಲ್ಲಿ ಟೆಸ್ಟ್ ತಂಡದಲ್ಲಿರುವ ಒಂಬತ್ತು ಮಂದಿ ಇದ್ದಾರೆ.

ಟೆಸ್ಟ್ ತಂಡ: ಟಿಮ್ ಪೇನ್ (ನಾಯಕ), ಸೀನ್ ಅಬೋಟ್, ಜೋ ಬರ್ನ್ಸ್‌, ಪ್ಯಾಟ್ ಕಮಿನ್ಸ್‌, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್‌, ಟ್ರಾವಿಸ್ ಹೆಡ್, ಮಾರ್ನಸ್ ಲಾಬು ಶೇನ್, ನೇಥನ್ ಲಯನ್, ಮೈಕೆಲ್ ನೆಸೆರ್‌, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್‌ಸ್ಕಿ, ಸ್ಟೀವ್ ಸ್ಮಿತ್, ಮಿಷೆಲ್ ಸ್ಟಾರ್ಕ್‌, ಮಿಷೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.

'ಎ’ ತಂಡ: ಸೀನ್ ಅಬೋಟ್, ಆ್ಯಶ್ಟನ್ ಅಗರ್, ಜೋ ಬರ್ನ್ಸ್‌, ಜ್ಯಾಕ್ಸನ್ ಬರ್ಡ್‌, ಅಲೆಕ್ಸ್ ಕ್ಯಾರಿ, ಹ್ಯಾರಿ ಕಾನ್ವೆ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್‌, ಮೊಯಿಸಸ್‌ ಹೆನ್ರಿಕ್‌, ನಿಕ್ ಮ್ಯಾಡಿಸನ್, ಮಿಷೆಲ್ ಮಾರ್ಷ್‌, ಮೈಕೆಲ್ ನೆಸೆರ್, ಟಿಮ್ ಪೇನ್, ಜೇಮ್ಸ್‌ ಪ್ಯಾಟಿನ್ಸನ್, ವಿಲ್ ಪುಕೊವ್‌ಸ್ಕಿ, ಮಾರ್ಕ್ ಸ್ಟೆಕೆಟಿ, ವಿಲ್ ಸುದರ್ಲೆಂಡ್‌, ಮಿಷೆಲ್ ಸ್ವೆಪ್ಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT