ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PBKS vs GT: ಗುಜರಾತ್‌ಗೆ 143 ರನ್‌ಗಳ ಗೆಲುವಿನ ಗುರಿ ನೀಡಿದ ಪಂಜಾಬ್‌

Published 21 ಏಪ್ರಿಲ್ 2024, 13:38 IST
Last Updated 21 ಏಪ್ರಿಲ್ 2024, 13:38 IST
ಅಕ್ಷರ ಗಾತ್ರ

ಮುಲ್ಲನಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್‌ಗೆ ಪಂಜಾಬ್‌ 143 ರನ್‌ಗಳ ಗೆಲುವಿನ ಗುರಿ ನೀಡಿದೆ.

ಐಪಿಎಲ್‌ನ ಎರಡನೇ ಹಂತ ಆರಂಭವಾಗಿದ್ದು ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. 

ಟಾಸ್‌ ಗೆದ್ದ ಪಂಜಾಬ್‌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್‌ ಬೌಲಿಂಗ್‌ಗೆ ತತ್ತರಿಸಿದ ಪಂಜಾಬ್‌ ಕಡಿಮೆ ಮೊತ್ತಕ್ಕೆ ಕುಸಿಯಿತು.

20 ಓವರ್‌ಗಳಲ್ಲಿ ಪಂಜಾಬ್‌ ಎಲ್ಲಾ ವಿಕೆಟ್‌ ಕಳೆದುಕೊಂಡು 142 ರನ್‌ಗಳಿಸಿತು. ಪಿ.ಸಿಂಗ್‌ 35 ರನ್‌ ಹೊಡೆದು ಗಮನ ಸೆಳೆದರು. ಗುಜರಾತ್‌ ಪರ ಸಾಯಿ ಕಿಶೋರ್ 4 ವಿಕೆಟ್‌ ಪಡೆದರು. ಮೋಹಿತ್‌ ಶರ್ಮಾ 2 ವಿಕೆಟ್‌ ಪಡೆದರು.

ಅಂಕಪಟ್ಟಿಯಲ್ಲಿ ಕ್ರಮವಾಗಿ ಎಂಟು ಹಾಗೂ ಒಂಬತ್ತನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಮುಂದೆ ಆಡುವ ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಒತ್ತಡದಲ್ಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT